Advertisement

ಲಾಕ್‌ಡೌನ್‌ ತಂದ ಲಕ್‌

09:37 PM Nov 23, 2020 | Suhan S |

ಈ ಕೋವಿಡ್ ಬ್ಯಾನಿ ಬಂದ್ಮೇಲೆ ಎಲ್ಲಾ ದಂಧೆ ಬಂದ್‌ ಆಗ್ಯಾವ್‌ ಸರ್‌, ಆಗ ಕೆಲ್ಸವಿಲ್ಲಾಂತ ಎಲ್ಲಾ ಮನ್ಯಾಗ್‌ ಲಾಕ್‌ ಆಗಿ ಕುಂತಿದ್ದರು. ಆದ್ರೆ ನಾ ಮಾತ್ರ ಮನ್ಯಾಗ್‌ ಸುಮ್ಮನೆಕುಂತಿಲ್ಲ ನೋಡ್ರಿ. ಏಪ್ರಿಲ್‌ನಿಂದ ಆಗಸ್ಟ್ ತನಕ ನಾಕೆಲ್ಸಾ ಮಸ್ತ್ ಮಾಡಿದಾ, ಬ್ಯಾಸಕಿದಾಗ ಹಾಳಾಗಿದ್ದು ಲಾಕ್‌ಡೌನ್‌ದಾಗ ಭರ್ತಿ ಆಗ್ಯಾದ್‌, ಮನ್ಯಾಗ್‌ ಕುಂತೇ ಇಷ್ಟುಕೆಲ್ಸ ಮಾಡಿದ್ದೇನೆ ಎನ್ನುತ್ತಾರೆ, ಈರಪ್ಪಾಕುಂಬಾರ.

Advertisement

ಈರಪ್ಪಾ ಅವರು ಬೀದರ್‌ ಜಿಲ್ಲೆಯ ಔರಾದ ಪಟ್ಟಣದ ನಿವಾಸಿ, ಇವರ ವೃತ್ತಿಕುಂಬಾರಿಕೆ. ಮಣ್ಣಿನ ಉತ್ಪನ್ನಗಳನ್ನು ಸಿದ್ಧಪಡಿಸುವುದು, ಅವುಗಳನ್ನುಚಿಲ್ಲರೆ ಅಥವಾ ಸಗಟು ವ್ಯಾಪಾರಿಗಳಿಗೆ ತಕ್ಕಬೆಲೆಗೆ ಮಾರಾಟ ಮಾಡುವುದು ಅವರಕಸುಬು.ಪ್ರತಿ ವರ್ಷ ಬೇಸಿಗೆಕಾಲದಲ್ಲಿ ಅಗತ್ಯವಾಗಿ ಬೇಕಾಗುವ ತಂಪು ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ ಈ ಸಲ ಕೋವಿಡ್‌ ಲಾಕ್‌ಡೌನ್‌ನಿಂದ, ಮಣ್ಣಿನ ಪರಿಕರಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿದ್ದವು. “ಲಾಕ್‌ಡೌನ್‌ ಸಂದರ್ಭದಲ್ಲಿ ಬಹುತೇಕ ಜನರುಕೆಲಸ ಕಳೆದುಕೊಂಡಿದ್ದರು.ಕೈಗಾರಿಕೆ,ಕಂಪನಿ, ಹೋಟೆಲ್‌ ಸೇರಿದಂತೆ ಎಲ್ಲವೂ ಬಂದ್‌ ಆಗಿದ್ದವು. ಇದನ್ನೆಲ್ಲಾ ಗಮನಿಸಿದಾಗ ನನಗೂ ಒಮ್ಮೆ ಭಯವಾಗಿದ್ದು ನಿಜ. ಆದರೆ ನಾನು ಮಡಿಕೆ ತಯಾರಿಸುವುದನ್ನು ನಿಲ್ಲಿಸಲಿಲ್ಲ.ಕಾಲಕ್ರಮೇಣ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಬರತೊಡಗಿತು.ಕಳೆದ ಏಪ್ರಿಲ್‌ ನಿಂದ ಸೆಪ್ಟೆಂಬರ್‌ವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ರೂಪಾಯಿಗಳ ಸಂಪಾದನೆ ಮಾಡಿದ್ದೇನೆ’ ಅನ್ನುತ್ತಾರೆ ಈರಪ್ಪ.

ಪ್ಲಾಸ್ಟಿಕ್‌, ಅಲ್ಯುಮಿನಿಯಂ, ಸ್ಟೀಲ್‌ ಬಳಕೆಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮಣ್ಣಿನಕಲಾಕೃತಿಗಳ ಬಳಕೆ ತೀರಾಕಡಿಮೆಯಾಗಿದೆ. ಆದರೆ ಮದುವೆ, ಮುಂಜಿ, ಹಬ್ಬ, ಹುಣ್ಣಿಮೆ ಸೇರಿ ಇತರೆಕಾರ್ಯಗಳಿಗೆ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆಯಿದೆ. ಬೆವರು ಸುರಿಸಿ ದುಡಿದರೆ ಹೀಗೂ ಲಾಭ ಗಳಿಸಬಹುದು ಎನ್ನುವುದಕ್ಕೆ ಈರಪ್ಪಾಕುಂಬಾರ ಅವರ ವೃತ್ತಿ ಒಂದು ತಾಜಾ ಉದಾಹರಣೆ. ಇವತ್ತಿನ ದಿನಗಳಲ್ಲಿ ಕುಂಬಾರಿಕೆ ಅನ್ನುವುದು ಲಾಭದಾಯಕ ಉದ್ಯೋಗ ಅಲ್ಲದೆ ಇದ್ರೂ ಜೀವನ ನಿರ್ವಹಣೆಗೆ ಸಹಕಾರಿ ಎಂಬುದಂತೂ ನಿಜ.

 

-ಬಾಲಾಜಿ ಕುಂಬಾರ, ಚಟ್ನಾಳ

Advertisement
Advertisement

Udayavani is now on Telegram. Click here to join our channel and stay updated with the latest news.

Next