Advertisement

ಶಿರಾಡಿಘಾಟ್‌ನಲ್ಲಿ ಮಣ್ಣು ತೆರವು ಕಾರ್ಯಾಚರಣೆ ಸ್ಥಗಿತ

11:21 PM Aug 10, 2019 | Lakshmi GovindaRaj |

ಮಂಗಳೂರು: ಮಂಗಳೂರು -ಹಾಸನ ರೈಲು ಮಾರ್ಗದ ಶಿರಾಡಿ ಘಾಟ್‌ನಲ್ಲಿ ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ಮಧ್ಯೆ ಭೂಕುಸಿತ ಮುಂದುವರಿದಿದ್ದು ಪ್ರತಿಕೂಲ ಹವಾಮಾನ ಹಿನ್ನಲೆಯಲ್ಲಿ ರೈಲ್ವೆ ಹಳಿಗಳ ಮೇಲೆ ಬಿದ್ದಿರುವ ಮಣ್ಣು ಹಾಗೂ ಕಲ್ಲುಗಳನ್ನು ತೆರೆವುಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

Advertisement

ಸ್ಥಳದಿಂದ ಎಲ್ಲ ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ತೆರವುಗೊಳಿಸಲಾಗಿದ್ದು, ಸುಬ್ರಹ್ಮಣ್ಯ ರೋಡ್‌ ರೈಲ್ವೆ ನಿಲ್ದಾಣದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಈ ರೈಲುಮಾರ್ಗದಲ್ಲಿನ ಎಲ್ಲ ರೈಲುಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್‌ನಲ್ಲಿ ಪ್ರಯಾಣಿಕರ ವಾಹನ, ಅಗತ್ಯ ವಸ್ತುಗಳ ಸಾಗಣೆ ವಾಹನ ಹೊರತುಪಡಿಸಿ, ಉಳಿದ ವಾಹನಗಳ ಸಂಚಾರ ಬಂದ್‌ ಮಾಡಲಾಗಿದೆ.

ಶಿವಮೊಗ್ಗ-ಬೆಂಗಳೂರು ಸಂಚಾರ ಬಂದ್‌
* ಭದ್ರಾವತಿ- ಶಿವಮೊಗ್ಗ ರಸ್ತೆ ಸಂಪೂರ್ಣ ಜಲಾವೃತ. ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚಾರ ಬಂದ್‌.

* ಶರಾವತಿಯಲ್ಲಿ ಪ್ರವಾಹ, ಸಿಗಂದೂರಿಗೆ ಭಕ್ತರು ಬರದಂತೆ ದೇವಾಲಯದಿಂದ ಮನವಿ.

* ಹಸಿರುಮಕ್ಕಿ- ಸಿಗಂದೂರು ರಸ್ತೆ ಬಂದ್‌, ಕುಂದಾಪುರ, ಮಣಿಪಾಲ್‌ಗೆ ತೆರಳಲು ಇದ್ದ ಮಾರ್ಗ ಬಂದ್‌.

Advertisement

* ಶಿವಮೊಗ್ಗ- ತೀರ್ಥಹಳ್ಳಿ- ಉಡುಪಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌.

* ಶಿವಮೊಗ್ಗ- ಹೊನ್ನಾಳಿ ಸಂಚಾರ ಬಂದ್‌.

* ತಾಳಗುಪ್ಪ- ಶಿವಮೊಗ್ಗ-ಮೈಸೂರು- ತಾಳಗುಪ್ಪ ರೈಲು ಸಂಚಾರ ರದ್ದು.

* ರಾಣೇಬೆನ್ನೂರು – ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌.

* ಕೊಚ್ಚಿಹೋದ ಕಳಸ-ಹೊರನಾಡು ರಸ್ತೆ, ಹೊರನಾಡಿಗೆ ಸಂಚಾರ ಬಂದ್‌.

* ಶಿಕಾರಿಪುರ-ಶಿರಾಳಕೊಪ್ಪ -ಸೊರಬ ರಸ್ತೆ ಸಂಪರ್ಕ ಕಡಿತ. ಶಿವಮೊಗ್ಗ-ಮಂಡಗದ್ದೆ-ತೀರ್ಥಹಳ್ಳಿ ರಸ್ತೆ ಕೂಡ ಜಲಾವೃತ. ಮಣಿಪಾಲ್‌ಗೆ ಹೋಗುವವರು ಶಿವಮೊಗ್ಗ-ರಿಪ್ಪನ್‌ಪೇಟೆ- ನಗರ ಮಾರ್ಗವನ್ನು ಬಳಸಬಹುದಾಗಿದೆ. ಸೂಡೂರು ಗೇಟ್‌ ಸೇತುವೆ ಮುಳುಗಡೆಯಾದ ಕಾರಣ ಹೊಸನಗರ-ಶಿವಮೊಗ್ಗ ಸಂಪರ್ಕ ಕಂಡಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next