Advertisement

ಕೆರೆ ಮಣ್ಣು ಸಾಗಾಟ: ಟ್ರಾಕ್ಟರ್‌ ವಶ

04:25 PM Mar 31, 2022 | Team Udayavani |

ಚಳ್ಳಕೆರೆ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗೊರ್ಲಕಟ್ಟೆ ಗ್ರಾಮದ ಕೆರೆಯಂಗಳದಲ್ಲಿ ಯಾವುದೇ ಅನುಮತಿ ಪಡೆಯದೆ ಕೆರೆಯ ಮಣ್ಣನ್ನು ತೆಗೆಯುತ್ತಿದ್ದ ಒಂದು ಜೆಸಿಬಿ, ಮಣ್ಣು ತುಂಬಿದ ಟ್ರಾಕ್ಟರ್‌ ಮತ್ತು ಒಂದು ಖಾಲಿ ಟ್ರಾಕ್ಟರ್‌ ನ್ನು ತಹಶೀಲ್ದಾರ್‌ ಎನ್‌. ರಘುಮೂರ್ತಿ ವಶಕ್ಕೆ ಪಡೆದು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್‌ ಎನ್‌. ರಘುಮೂರ್ತಿ ಮತ್ತು ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಜೆಸಿಬಿ ಸಹಾಯದಿಂದ ಕೆರೆಯ ಫಲವತ್ತಾದ ಮಣ್ಣನ್ನು  ಟ್ರಾಕ್ಟರ್‌ ಗೆ ತುಂಬುವ ಸಂದರ್ಭದಲ್ಲಿ ಟ್ರಾಕ್ಟರ್‌ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.

Advertisement

ನಂತರ ಅವುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಯಿತು. ಕಂದಾಯ ಇಲಾಖೆ ಅನುಮತಿ ಇಲ್ಲದೆ ತಾಲೂಕಿನ ಯಾವುದೇ ಕೆರೆಯಂಗಳದಲ್ಲಿ ಮಣ್ಣು ತುಂಬಿ ಸಾಗಿಸುವ ವಾಹನಗಳು ಮತ್ತು ಮಾಲೀಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮಣ್ಣಿನ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಗ್ರಾಮ ಲೆಕ್ಕಿಗ, ಕಂದಾಯಾಧಿ ಕಾರಿಯನ್ನು ಭೇಟಿ ಮಾಡಿ ಅನುಮತಿ ಪಡೆದ ನಂತರ ಮಾತ್ರ ಮಣ್ಣು ಸಾಗಾಟಕ್ಕೆ ಅವಕಾಶ ನೀಡಲಾಗುವುದು. ಈ ಹಿಂದೆ ದಂಡ ವಿಧಿಸಲಾಗುತ್ತಿತ್ತು. ಆದರೆ ದಂಡ ಕಟ್ಟಿ ಮತ್ತೆ ಸುಲಭವಾಗಿ ಈ ದಂಧೆಗೆ ಇಳಿಯುತ್ತಿದ್ದರು. ಇದನ್ನು ನಿಯಂತ್ರಿಸಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಹಶೀಲ್ದಾರರು ತಿಳಿಸಿದರು.

ದಾಳಿ ಸಂದರ್ಭದಲ್ಲಿ ಪಿಎಸ್‌ಐ ಮಹೇಶ್‌ ಗೌಡ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗ ಪ್ರಕಾಶ್‌, ರಾಘವೇಂದ್ರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next