Advertisement
ಭಾರತದ ಪ್ರಜೆಗಳಿಗೆ ಪಿಒಕೆಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಚೀನದಲ್ಲಿ ವಾಸಿಸುತ್ತಿರುವ ಭರತವಂಶಿ ವೆಂಕಟೇಶ್ ರಾಮನ್ ಮತ್ತು ಅವರ ಪತ್ನಿ ಚೀನದಿಂದ ಪಾಸ್‌ಪೋರ್ಟ್ ಪಡೆದು ಪಿಒಕೆಗೆ ಆಗಮಿಸಿದ್ದಾರೆ. ಈ ದಂಪತಿಗಳು ಹಾಂಗ್ ಕಾಂಗ್‌ನಿಂದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫರಾಬಾದ್‌ಗೆ ಬಂದು ಶಾರದಾ ದೇಗುಲ ತಲುಪಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿ ಪವಿತ್ರ ಮಣ್ಣಿನೊಂದಿಗೆ ಹಾಂಕಾಂಗ್ ಮೂಲಕ ದಿಲ್ಲಿಗೆ ಆಗಮಿಸಿದ್ದರು. ಇಲ್ಲಿ ಅವರು ಈ ಮಣ್ಣನ್ನು ಕರ್ನಾಟಕದ ನಿವಾಸಿ ಮತ್ತು ಸೇವಾ ಶಾರದಾ ಪೀಠದ ಸಕ್ರಿಯ ಸದಸ್ಯೆ ಅಂಜನಾ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಅವರು ಬುಧವಾರ ಬೆಳಗ್ಗೆ ಅಯೋಧ್ಯೆಗೆ ಮಣ್ಣಿನೊಂದಿಗೆ ಆಗಮಿಸಿದ್ದು, ಭೂಮಿ ಪೂಜೆಗೆ ಸಮರ್ಪಿಸಲಾಗಿದೆ.
Related Articles
ಕರ್ನಾಟಕದ ಅಂಜನಾ ಪರ್ವತದಿಂದ ಪವಿತ್ರ ನೀರನ್ನು ಅಂಜನಾ ಶರ್ಮ ಅವರು ರಾಮ ಜನ್ಮಭೂಮಿಗೆ ಅರ್ಪಿಸಿದ್ದಾರೆ. ಅಂಜನಾ ಪರ್ವತವನ್ನು ರಾಮನ ಭಕ್ತ ಹನುಮನ ಜನ್ಮಸ್ಥಳವೆಂದು ಗುರುತಿಸಲಾಗುತ್ತದೆ. ಶಿವಲಿಂಗವನ್ನು ರಾವಣ ಲಂಕೆಗೆ ಕೊಂಡೊಯ್ಯಲು ಬಳಸಿದ್ದು ಗೋಕರ್ಣದ ದಾರಿಯನ್ನು. ಹೀಗಾಗಿ ಗೋಕರ್ಣದ ಪವಿತ್ರ ನೀರನ್ನೂ ಅಯೋಧ್ಯೆಗೆ ತಲುಪಿಸಲಾಗಿದೆ.
Advertisement