Advertisement
“”ಮೇಂ ತೋ ತಂದೂರಿ ಮುರ್ಗೀ ಹೂಂ ಯಾರ್, ಗಟಕಾ ಲೇ ಸಂಯ್ನಾ ಆಲ್ಕೋಹಾಲ್ ಸೇ”(ನಾನೊಂದು ತಂದೂರಿ ಕೋಳಿ, ಆಲ್ಕೋಹಾಲ್ ಜೊತೆ ನನ್ನನ್ನು ಗುಟುಕರಿಸಿಬಿಡು ಪ್ರಿಯ). ದಬಾಂಗ್ 2 ಚಿತ್ರದ “ಫೇವಿಕಾಲ್ ಸೇ’ ಹಾಡಿನ ಸಾಲುಗಳಿವು. ಈ ಹಾಡಿಗೆ ದೇಶಾದ್ಯಂತ ಎಷ್ಟು ಜನರು ಕುಣಿದುಕುಪ್ಪಳಿಸಿದ್ದಾರೋ ತಿಳಿಯದು. ಎಷ್ಟಿದ್ದರೂ ಸಲ್ಮಾನ್ ಖಾನ್‌ನ ಸಿನೆಮಾ ಅಲ್ಲವೇ?
Related Articles
Advertisement
ಈ ವರ್ಗ ಅಂದುಕೊಂಡಿರುವುದೇನೆಂದರೆ ಭಾರತದ ಸ್ತ್ರೀವಾದಿಗಳೆಲ್ಲ ಪಾಶ್ಚಿಮಾತ್ಯ ಸ್ತ್ರೀವಾದದ ಅಂಶಗಳಿಂದ ಪ್ರೇರಿತರಾದವರು, ಫೆಮಿನಿಸಂ ಎನ್ನುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ ಎನ್ನುವುದು. ಉದಾರವಾದಿ, ಸ್ವತಂತ್ರ ಮನೋಭಾವದ ಮಹಿಳೆಯರನ್ನೆಲ್ಲ ಇವರು “ಹುಸಿ ಸ್ತ್ರೀವಾದಿ’ಗಳ ಕೆಟಗರಿಯಲ್ಲಿ ಕೂರಿಸಿಬಿಡುತ್ತಾರೆ. “”ಈ ಮಹಿಳೆಯರು ಸ್ವಾತಂತ್ರ್ಯದ ಹೆಸರು ಹೇಳುತ್ತಾ ಅಶ್ಲೀಲತೆಯ ಬೇಡಿಕೆಯಿಡುತ್ತಿದ್ದಾರೆ. ಅವರ ಸ್ವಾತಂತ್ರ್ಯವೇನಿದ್ದರೂ ಶಾರ್ಟ್ ಸ್ಕರ್ಟ್‌ಗಳು, ಸೆಕ್ಸ್, ಬ್ರಾ, ಪ್ಯಾಂಟಿ, ಸಿಗರೇಟ್, ಮದ್ಯ ಮತ್ತು ರಾತ್ರಿ 2 ಗಂಟೆಯವರೆಗೂ ನಡು ರಸ್ತೆಯಲ್ಲಿ ಅಲೆದಾಡುವುದಕ್ಕೆ ಸೀಮತವಾಗಿದೆ…ಇವರೆಲ್ಲ ಬರೀ ಸ್ಯಾನಿಟರಿ ನ್ಯಾಪಿRನ್‌ನ ಬಗ್ಗೆ ಮಾತನಾಡುವ ಬ್ಯಾಡ್ ಫೆಮಿನಿಸ್ಟ್‌ಗಳು” ಎನ್ನುವುದು ಬಹುದೊಡ್ಡ ಆರೋಪ.
ಈ ಆರೋಪ ಪ್ರತ್ಯಾರೋಪದ ವಿಷಯ ಬಂದಾಗಲೆಲ್ಲ ನಮಗೆ ಮೊದಲು ಎದುರೊಡ್ಡಲಾಗುವ ತರ್ಕವೆಂದರೆ- “”ಮೇಡಂ, ನೀವೆಲ್ಲ ನಗರವಾಸಿಗಳು, ಆಧುನಿಕ ಶಿಕ್ಷಣದ ಶಿಶುಗಳು. ನಿಮ್ಮ ಸುತ್ತಲೂ ನಿಮ್ಮನ್ನು ಬೆಂಬಲಿಸುವ ಜನರೇ ಇರುತ್ತಾರೆ. ಹೀಗಿದ್ದರೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಬಂದು ಸಮಾನ ತೆಯ ಮಾತನಾಡುವ ಚಟ ನಿಮಗೆಲ್ಲ. ಒಮ್ಮೆ ಹಳ್ಳಿಗಳಿಗೆ ಹೋಗಿ, ಅಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ನೋಡಿ. ಅವರ ಬಗ್ಗೆ ಮಾತನಾಡುವುದೇ ಗುಡ್ ಫೆಮಿನಿಸಂ” ಎನ್ನುವುದು.
ಈ ಹೋಲಿಕೆಯೇ ನನಗೆ ಬಾಲಿಶ ಎನಿಸುತ್ತದೆ. ನಗರದ ಸ್ತ್ರೀವಾದಿಗಳು ಕೇವಲ ಬ್ರಾ, ಸೆಕ್ಷುವಾಲಿಟಿ, ಋತುಸ್ರಾವದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸುವವರಿಗೆ, ಈ ಸಮಸ್ಯೆಗಳನ್ನು ಗ್ರಾಮೀಣ ಭಾಗದ ಮಹಿಳೆಯರೂ ಅನುಭವಿಸುತ್ತಿದ್ದಾರೆ ಎನ್ನುವುದೇಕೆ ಗೊತ್ತಾಗುತ್ತಿಲ್ಲ? ಗ್ರಾಮೀಣ ಭಾಗದ ಪುರುಷರು “ಪಿತೃಸತ್ತಾತ್ಮಕ’ ವ್ಯವಸ್ಥೆಯ ಹೆಸರು ಕೇಳಿರದಿದ್ದರೂ, ಅದರ ಪ್ರಯೋಗವನ್ನಂತೂ ನಿತ್ಯವೂ ಮಾಡುತ್ತಾರೆ. ಹಳ್ಳಿಯೊಂದರ ಮುಖ್ಯಸ್ಥಳು ಮಹಿಳೆಯಾಗಿದ್ದಳು ಎಂದರೆ ಪಂಚಾಯಿತಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಆಕೆಯ ಕುಟುಂಬದ ಪುರುಷರ ಹಸ್ತಕ್ಷೇಪವಿರುತ್ತದೆ. ಹೊಲದಲ್ಲಿ ಕೆಲಸ ಮಾಡುವ ಹೆಣ್ಣುಮಗಳಿಗೆ ಗಂಡುಮಕ್ಕಳಿಗಿಂತ ಕಡಿಮೆ ಕೂಲಿ ಕೊಡಲಾಗುತ್ತದೆ.
ಎಷ್ಟು ಮಕ್ಕಳನ್ನು ಹೆರಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವುದು ಯಾರು? ಮಗಳು ಶಾಲೆಗೆ ಹೋಗಬೇಕೋ ಬೇಡವೇ, ಹೋದರೂ ಎಷ್ಟನೇ ತರಗತಿಯವರೆಗೂ ಓದಬೇಕು ಎಂದು ನಿರ್ಧರಿಸುವವರ್ಯಾರು?
ಗಂಡೇ ಅಲ್ಲವೇ?!ಇನ್ನು ಸೆಕ್ಷುವಾಲಿಟಿಗೆ ಸಂಬಂಧಿಸಿದ ಸಮಸ್ಯೆಗಳು ಹಳ್ಳಿಯ ಹೆಣ್ಣುಮಕ್ಕಳಿಗೆ ಒಂದು ರೀತಿ, ನಗರದ ಹೆಣ್ಣು ಮಕ್ಕಳಿಗೆ ಇನ್ನೊಂದು ರೀತಿ ಇರುವುದಿಲ್ಲ. ಹೆಣ್ಣು ಎಲ್ಲಿಯೇ ಇರಲಿ, ಆಕೆಯನ್ನು ಪುರುಷ ಪ್ರಧಾನ ಸಮಾಜ ಸುತ್ತುವರಿದುಬಿಡುತ್ತದೆ. ಬಿಹಾರದ ಕುಗ್ರಾಮದಲ್ಲಿ ವಾಸಿಸುವ ಸುಖೀಯಾಗೂ ಮತ್ತು ದೆಹಲಿಯಲ್ಲಿ ಓದುವ ರಶ್ಮಿಗೂ ನಿತ್ಯ ಒಂದೇ ಸಮಸ್ಯೆ ಇರುತ್ತದೆ. ಅವರ ಸಮಸ್ಯೆಯೆಂದರೆ ಪತಿ ಸಂಭೋಗದ ಸಮಯದಲ್ಲಿ ಕಾಂಡೋಮ್ ಬಳಸುವುದಿಲ್ಲ ಎನ್ನುವುದು. ಇವರೇ ಪ್ರತಿ ಬಾರಿಯೂ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬೇಕು. ಇಲ್ಲಿ ಒಂದೇ ಒಂದು ವ್ಯತ್ಯಾಸವೇನೆಂದರೆ ರಶ್ಮಿ ಒಂದಲ್ಲ ಒಂದು ದಿನ ತನ್ನ ಅಧಿಕಾರದ ಬಗ್ಗೆ ಎಚ್ಚೆತ್ತುಕೊಂಡುಬಿಡುತ್ತಾಳೆ, ಮಾತನಾಡುತ್ತಾಳೆ. ಆದರೆ ಸುಖೀಯಾ ಹತ್ತಿರ ನಾರಿವಾದ ತಲುಪುವುದೇ ಇಲ್ಲ. ಸಮಸ್ಯೆ ಒಂದೇ. ಆದರೆ ಆಕೆ ಮಾತನಾಡುತ್ತಾಳೆ ಈಕೆ ಮಾತನಾಡುವುದಿಲ್ಲ. ಇಲ್ಲಿ ಹೇಳಲೇಬೇಕಾದ ವಿಷಯವೆಂದರೆ ಪಿತೃಪ್ರಧಾನ ಮನೋಧೋರಣೆ ಕೇವಲ ಪುರುಷರಿಗಷ್ಟೇ ಸೀಮಿತವಾಗಿರಬೇಕಿಲ್ಲ ಎನ್ನುವುದು. ಇಂಥ ಗುಣ ಮಹಿಳೆಯರಲ್ಲೂ ಇರುತ್ತದೆ. ಮಹಿಳೆಯರು ತಾವು ನೋಡುತ್ತಾ ಬಂದದ್ದನ್ನೇ ಮಾಡುತ್ತಾರೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಅವರಿಗೆ ತುಸು ಅಧಿಕಾರ ಸಿಕ್ಕರೂ ಇನ್ನೊಬ್ಬರ ಸ್ವಾತಂತ್ರ್ಯವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಮುಂದಾಗಿಬಿಡಬಲ್ಲರು. ಅಂದರೆ ಒಂದು ಕುಟುಂಬದ ನೇತೃತ್ವ ಮಹಿಳೆಗೆ ಸಿಕ್ಕಿತು ಎಂದಾಕ್ಷಣ, ಆ ಮನೆಯಲ್ಲಿರುವ ಎಲ್ಲಾ ಮಹಿಳಾ ಸದಸ್ಯರಿಗೆ ಸ್ವಾತಂತ್ರ್ಯ ಸಿಕ್ಕುಬಿಡುತ್ತದೆ ಎಂದರ್ಥವಲ್ಲ. ಇನ್ನು ಸ್ತ್ರೀವಾದವೆಂದಾಕ್ಷಣ ಮುಖ ಗಂಟಿಕ್ಕುವ ಪುರುಷರೆಲ್ಲ, ಕೊನೆಯವರೆಗೂ ಮಹಿಳೆ ಗಂಡಸಿನ ಅಧೀನದಲ್ಲೇ ಇರಬೇಕು ಎಂದು ಭಾವಿಸುವವರು/ಬಯಸುವವರು. ಸೆಕ್ಸ್ ವಿಷಯದಲ್ಲಿ ಬಹಿರಂಗವಾಗಿ ಮಾತನಾಡುವ ಹುಡುಗಿ ಯಾರಿಗೆ ಇಷ್ಟ ಹೇಳಿ? ಏಕೆಂದರೆ ಪುರುಷರು ಸೆಕ್ಸ್‌ನ ಮೇಲೆ ತಮಗಷ್ಟೇ ಅಧಿಕಾರವಿದೆ ಎಂದು ಭಾವಿಸುತ್ತಾರೆ. ಈ ವಿಷಯದಲ್ಲಿ ಮಹಿಳೆಯರು ತಮ್ಮ ವಾದ ಮುಂದಿಟ್ಟದ್ದೇ “ಹುಸಿ ಸ್ತ್ರೀವಾದ’ ಎಂಬ ಆರೋಪ ಹೊರಿಸಿ ಮೂಲೆಗೆ ತಳ್ಳಲು ಬಯಸುತ್ತಾರೆ ಗಂಡಸರು. ಈ ಪುರುಷವಾದಿ ಸಮಾಜವು ಸ್ವತಂತ್ರವಾಗಿ ಯೋಚಿಸಬಲ್ಲ, ತಮ್ಮ ಹಕ್ಕುಗಳಿಗಾಗಿ ಹೋರಾಡಬಲ್ಲ ಹೆಣ್ಣನ್ನು ಕಂಡು ಹೆದರುತ್ತದೆ. ಹೆಣ್ಣೊಬ್ಬಳು ತಮ್ಮ ಸಮಾನಕ್ಕೆ ನಿಲ್ಲುವುದನ್ನು ನೋಡುವುದಕ್ಕೆ ಇವರು ಥರಗುಟ್ಟಿಹೋಗುತ್ತಾರೆ. ಈ ಕಾರಣದಿಂದಲೇ ನಾನು ಹೆಣ್ಣುಮಕ್ಕಳಿಗೆ ಹೇಳುವುದಿಷ್ಟೇ…ನಿಮ್ಮ ಸ್ತ್ರೀವಾದವನ್ನು ಮುಂದುವರಿಸಿ, ಸಮಾನತೆಗಾಗಿ ಹೋರಾಡಿ! ಗುಡ್ ಮತ್ತು ಬ್ಯಾಡ್ ಎಂದು ವಿಭಜನೆ ಮಾಡುವವರಿಗೆ ಅಸಲಿಗೆ ಫೆಮಿನಿಸಂನ ಅರ್ಥವೇ ಗೊತ್ತಿಲ್ಲ. ಇವರಿಗೆಲ್ಲ ನನ್ನ ಪ್ರಶ್ನೆಯಿಷ್ಟೆ…ಋತುಸ್ರಾವದ ಬಗ್ಗೆ, ಸೆಕ್ಸ್‌ನಂಥ ವಿಷಯಗಳ ಬಗ್ಗೆ ಮಾತನಾಡುವುದು, ಬರೆಯುವುದು ಫ್ಯಾಷನ್ ಹೇಗಾಗುತ್ತದೆ? ಇಂದಿಗೂ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಮಹಿಳೆಯರು ಮೆರಾಯrಲ್ ರೇಪ್ ಗೆ (ಗಂಡನಿಂದ ಅತ್ಯಾಚಾರ) ಒಳಗಾಗುತ್ತಿಲ್ಲವೇ? ಮಕ್ಕಳನ್ನು ಪಡೆಯುವ ವಿಷಯದಲ್ಲಿ ಮಹಿಳೆಗೆ ಸ್ವಾತಂತ್ರ್ಯವೇ ಇಲ್ಲ ಎನ್ನುವುದು ಈ ಟೀಕಾಕಾರರಿಗೆ ತಿಳಿದಿಲ್ಲವೇ? ಇಂದಿಗೂ ಭಾರತದ ಹಳ್ಳಿಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ಸ್ ಸಿಗದೇ ಎಷ್ಟು ಹುಡುಗಿಯರು-ಮಹಿಳೆಯರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎನ್ನುವುದು ಇವರಿಗೆ ಗೊತ್ತಿದೆಯೇ? ಇಂದಿಗೂ ದೇಶದಲ್ಲಿ ವರದಕ್ಷಿಣೆಗಾಗಿ ಮಹಿಳೆಯರನ್ನು ಸುಟ್ಟುಹಾಕಲಾಗುತ್ತಿಲ್ಲವೇ? ನಿತ್ಯವೂ ಹೆಣ್ಣು ಪುಂಡಪೋಕರಿಗಳಿಂದ ಕಿರಿಕಿರಿ ಎದುರಿಸುತ್ತಿಲ್ಲವೇ? ಎಷ್ಟೋ ಕಡೆಗಳಲ್ಲಿ ಖುದ್ದು ಅಪ್ಪ-ಸಹೋದರರಿಂದಲೇ ಆಕೆ ಲೈಂಗಿಕ ದೌರ್ಜನ್ಯ ಎದುರಿಸುತ್ತಿಲ್ಲವೇ? ಪ್ರಶ್ನೆಗಳ ಲಿಸ್ಟ್ ಇನ್ನೂ ದೊಡ್ಡದಿದೆ…
ಆದರೆ ಅದ್ಹೇಗೆ ನೀವೆಲ್ಲ ಆ ಮಹಿಳೆಯದ್ದು ಒಳ್ಳೆಯ ಸ್ತ್ರೀವಾದ, ಈ ಮಹಿಳೆಯದ್ದು ನಕಲಿ ಸ್ತ್ರೀವಾದ ಎಂದು ನಿರ್ಧರಿಸುತ್ತಿದ್ದೀರಿ? ಮೊದಲು ಅದನ್ನು ಹೇಳಿಬಿಡಿ… (ಕೃಪೆ: ನವಭಾರತ್ ಹಿಂದಿ) ರಿತಿಕಾ ಸಿ