Advertisement

ಸಾಫ್ಟ್ ವೇರ್‌ ಇಂಜಿನಿಯರ್‌ಗಳು ದಯವಿಟ್ಟು ನನ್ನ ಮದುವೆಯಾಗಬೇಡಿ: ಜಾಹಿರಾತು ನೀಡಿದ ಯುವತಿ

07:04 PM Sep 20, 2022 | Team Udayavani |

ಮದುವೆಗೆ ವರ ಬೇಕು, ವಧು ಬೇಕು ಎಂದು ದಿನಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿರುತ್ತೀರಿ. ಅದೇ ರೀತಿಯ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ. ಎಂಬಿಎ ವಿದ್ಯಾಭ್ಯಾಸ ಮಾಡಿರುವ 24 ವರ್ಷದ ಸುಂದರ ಯುವತಿಗೆ ವರ ಬೇಕಂತೆ.

Advertisement

ಬಿಸಿನೆಸ್‌ ಕುಟುಂಬದ ಶ್ರೀಮಂತ ಯುವತಿ ಆಕೆ. “ಐಎಎಸ್‌/ಐಪಿಎಸ್‌ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಯುವತಿಯನ್ನು ಮದುವೆಯಾಗಲು ಮುಂದೆ ಬರಬಹುದು. ಆದರೆ, ಸಾಫ್ಟ್ ವೇರ್‌ ಇಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

ಇಂಜಿನಿಯರ್‌ಗಳಿಗಿದ್ದ ಈ ವಿಶೇಷ ಸೂಚನೆ ಅನೇಕರ ಕಣ್ಣಿಗೆ ಬಿದ್ದಿದೆ. ಇದು ವೈರಲ್‌ ಆಗಿದ್ದು, “ಇಂಜಿನಿಯರ್‌ಗಳ ಭವಿಷ್ಯ ಇಷ್ಟೇ ಕಣ್ರೀ’ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next