Advertisement

ಸಮಾಜಮುಖೀ ಚಿಂತನೆ ಮೈಗೂಡಿಸಿಕೊಳ್ಳಿ

01:29 PM Feb 17, 2017 | Team Udayavani |

ಧಾರವಾಡ: ಇಂದಿನ ಯುವಕರು ಸಮಾಜಮುಖೀ ಚಿಂತನೆ ಮೈಗೂಡಿಸಿಕೊಳ್ಳುವುದರ ಮೂಲಕ ಉತ್ತಮ ನಾಯಕರಾಗಿ ಹೊರ ಹೊಮ್ಮಬೇಕು ಎಂದು ಮನೋರೋಗ ತಜ್ಞ ಡಾ| ಆದಿತ್ಯಾ ಪಾಂಡುರಂಗಿ ಹೇಳಿದರು. 

Advertisement

ನೆಹರು ಯುವ ಕೇಂದ್ರ, ರುಡ್‌ಸೆಟ್‌ ಸಂಸ್ಥೆ, ಗಿರಿ ಫೌಂಡೇಶನ್‌ ಹಾಗೂ ಬಸವೇಶ್ವರ ಯುವಕ ಮಂಡಳ ಸಹಯೋಗದೊಂದಿಗೆ ರುಡ್‌ಸೆಟ್‌ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರಮ, ಬದ್ಧತೆ, ಉತ್ತಮ ನಡತೆ ಹಾಗೂ ನೈತಿಕ ಮೌಲ್ಯಗಳು ಅರ್ಥಪೂರ್ಣ ಬದುಕಿಗೆ ಸಹಕಾರಿಯಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಮಹಾಂತೇಶ ವೀರಾಪೂರ ಮಾತನಾಡಿ, ಪ್ರತಿಯೊಬ್ಬರು ಜೀವನ ಪ್ರೀತಿ ಮತ್ತು ಉತ್ಸಾಹದಿಂದ ಕಾರ್ಯೋನ್ಮುಖರಾಗುವುದರ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕು ಹೇಳಿದರು.

ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಅನಿಲ ಪುರಾಣಿಕ ಮಾತನಾಡಿ, ನೆಹರು ಯುವ ಕೇಂದ್ರದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು. ಉಪನ್ಯಾಸಕರಾದ ಜಗದೀಶ ಪೂಜಾರ, ಚನ್ನಪ್ಪ ದೇವಗಿರಿ, ಶಿವಾಜಿ, ವಂದನಾ ಇದ್ದರು. ಪ್ರದೀಪ ಎಸ್‌. ಮೇಲ್ಗಡೆ ಸ್ವಾಗತಿಸಿದರು. ರಾಜು ಗಿರಿಯಪ್ಪನವರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next