Advertisement
ಆದಾಗ್ಯೂ, ಬಿಕ್ಕಟ್ಟನ್ನು ಸೃಷ್ಟಿಸಿದ್ದು ನೇಪಾಲವೇ ಎನ್ನುವುದು ನಿರ್ವಿವಾದ. ಚೀನದ ಕುಮ್ಮಕ್ಕಿನಿಂದಾಗಿ ಭಾರತದೊಂದಿಗೆ ಗಡಿ ತಗಾದೆ ತೆಗೆದ ಕೆ.ಪಿ. ಓಲಿ, ಭಾರತದ ಪ್ರದೇಶಗಳಾದ ಲಿಪುಲೇಖ್, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶಗಳು ನೇಪಾಲಕ್ಕೆ ಸೇರಿದವೆಂದು ಸಾರುತ್ತಾ, ಜೂನ್ ತಿಂಗಳಲ್ಲಿ ಹೊಸ ನಕ್ಷೆಯನ್ನೂ ಬಿಡುಗಡೆ ಮಾಡಿದರು. ತಮ್ಮ ರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾದದ್ದಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದರು, ಭಾರತವನ್ನು ಮನದಲ್ಲಿಟ್ಟುಕೊಂಡೇ ನೇಪಾಲದ ವಿವಾಹ ಕಾನೂನಿನಲ್ಲಿ ಬದಲಾಣೆ ತಂದರು. ಇಷ್ಟಕ್ಕೆ ನಿಲ್ಲದೆ, ನಿಜವಾದ ರಾಮಜನ್ಮಭೂಮಿ ನೇಪಾಲದಲ್ಲಿದೆ ಎನ್ನುವ ಮೂಲಕ ಭಾರತೀಯರ ಹಾಗೂ ನೇಪಾಲಿಯರ ಮುನಿಸಿಗೆ ಪಾತ್ರರಾದರು. ಮೊದಲಿಂದಲೂ ಓಲಿ ನೇತೃತ್ವದ ಕಮ್ಯುನಿಸ್ಟ್ ಸರಕಾರ ಚೀನಪರ ಧೋರಣೆಯನ್ನೇ ಪ್ರದರ್ಶಿಸುತ್ತಾ ಬರುತಿತ್ತಾದರೂ, ಅದು ಹಿಂದೆಂದೂ ಈ ರೀತಿಯಲ್ಲಿ ಭಾರತ ವಿರೋಧಿ ಮನಃಸ್ಥಿತಿಯನ್ನು ಪ್ರದರ್ಶಿಸಿರಲಿಲ್ಲ. ಓಲಿಯವರ ಈ ವರ್ತನೆ ಭಾರತಕ್ಕಷ್ಟೇ ಅಲ್ಲ, ಖುದ್ದು ನೇಪಾಳಿಯರಲ್ಲಿ ಹಾಗೂ ಆಡಳಿತ ಪಕ್ಷದ ನಾಯಕರಲ್ಲೇ ಅಚ್ಚರಿ-ಅಸಮಾಧಾನಕ್ಕೆ ಕಾರಣವಾಗಿದೆ. ಬಹುಕಾಲದಿಂದಲೂ ನೇಪಾಲಕ್ಕೆ ಸಕಲ ರೀತಿಯಲ್ಲೂ ಸಹಾಯ ಮಾಡುತ್ತಾ ಬಂದ, ಸರ್ವಋತು ಮಿತ್ರನೆಂದು ಕರೆಸಿಕೊಳ್ಳುವ ಭಾರತದಿಂದ ದೂರವಾಗಿ, ಚೀನದ ಜೋಳಿಗೆಗೆ ನೇಪಾಲವನ್ನು ಹಾಕುವ ಪ್ರಯತ್ನವಿದು ಎಂದೇ ಜೋರಾಗಿ ಅಸಮಾಧಾನ ಭುಗಿಲೆದ್ದಿದೆ. ಈ ಅಸಮಾಧಾನವು ಓಲಿಯವರನ್ನು ಕುರ್ಚಿ ಕಳೆದುಕೊಳ್ಳುವ ಹಂತಕ್ಕೆ ಹೋಗಿ ನಿಲ್ಲಿಸಿದೆ.
Advertisement
ನೇಪಾಲದ ಮೃದು ಮಾತು; ಬಿಕ್ಕಟ್ಟು ಶಮನವಾಗಲಿ
10:28 PM Aug 18, 2020 | mahesh |
Advertisement
Udayavani is now on Telegram. Click here to join our channel and stay updated with the latest news.