Advertisement

ಮಣ್ಣಿನ ಸೊಗಡು ಉಳಿಸಬೇಕು: ಡಾ|ಶಿವಕುಮಾರ್‌ಅಡ್ಕ

01:38 AM Jul 14, 2019 | sudhir |

ಮುಳ್ಳೇರಿಯ: ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ-ಕಲೆ-ಸಾಹಿತ್ಯ ಇರೋದು ಭಾರತ ದೇಶದಲ್ಲಿ ಅನ್ನೋದು ಭಾರತೀಯರಾದ ನಾವೆಲ್ಲ ಹೆಮ್ಮೆ ಪಟ್ಟುಕೊಳ್ಳಬೇಕು. ಎಂದು ಖ್ಯಾತ ವೈದ್ಯ‌ ಡಾ| ಶಿವಕುಮಾರ್‌ ಅಡ್ಕ ಹೇಳಿದರು. ಅವರು ರಂಗಚಿನ್ನಾರಿ ಕಾಸರಗೋಡು ಏರ್ಪಡಿಸಿದ ಶಿಕ್ಷಣಕ್ಕಾಗಿ ನೃತ್ಯ ‘ತಕಜಣುತಾ…’ ಅಭಿಯಾನವನ್ನು ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು.

Advertisement

ಸಂಸ್ಕೃತಿ ಕಲೆ ಉಳಿಸಿ ಬೆಳಸಬೇಕಾದ ಕರ್ತವ್ಯ ಪ್ರತಿಯೊಬ್ಬ ಭಾರತೀಯನದ್ದು ಮಾತ್ರವಲ್ಲ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಗೀತ, ನೃತ್ಯ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಗಡಿನಾಡಿನ ಹೆಮ್ಮೆಯ ಸಂಸ್ಥೆ‌ ರಂಗಚಿನ್ನಾರಿಯು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ‌ ಡಾ|ಶಿವಕುಮಾರ್‌ ಅವರು ಹೇಳಿದರು.

ಅಧ್ಯಕ್ಷತೆಯನ್ನು ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಗಣೇಶ್‌ ವತ್ಸ ವಹಿಸಿದ್ದರು.

ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಬಾಲಸುಬ್ರಹ್ಮಣ್ಯ ಭಟ್ ಕೋಳಿಕಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ನೃತ್ಯ ಪ್ರಾತ್ಯಕ್ಷಿಕೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next