Advertisement

ಮುಟ್ಟಿದರೆ ಮೃದು ರೇಷ್ಮೆ ಬಟ್ಟೆ

06:37 PM Nov 17, 2017 | |

ರೇಷ್ಮೆ ಎಂದೊಡನೆ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದು ರೇಷ್ಮೆ ಸೀರೆಗಳು. ಈ ರೇಷ್ಮೆಯು ಕೆಲವು ನಿರ್ದಿಷ್ಟ ಕೀಟಗಳ ಲಾರ್ವಾಗಳು ಕೋಶಾವಸ್ಥೆಗೆ ಪ್ರವೇಶಿಸುವ ಮುನ್ನ ಕೋಶಾವರಣ (ಕಕೂನ್‌) ಗಳಿಂದ ಉತ್ಪಾದಿಸುವ ಎಳೆಗಳಾಗಿದ್ದು ಇವುಗಳನ್ನು  ರೇಷ್ಮೆ ಎಳೆಗಳು ಎನ್ನಲಾಗುತ್ತದೆ. ವಿಶಿಷ್ಟ ಜಾತಿಗಳ ಪತಂಗಗಳ ಕಕೂನುಗಳು ಉತ್ಪಾದಿಸುವ ಹೊಳಪುಳ್ಳ ತಂತುರೂಪದ ದಾರಗಳೇ ರೇಷ್ಮೆ ದಾರಗಳು. ಇವುಗಳು ಸ್ವಾಭಾವಿಕ ಹೊಳಪು ಮತ್ತು ಬಿಳಿ ಅಥವಾ ಕೆನೆ ಬಣ್ಣದ ಕಾಂತಿಯನ್ನು ಹೊಂದಿರುತ್ತವೆ. ಈ ಲಾರ್ವಾದ ರೂಢ ನಾಮವೇ ರೇಷ್ಮೆ ಹುಳು. ಈ ಬಗೆಯ ದಾರಗಳಿಂದ ನೇಯ್ಗೆಗೊಂಡು ತಯಾರಾಗುವ ಬಟ್ಟೆಗಳೇ ರೇಷ್ಮೆ ಬಟ್ಟೆಗಳು. ಬಿಳಿಯ ರೇಷ್ಮೆ ನೂಲುಗಳಿಗೆ ಯಾವುದೇ ಬಣ್ಣಗಳನ್ನು ಹಾಕಬಹುದು ಮತ್ತು ನಂತರ ಅವುಗಳನ್ನು ವಿವಿಧ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುವುದು. ಎರಿ ರೇಷ್ಮೆ, ಮಲೆºರಿ ರೇಷ್ಮೆ ಇನ್ನಿತರ ಬಗೆಯ ರೇಷ್ಮೆ ಬಟ್ಟೆಗಳು ದೊರೆಯುತ್ತವೆ.  ಇಂತಹ ರೇಷ್ಮೆ ಬಟ್ಟೆಗಳಿಂದ ಕೇವಲ ಸೀರೆಗಳಷ್ಟೇ ಅಲ್ಲದೆ ಪುರುಷರಿಗೆ ಮತ್ತು ಮಹಿಳೆಯರ ಕುರ್ತಾಗಳು, ರೇಷ್ಮೆ ದುಪ್ಪಟ್ಟಾಗಳು ಇನ್ನು ಹತ್ತು ಹಲವಾರು ಬಗೆಯ ದಿರಿಸುಗಳನ್ನು ತಯಾರಿಸಬಹುದಾಗಿದೆ.

Advertisement

1    ರೇಷ್ಮೆ ಸೀರೆಗಳು: ಹೆಂಗಳೆಯರ ಕಣ್ಮನ ಸೆಳೆಯುವ ಸೀರೆಗಳಲ್ಲಿ ರೇಷ್ಮೆ ಸೀರೆಗಳು ಅಗ್ರಗಣ್ಯವಾದುದು. ಎಷ್ಟೇ ಡಿಸೈನರ್‌ ಸೀರೆಗಳಿದ್ದರೂ ಕೂಡ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಎಲ್ಲರಿಗೂ ಪ್ರಿಯವಾದುದು. ಇವುಗಳಲ್ಲಿ ಕಾಂಜೀವರಮ…, ಬನಾರಸಿ ಇನ್ನಿತರೆ ಬಗೆಯ ರೇಷ್ಮೆ ಸೀರೆಗಳು ದೊರೆಯುತ್ತವೆ. ಇತ್ತೀಚೆಗೆ ಇವುಗಳಲ್ಲಿಯೂ ಹಲವು ಪ್ರಯೋಗಗಳು ನಡೆಯುತ್ತಿದ್ದು ವಿಧ ವಿಧವಾದ ಮಾದರಿಯ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಹಾಫ್-ಅಂಡ್‌- ಹಾಫ್ ಸೀರೆಗಳೂ ಕೂಡ ರೇಷ್ಮೆ ಸೀರೆಗಳಲ್ಲಿ ದೊರೆಯುತ್ತವೆ. ಅಲ್ಲದೆ ರೇಷ್ಮೆ ಸೀರೆಗಳ ಮೇಲೆ ಕುಂದನ್‌ ವರ್ಕ್‌ ಇರುವಂತಹ ಮಾದರಿಗಳು ದೊರೆಯುತ್ತಿದ್ದು, ಬೇಕಾದ ಬಣ್ಣಗಳಲ್ಲಿ ದೊರೆಯುತ್ತವೆ. ವಿವಿಧ ಬಗೆಯ ರೇಷ್ಮೆ ಸೀರೆಗಳಿಗೆ ಡಿಸೈನರ್‌ ಬ್ಲೌಸುಗಳನ್ನು ಮ್ಯಾಚ್‌ ಮಾಡಿಕೊಂಡು ಸುಂದರವಾದ ಲುಕ್ಕನ್ನು ಪಡೆಯಬಹುದಾಗಿದೆ.

2ರೇಷ್ಮೆ ದುಪ್ಪ‌ಟ್ಟಾಗಳು: ಮರೆಯಾಗಿದ್ದ ದುಪಟ್ಟಾ ಫ್ಯಾಷನ್‌ ಮತ್ತೆ ಮರಳಿದೆ. ಹೊಸತನದೊಂದಿಗೆ ಪ್ರತ್ಯೇಕವಾಗಿ ದೊರೆಯುವ ದುಪ್ಪ‌ಟ್ಟಾಗಳು ವಿವಿಧ ಬಗೆಯ ಬಟ್ಟೆಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ಪ್ರಿಂಟೆಡ್‌ ಕುರ್ತಾಗಳಿಗೆ ಪ್ಲೆ„ನ್‌ ಸಿಲ್ಕ… ದುಪ್ಪಟ್ಟಾ ಅಥವ ಪ್ಲೆ„ನ್‌ ಕುರ್ತಾಗಳಿಗೆ ಪ್ರಿಂಟೆಡ್‌ ಸಿಲ್ಕ… ದುಪ್ಪಟ್ಟಾ ಈಗಿನ ಟ್ರೆಂಡಾಗಿದೆ. ಸಾಂಪ್ರದಾಯಿಕ ಲುಕ್ಕನ್ನು ಕೋಡುವ ಇವುಗಳನ್ನು ಫ‌ಂಕ್ಷನ್‌ವೇರ್‌ ಆಗಿ ಬಳಸಬಹುದಾಗಿದೆ.

3    ರೇಷ್ಮೆ ಕುರ್ತಾಗಳು, ಕುರ್ತಿಗಳು: ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಸಿಲ್ಕ… ಕುರ್ತಾಗಳು ಮತ್ತು ಕುರ್ತಿಗಳು ಬಹಳ ಚೆನ್ನಾಗಿ ಒಪ್ಪುತ್ತವೆ. ಬೇಕಾದ ಬಣ್ಣಗಳಲ್ಲಿ ದೊರೆಯುವ ಇವುಗಳು ಟ್ರೆಡೀಶನಲ… ಲುಕ್ಕನ್ನು ನೀಡುತ್ತವೆ. ಸಿಲ್ಕ… ಪ್ರಿಂಟೆಡ್‌ ಅಥವಾ ಪ್ಲೆ„ನ್‌ ಸಿಲ್ಕ… ಕುರ್ತಾಗಳು ದೊರೆಯುತ್ತವೆ. ಫ್ರಂಟ… ಸ್ಲಿಟ…, ಸ್ಲೆ„ಡ್‌ ಸ್ಲಿಟ… ಮೊದಲಾದ ಮಾದರಿಗಳಲ್ಲಿ ದೊರೆಯುತ್ತವೆ.

4ಅನಾರ್ಕಲಿ ಕುರ್ತಾಗಳು: ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಸೂಕ್ತವೆನಿಸುವ ದಿರಿಸೆಂದರೆ ಅನಾರ್ಕಲಿ ಅಥವಾ ಅಂಬ್ರೆಲಾ ಕುರ್ತಾಗಳು. ಸಿಲ್ಕ… ಅನಾರ್ಕಲಿ ಕುರ್ತಾಗಳು ಸದ್ಯದ ಟ್ರೆಂಡಿ ದಿರಿಸುಗಳಲ್ಲೊಂದು. ರಿಚ್‌ ಲುಕ್ಕನ್ನು ನೀಡುವುದರೊಂದಿಗೆ ಸ್ಟ್ಯಾಂಡರ್ಡ್‌ ಲುಕ್ಕನ್ನು ಕೂಡ ನೀಡುವಲ್ಲಿ ಇವು ಮುಂಚೂಣಿಯಲ್ಲಿವೆ. ಶುದ್ಧ ರೇಷ್ಮೆ ಅನಾರ್ಕಲಿಗಳು ದುಬಾರಿಯಾಗಿದ್ದರೂ ವಿಶೇಷ ಸಂದರ್ಭಗಳಲ್ಲಿ ಸೀರೆಗಳಿಗೆ ಬದಲಿ ಉಡುಗೆಯಾಗಿ ಮಿಂಚುತ್ತವೆ.

Advertisement

5    ಪುರುಷರ ಕುರ್ತಾಗಳು: ಮಹಿಳೆಯರ ದಿರಿಸುಗಳಷ್ಟೇ ಅಲ್ಲದೆ ಪುರುಷರ ಕುರ್ತಾ ಅಥವಾ ಜುಬ್ಟಾಗಳು ಈ ರೇಷ್ಮೆ ಬಟ್ಟೆಗಳಲ್ಲಿ ಸಿದ್ಧಗೊಳ್ಳುತ್ತವೆ. ಸಮಾರಂಭಗಳಲ್ಲಿ ತೊಡಲು  ಸೂಕ್ತವಾದುದಾಗಿದೆ.  ಮಹಿಳೆಯರ ಕುರ್ತಾಗಳಂತೆ ಪುರುಷರ ಕುರ್ತಾಗಳೂ ಹಲವು ಬಗೆಗಳಲ್ಲಿ ದೊರೆಯುತ್ತವೆ. ಸಿಲ್ಕ…ನಿಂದ ತಯಾರಿಸಲಾದ ಕ್ರಾಸ್‌ ಬಟನ್‌ ಕುರ್ತಾಗಳು ಸಧ್ಯದ ಟ್ರೆಂಡಿ ಕುರ್ತಾಗಳೆನಿಸಿವೆ. ತೋಳುಗಳಲ್ಲಿ, ಲೆನ್‌¤ಗಳಲ್ಲಿ, ನೆಕ್‌ಗಳಲ್ಲಿ ಹಲವು ಮಾದರಿಗಳಲ್ಲಿ ತಯಾರಿಸಿದ ಸಿಲ್ಕ… ಕುರ್ತಾಗಳು ದೊರೆಯುತ್ತವೆ.

6ರೇಷ್ಮೆ ಸ್ಟೋಲುಗಳು ಮತ್ತು ರೇಷ್ಮೆ ಶಾಲುಗಳು: ಸಿಲ್ಕ… ದುಪಟ್ಟಾಗಳಂತೆಯೇ ಸಿಲ್ಕ… ಸ್ಟೋಲುಗಳು ಮತ್ತು ಶಾಲುಗಳು ದೊರೆಯುತ್ತವೆ. ಸ್ಟೋಲುಗಳು ಫ್ಯೂಷನ್‌ ದಿರಿಸುಗಳಿಗೆ ಹೊಂದಿದರೆ ಶಾಲುಗಳು ಸಾಂಪ್ರದಾಯಿಕ ಲುಕ್ಕನ್ನು ನೀಡುತ್ತವೆ. ಹೆವೀ ಬಾರ್ಡರ್‌ ಇರುವಂತಹ ಅಥವಾ ವರ್ಕ್‌ ಇರುವ ಶಾಲುಗಳೂ ದೊರೆಯುತ್ತವೆ.

7    ರೇಷ್ಮೆ ಲೆಹೆಂಗಾಗಳು ಮತ್ತು ಮ್ಯಾಕ್ಸಿ  ಸ್ಕರ್ಟುಗಳು: ಟೀನೇಜರ್ಸ್‌ನ ಅಚ್ಚುಮೆಚ್ಚಿನ ಬಗೆಯಾದ ಮ್ಯಾಕ್ಸಿ ಸ್ಕರ್ಟುಗಳು ಮತ್ತು ಲೆಹೆಂಗಾಗಳು ಕೂಡ ರೇಷ್ಮೆ ಬಟ್ಟೆಯಲ್ಲಿ ಡಿಸೈನುಗೊಳ್ಳುತ್ತವೆ. ಯುವತಿಯರು ಮದುವೆ ಮತ್ತಿತರ ಸಮಾರಂಭಗಳಲ್ಲಿ ಸೀರೆಗಳಿಗಿಂತ ಇಂತಹ ಫ್ಯೂಷನ್‌ ದಿರಿಸುಗಳನ್ನೇ ಧರಿಸಲು ಇಚ್ಚಿಸು ವುದರಿಂದ ಈ ಬಗೆಯ ದಿರಿಸುಗಳು ಇತರೆ ಬಗೆಯ ಬಟ್ಟೆಗಳೊಂದಿಗೆ  ರೇಷ್ಮೆಯಲ್ಲಿಯ ಕೂಡ ದೊರೆಯಲಾರಂಭಿಸಿವೆ.

8ರೇಷ್ಮೆ ಟ್ರಾಸರ್ಸ್‌:  ರೇಷ್ಮೆಯಲ್ಲಿ ಕೇವಲ ಟಾಪ್‌ವೇರುಗಳಷ್ಟೇ ಅಲ್ಲದೆ ಬಾಟಮ… ವೇರುಗಳು ಕೂಡ ದೊರೆಯುತ್ತವೆ. ಸಿಲ್ಕ… ಪಲಾಸೊ ಪ್ಯಾಂಟ…, ಪಟಿಯಾಲ ಪ್ಯಾಂಟ…, ಪುಷ್‌ಅಪ್‌ ಪ್ಯಾಂಟ…, ಧೋತಿ ಪ್ಯಾಂಟುಗಳು ಇನ್ನಿತರೆ ಟ್ರಾಸರುಗಳು ಸಿಲ್ಕ… ಬಟ್ಟೆಯಲ್ಲಿಯೂ ತಯಾರಿಸಲಾಗುತ್ತದೆ. ಇಷ್ಟೇ ಅಲ್ಲದೆ ಸಿಲ್ಕ… ಟ್ಯುನಿಕ್‌ಗಳು ದೊರೆಯುತ್ತವೆ.  ಈ ಮೇಲಿನವುಗಳು ಬಟ್ಟೆಗಳಾದರೆ ಸಿಲ್ಕ… ಥೆಡ್‌ನಿಂದ ವಿವಿಧ ಬಗೆಯ ಆಭರಣಗಳನ್ನು, ಕೆಲವು ಕಲಾಕೃತಿಗಳನ್ನು  ಕೂಡ ತಯಾರಿಸಲಾಗುತ್ತದೆ.

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next