Advertisement

ಆಸ್ಟ್ರೇಲಿಯನ್ ಓಪನ್: ನಂ1 ಆಶ್ಲೆ ಬಾರ್ಟಿಗೆ ಶಾಕ್ ನೀಡಿ ಫೈನಲ್ ತಲುಪಿದ ಸೋಫಿಯಾ ಕೆನಿನ್

09:49 AM Jan 31, 2020 | keerthan |

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕೂಟದ ಮಹಿಳೆಯರ ಸಿಂಗಲ್ಸ್ ನಲ್ಲಿ ಅಮೇರಿಕಾದ ಸೋಫಿಯಾ ಕೆನಿನ್  ಫೈನಲ್ ತಲುಪಿದ್ದಾರೆ.

Advertisement

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ನ ಸೆಮಿ ಫೈನಲ್ ನಲ್ಲಿ ವಿಶ್ವದ ನಂ1 ಆಟಗಾರ್ತಿ ಆಶ್ಲೆ ಬಾರ್ಟಿಯನ್ನು ಸೋಲಿಸಿದ ಸೋಫಿಯಾ ಕೆನೆನ್ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಫೈನಲ್ ಪ್ರವೇಶ ಮಾಡಿದ್ದಾರೆ.

ಆಶ್ಲೆ ಬಾರ್ಟಿ ವಿರುದ್ಧ 7-6, 7-5 ಅಂತರದಿಂದ ಗೆದ್ದ ಫ್ಲೋರಿಡಾದ ಸೋಫಿಯಾ ಈವರೆಗೆ ಪ್ರಮುಖ ಪಂದ್ಯಾವಳಿಯಲ್ಲೂ ನಾಲ್ಕನೇ ಹಂತವನ್ನು ದಾಟಿರಲಿಲ್ಲ.

ವರ್ಷದ ಹಿಂದೆ ಟೊರಾಂಟೋ ಡಬ್ಲ್ಯುಟಿಎ ಟೆನ್ನಿಸ್ ಕೂಟದಲ್ಲಿ ಆಶ್ಲೆ ಬಾರ್ಟಿ ಅವರಿಗೆ ಕೂಟದ ಎರಡನೇ ಸುತ್ತಿನಲ್ಲಿ ಸೋಪಿಯಾ ಕೆನೆನ್ ಸೋಲಿಸಿದ್ದರು.

ಶನಿವಾರ ನಡೆಯುವ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಸಿಮೋನಾ ಹ್ಯಾಲೆಪ್ ಅಥವಾ ಗಾರ್ಬೀಸ್ ಮುಗುರುಜಾ ವಿರುದ್ಧ ಸೋಫಿಯಾ ಕೆನೆನ್ ಸೆಣಸಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next