Advertisement

ಒಗ್ಗಟ್ಟಿನಲ್ಲಿದೆ ಸಮಾಜದ ಪ್ರಗತಿ

04:42 PM Dec 04, 2017 | Team Udayavani |

ರಾಯಚೂರು: ಸಣ್ಣ ಸಣ್ಣ ಸಮಾಜಗಳು ಒಗ್ಗೂಡುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ಸಮಾಜಗಳು ಒಗ್ಗೂಡಿ ಶ್ರಮಿಸಿದರೆ ಏನು ಬೇಕಾದರೂ ಸಾಧಿ ಸಬಹುದು ಎಂದು ನಗರ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಮೇದಾರ ಸಂಘದಿಂದ ನಗರದ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾಯಕನಿಧಿ ಶಿವಶರಣ ಶ್ರೀ ಮೇದಾರ ಕೇತಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಗಳು
ಒಗ್ಗೂಡಿದರೆ ಕೇವಲ ಶಾಸಕರಲ್ಲ, ಮುಖ್ಯಮಂತ್ರಿಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಒಗ್ಗಟ್ಟು ತೋರಿದಾಗ ಮಾತ್ರ ನೀವು ಎಲ್ಲ ರೀತಿಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಇಂದು ಮೇದಾರ ಸಮಾಜದವರು ಈ ರೀತಿ ಒಗ್ಗೂಡಿ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಕೆಲಸ ಎಂದರು. 

ಮೇದಾರ ಸಮಾಜ ವಿದ್ಯೆಗೆ ಬಹಳ ಕಡಿಮೆ ಮಹತ್ವ ನೀಡುತ್ತಿದೆ. ಬಡ ಮಕ್ಕಳ ವ್ಯಾಸಂಗಕ್ಕೆ ಸಮಾಜವೇ
ಸಹಕರಿಸಬೇಕು. ವಿದ್ಯಾವಂತರು ಒಳ್ಳೆಯ ಹುದ್ದೆಗೆ ಹೋದ ಮೇಲೆ ಸಮಾಜವನ್ನು ಕಡೆಗಣಿಸದೆ, ಹತ್ತಾರು ಮಕ್ಕಳಿಗೆ
ಶೈಕ್ಷಣಿಕವಾಗಿ ನೆರವು ನೀಡಬೇಕು. ಅಂದಾಗ ಮಾತ್ರ ಇಡೀ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ್‌ ಮಾತನಾಡಿ, ಮೇದಾರ ಕೇತಯ್ಯನವರ ಜಯಂತಿಯನ್ನು
ಸರ್ಕಾರದಿಂದಲೇ ಆಚರಿಸುವಂತೆ ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಎಲ್ಲ ಸಮಾಜದ ಜಯಂತಿಗಳನ್ನು ಸರ್ಕಾರವೇ ಆಚರಿಸುತ್ತಿದೆ. ಆದರೆ, ಈ ಸಮಾಜದ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ಬಂದಿರಲಿಕ್ಕಿಲ್ಲ. ಶೀಘ್ರದಲ್ಲೇ ನಿಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಿದ್ಧಾಂತದಡಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಎಲ್ಲ
ವರ್ಗಗಳಿಗೆ ಅನ್ವಯಯವಾಗುವಂಥ ಯೋಜನೆಗಳನ್ನು ಜಾರಿಗೊಳಿಸಿದ್ದು ನೀವು ಲಾಭ ಪಡೆಯಿರಿ ಎಂದು
ತಿಳಿಸಿದರು.

Advertisement

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಹೋದರಿ ಸ್ಮಿತಾ ಮಾತನಾಡಿ, ಧರ್ಮ, ಜಾತಿಗಳು ಸಮಾಜದ
ವ್ಯವಸ್ಥೆಯಾಗಿದೆ. ನಾವೆಲ್ಲ ಜ್ಞಾನದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದರು.

ಸಂಸದ ಬಿ.ವಿ.ನಾಯಕ, ನಗರಸಭೆ ಸದಸ್ಯ ಶಾಲಂ ಮಾತನಾಡಿದರು. ಹಿರಿಯ ಸಾಹಿತಿ ವೀರ ಹನುಮಾನ್‌
ವಿಶೇಷ ಉಪನ್ಯಾಸ ನೀಡಿದರು. ದೇವದುರ್ಗದ ಅರಿವಿನ ಮನೆ ಮಠದ ಪೀಠಾಧಿ ಪತಿ ಶ್ರೀ ಗುರುಬಸವ ದೇವರು
ಸಾನ್ನಿಧ್ಯ ವಹಿಸಿದ್ದರು.

ಮೇದಾರ ಸಂಘದ ಜಿಲ್ಲಾಧ್ಯಕ್ಷ ಎಂ.ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕೇಶವರೆಡ್ಡಿ, ಮುಖಂಡರಾದ
ರವೀಂದ್ರ ಜಲ್ದಾರ್‌, ನಗರಸಭೆ ಮಾಜಿ ಸದಸ್ಯ ಯೂಸೂಫ್‌ ಖಾನ್‌, ಸುನೀಲ್‌ ಅಗರವಾಲ್‌, ಸಂಘದ ಎಂ.ಗೋವಿಂದ, ಎಂ.ಬಿ.ಶಂಕರ್‌, ಮಹಾದೇವ ಮಂಚಾಲ ಸೇರಿ ಸಮಾಜದ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಮೇದಾರ ಬಡಾವಣೆಯಿಂದ ಶ್ರೀ ಮೇದಾರ ಕೇತಯ್ಯನವರ ಭಾವಚಿತ್ರ ಮೆರವಣಿಗೆ ಪ್ರಮುಖ ರಸ್ತೆ, ವೃತ್ತಗಳ ಮಾರ್ಗವಾಗಿ ಸಂಚರಿಸಿತು. ಮುತ್ತೆದೆಯರು ಕುಂಭ, ಕಳಸಗಳನ್ನು ಹೊತ್ತು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next