Advertisement

ಸಮಾಜ ಸೇವಕ ಆನಂದಗೌಡರಿಂದ ಸ್ಮಶಾನ ಸ್ವಚ್ಛತೆ

04:04 PM Jul 01, 2022 | Team Udayavani |

ಮುಂಡರಗಿ: ಪಟ್ಟಣದ ಗದಗ ರಸ್ತೆಯಲ್ಲಿರುವ ಶ್ರೀ ಜ|ಅನ್ನದಾನೀಶ್ವರ ರುದ್ರಭೂಮಿ ಸ್ವತ್ಛತಾ ಕಾರ್ಯವನ್ನು ಸಮಾಜ ಸೇವಕ ಆನಂದಗೌಡ ಪಾಟೀಲ ಅವರು ಮಾಡುತ್ತಿರುವುದು ಶ್ಲಾಘನೀಯ ಎಂದು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

Advertisement

ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಸಮುದಾಯಗಳ ಸ್ಮಶಾನಗಳು ಇದ್ದು, ಪುರಸಭೆ ಆಡಳಿತ ವತಿಯಿಂದ ಸ್ವತ್ಛತಾ ಕಾರ್ಯವನ್ನು ಪ್ರತಿ ವರ್ಷ ಮಾಡಬೇಕಿದೆ. ಆದರೆ, ಸ್ಮಶಾನದಲ್ಲಿ ಬೆಳೆದ ಕಸ, ಗಿಡಗಂಟಿಗಳು ಬೆಳೆದಿದ್ದರಿಂದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬರುವ ಜನರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ವೃತ್ತಿಯಲ್ಲಿ ಗುತ್ತಿಗೆದಾರರಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆನಂದಗೌಡ ಪಾಟೀಲರು ಸ್ವಂತ ಖರ್ಚಿನಲ್ಲಿ ಸ್ಮಶಾನ ಸ್ವಚ್ಛತೆಗೆ ಮುಂದಾಗಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಜೆಸಿಬಿ ಯಂತ್ರದಿಂದ ಗಿಡಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸಿದ್ದಾರೆ. ಇದರಿಂದ ಅಂತೀಮ ಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಅನುಕೂಲವಾಗಲಿದೆ. ಸ್ಮಶಾನ ಪರಿವರ್ತನೆಗೊಂಡಿದೆ. ಸ್ಮಶಾನ ಸ್ವಚ್ಛತೆಯಿಂದ ಸಾರ್ವಜನಿಕರು, ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ನಿಟ್ಟಿಸಿರು ಬಿಡುವಂತೆ ಆಗಿರುವುದು ಸಮಾಧಾನ ತಂದಿದೆ. ಪಟ್ಟಣದ ವ್ಯಾಪ್ತಿಯ ಶಿರೋಳ, ರಾಮೇನಹಳ್ಳಿ, ಬ್ಯಾಲವಾಡಗಿ ಸೇರಿ ಇಸ್ಲಾಂ ಸಮಾಜದ ಈದಾಗ ಸ್ವಚ್ಛತೆಗೆ ಕೂಡಾ ಪುರಸಭೆ ಆಡಳಿತ ಮುಂದಾಗಬೇಕಿದೆ. ಈ ದಿಸೆಯಲ್ಲಿ ತ್ವರಿತವಾಗಿ ಪುರಸಭೆ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಗಮನ ಹರಿಸಬೇಕಿದೆ.

ಸ್ಮಶಾನದ ಅಭಿವೃದ್ಧಿ ಆದರೆ ಗ್ರಾಮದ, ಪಟ್ಟಣದ ಅಭಿವೃದ್ಧಿಯಾದಂತೆ. ಹುಲಿಕೋಟಿ ಸ್ಮಶಾನದ ಮಾದ ರಿಯಲ್ಲಿ ಪಟ್ಟಣದ ಸ್ಮಶಾನವನ್ನು ಅಭಿವೃದ್ಧಿಗೊಳಿಸಿ, ಹೂವಿನಗಿಡಗಳನ್ನು ಬೆಳೆಸಲಾಗುವುದು. –ಆನಂದಗೌಡ ಎಚ್‌. ಪಾಟೀಲ

ಸಮಾಜ ಸೇವಕರು ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದು ಸ್ವಚ್ಛತೆ ಇರಲಿಲ್ಲ. ಆದರೆ ಆನಂದಗೌಡ ಪಾಟೀಲರು ಸ್ವಚ್ಛತಾ ಕಾರ್ಯ ಕೈಕೊಂಡಿರುವುದು ಉತ್ತಮ ಕೆಲಸವಾಗಿದೆ. -ನಾಗರಾಜ ಹೊಂಬಳಗಟ್ಟಿ, ಪುರಸಭೆ ಸದಸ್ಯ

Advertisement

ಈಗಾಗಲೇ ಪಟ್ಟಣ ವ್ಯಾಪ್ತಿಯ ಸ್ಮಶಾನಗಳ ಸ್ವಚ್ಛತೆ ಕಾರ್ಯ ಕೈಕೊಳ್ಳಲು ಮುಂದಾಗಿದ್ದೆವು. ಆದರೆ ರಾಜಕೀಯ ಹೊಯ್ದಾಟಗಳ ಮಧ್ಯೆ ಕೆಲಸ ಸ್ಥಗಿತವಾಗಿದೆ. ಈಗ ನೀತಿ-ಸಂಹಿತೆ ಜಾರಿಯಲ್ಲಿದೆ. ನೀತಿ-ಸಂಹಿತೆ ಮುಗಿದ ತಕ್ಷಣ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತೇವೆ. –ಕವಿತಾ ಉಳ್ಳಾಗಡ್ಡಿ, ಪುರಸಭೆ ಅಧ್ಯಕ್ಷ

ಪುರಸಭೆ ವ್ಯಾಪ್ತಿಯ ಎಲ್ಲಾ ಸ್ಮಶಾನಗಳ ಸ್ವಚ್ಛತೆಗೆ ಒಂದು ವಾರದೊಳಗೆ ಕ್ರಮ ಕೈಕೊಳ್ಳಲಾಗುವುದು. ಏನಾದರೂ ದುರಸ್ತಿ ಕಾರ್ಯಗಳು ಇದ್ದರೆ, ಅವುಗಳನ್ನು ಕೂಡಾ ಮಾಡಲಾಗುವುದು. ಗದಗ ರಸ್ತೆ ಸ್ಮಶಾನದ ಗೋಡೆ ಬಿದ್ದಿದ್ದು, ಅದನ್ನು ಕೂಡಾ ದುರಸ್ತಿ ಮಾಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. –ಆರ್‌.ಎಂ. ಪಾಟೀಲ, ಪುರಸಭೆ ಮುಖ್ಯಾಧಿಕಾರಿ

-ಹು.ಬಾ.ವಡ್ಡಟಿ

Advertisement

Udayavani is now on Telegram. Click here to join our channel and stay updated with the latest news.

Next