Advertisement

ಸಾಫ್ಟ್ವೇರ್‌ ಎಫೆಕ್ಟ್: ನ್ಯಾಯ ಕುದುರಿತು!

06:50 AM Aug 21, 2017 | Harsha Rao |

ಶಿವಮೊಗ್ಗ: ಒಂದು ಕಾಲದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿ ದೊರಕಿತು ಎಂದರೆ ಲೈಫ್‌ ಸೆಟಲ್‌ ಎಂಬ ವಾತಾವರಣವಿತ್ತು. ಕಾರಣ ಆ ಅಂಗಡಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಿಗುತ್ತಿದ್ದ ಲಾಭ! ಆದರೆ ಇದೀಗ ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಸಾಫ್ಟ್‌ವೇರ್‌ ಅಳವಡಿಕೆ ಕಡ್ಡಾಯ ಮಾಡುತ್ತಿದ್ದಂತೆ ನ್ಯಾಯಬೆಲೆ ಅಂಗಡಿಯ ಖದರ್‌ ಇಳಿದಿದೆ. ಆದರೆ ಸರ್ಕಾರಕ್ಕೆ ಮಾತ್ರ ಕೋಟ್ಯಂತರ ರೂ. ಉಳಿತಾಯವಾಗುತ್ತಿದೆ.

Advertisement

ಸರ್ಕಾರದ ಈ ನಿರ್ಧಾರಕ್ಕೆ ಆರಂಭದಲ್ಲಿ ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ 36 ಅಂಗಡಿಯವರು ಹೈಕೋರ್ಟ್‌ ಮೊರೆ ಹೋಗಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಆದರೆ ಸರ್ಕಾರ ತನ್ನ ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡಿದ್ದು, ಬೆನ್ನಲ್ಲೇ ನ್ಯಾಯಾಲಯ ಕೂಡ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ ಶೇ. 50 ರಷ್ಟು ನ್ಯಾಯಬೆಲೆ ಅಂಗಡಿಗಳು ಪಿಒಎಸ್‌ ಸಾಫ್ಟ್‌ವೇರ್‌ ಅಳವಡಿಸಿಕೊಂಡಿವೆ.

ಆರಂಭದಲ್ಲಿ ನಗರ ಪ್ರದೇಶಗಳ ಖಾಸಗಿ ಪಡಿತರ ವಿತರಕರು ಇದಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸಿದರು. ಆದರೆ ಇಲಾಖೆ ಪ್ರಯತ್ನದಿಂದ ಇದೀಗ ಇವರ ವಿರೋಧ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ನೆಟ್‌ವರ್ಕ್‌
ಸಮಸ್ಯೆಯಿಂದಾಗಿ ಈ ಸಾಫ್ಟ್‌ವೇರ್‌ ಅಳವಡಿಸಲು ಸಾಧ್ಯವಾಗುತ್ತಿಲ್ಲ.

ಏನಿದು ಪಿಒಎಸ್‌?: ಇದುವರೆಗೆ ಪ್ರತಿ ಏರಿಯಾದ ನ್ಯಾಯಬೆಲೆ ಅಂಗಡಿಗಳಿಗೆ ಆಯಾ ಪ್ರದೇಶದಲ್ಲಿನ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಪಡಿತರ ಬಿಡುಗಡೆಯಾಗುತ್ತಿತ್ತು. ಆದರೆ ಎಷ್ಟೋ ಮಂದಿ ಈ ಪಡಿತರ ಖರೀದಿಸಲು ಬರುತ್ತಲೇ ಇರುತ್ತಿರಲಿಲ್ಲ.

ವಿರೋಧವೇಕೆ? :ಬಿಪಿಎಲ್‌ ಪಡಿತರ ಚೀಟಿದಾರರೆಲ್ಲರೂ ಬಡವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಸತತವಾಗಿ ಕೆಲಸ ಮಾಡುವುದರಿಂದ ಇವರ ಹೆಬ್ಬೆಟ್ಟುಗಳಲ್ಲಿನ ರೇಖೆಗಳು ಅಳಿಸಿ ಹೋಗಿರುತ್ತದೆ. ಹೀಗಾಗಿ ಬಯೋಮೆಟ್ರಿಕ್‌
ಮಷಿನ್‌ ಇದನ್ನು ಗುರುತಿಸುವುದಿಲ್ಲ ಎನ್ನುವುದು ನ್ಯಾಯಬೆಲೆ ಮಾಲೀಕರ ಸಂಘದ ಮಾತು. ಜೊತೆಗೆ ಈ ವ್ಯವಸ್ಥೆಗೆ
ಇಂಟರ್‌ನೆಟ್‌ ಬೇಕಿದ್ದು, ಇದು ಸರಿಯಾಗಿ ಸಿಗುವುದಿಲ್ಲ. ಇದರಿಂದ ಕೂಲಿ ಕಾರ್ಮಿಕರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇವರಿಗೆ ಕೆಲಸಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ನಾವು ಇದನ್ನು ವಿರೋಧಿಸುತ್ತಿ ದ್ದೇವೆಯೇ ಹೊರತು ಬೇರೇನಿಲ್ಲ ಎನ್ನುತ್ತಾರೆ ಸಂಘದ ಮುಖಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next