Advertisement

ಪೊಲೀಸರಿಂದ ಸಮಾಜಮುಖಿ ಕೆಲಸ

07:27 PM Aug 16, 2021 | Team Udayavani |

ಕೊಪ್ಪಳ: ಪೊಲೀಸರು ತಮ್ಮ ವೃತ್ತಿಯ ಜೊತೆಜೊತೆಗೆ ಅಭಿನವ ಗವಿಶ್ರೀಗಳ ಮಾರ್ಗದರ್ಶನದಲ್ಲಿ ಕೆರೆ ನಿರ್ಮಾಣದಂತಹ ಉತ್ತಮ ಕಾರ್ಯಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ಕೊಪ್ಪಳ ಡಿ.ಆರ್‌. ಕೇಂದ್ರ ಸ್ಥಳ ಬಸಾಪುರದಲ್ಲಿಅವರು ಸ್ಫೂರ್ತಿ ಸಾಗರ ಸರೋವರ ಲೋಕಾರ್ಪಣೆಮಾಡಿ ಮಾತನಾಡಿದರು. ಹಿಂದೆ ನಮ್ಮಹಿರಿಯರು ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಇಂದು ನಾವೆಲ್ಲರೂ ಸರ್ಕಾರಕ್ಕೆ ದೂರುವ ಬದಲಿಗೆ ನಮಗೆ ಬೇಕಾಗುವ ಮೂಲ ಸೌಕರ್ಯಗಳ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಗವಿಸಿದ್ದೇಶ್ವರ ಶ್ರೀಗಳು ಜಿಲ್ಲೆಯ ಹಿರೇಹಳ್ಳ ಸ್ವತ್ಛತೆ ಕಾರ್ಯ ಮತ್ತುಗಿಣಿಗೇರಿ ಕೆರೆ ಅಭಿವೃದ್ಧಿಯಂತಹ ಮಹತ್ತರ ಕಾರ್ಯಗಳಿಗೆ ಮುಂದಾಗಿದ್ದಾರೆ.

ಶ್ರೀಗಳು ಕರೆ ಕೊಟ್ಟಾಗ ಎಲ್ಲರೂ ಇಂತಹ ಕಾರ್ಯಗಳಿಗೆ ಸಹಕಾರ ನೀಡುತ್ತಾರೆ. ಈ ದಿಶೆಯಲ್ಲಿಯೇ ಜಿಲ್ಲಾ ಪೊಲೀಸ್‌ ಅಧಿ ಕಾರಿಗಳು ಕೆರೆ ನಿರ್ಮಿಸಿಕೊಂಡಿರುವುದು ಉತ್ತಮ ಸಮಾಜಮುಖೀ ಕಾರ್ಯವಾಗಿದೆ. ಹಿಂದೆ ನಾನು ನಾಲ್ಕು ಕೆರೆಗಳನ್ನುನಿರ್ಮಿಸಿದ್ದೆ.

ಅಂತಹ ಕಾರ್ಯ ಮಾಡಿದಾಗ ನಮಗೆಸಿಗುವ ಸಂತೃಪ್ತಿಯೇ ಬೇರೆ ಎಂದು ಸಚಿವರುಹೇಳಿದರು.ಸಂಸದ ಕರಡಿ ಸಂಗಣ್ಣ ಮಾತನಾಡಿ,ಪೊಲೀಸ್‌ ಅ ಧಿಕಾರಿಗಳು ತಮ್ಮ ಕರ್ತವ್ಯದ ಜೊತೆಗೆ ಕೆರೆ ನಿರ್ಮಾಣದ ಕಾರ್ಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದು, ಒಬ್ಬ ಪೊಲೀಸ್‌ಅ ಧಿಕಾರಿಯಾಗಿ ಏನು ಮಾಡಬಹುದು ಎಂಬುದಕ್ಕೆಇವರು ಸಾಕ್ಷಿಯಾಗಿದ್ದಾರೆ ಎಂದರು.

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳಮಾತನಾಡಿ, ಹುಟ್ಟು-ಸಾವು ಅನಿವಾರ್ಯ.ಆದರೆ ಇಂತಹ ಉತ್ತಮ ಸಮಾಜಮುಖೀ ಕೆಲಸ ಮಾಡಿದಾಗ ಅವು ಶಾಶ್ವತವಾಗಿಉಳಿಯುತ್ತವೆ. ನಡೆದಾಡುವ ದೇವರು ಎಂದುಕರೆಯುವ ಗವಿಶ್ರೀಗಳ ಮಾರ್ಗದರ್ಶನದಲ್ಲಿ ಕೆರೆನಿರ್ಮಾಣ ಕಾರ್ಯ ಉತ್ತಮವಾಗಿದೆ ಎಂದುಹೇಳಿದರು.

Advertisement

ಕೆರೆ ನಿರ್ಮಾಣಕ್ಕಾಗಿ ಸಹಾಯ ಮಾಡಿದ ದಾನಿಗಳೂ ಹಾಗೂ ಕೆರೆ ನಿರ್ಮಾಣಕ್ಕಾಗಿ ಶ್ರಮಿಸಿದ ಪೊಲೀಸ್‌ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್‌ವತಿಯಿಂದ ಸನ್ಮಾನಿಸಲಾಯಿತು.

ಗವಿಸಿದ್ದೇಶ್ವರ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿ ಕಾರದಅಧ್ಯಕ್ಷ ಮಹಾಂತೇಶ ಎಸ್‌. ಪಾಟೀಲ್‌,ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌,ಜಿಪಂ ಸಿಇಒ ಫೌಜಿಯಾ ತರನುಮ್‌, ಎಸ್‌ಪಿ ಟಿ.ಶ್ರೀಧರ್‌, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ ಸೇರಿ ಹಲವು ಗಣ್ಯರು ಸೇರಿದಂತೆಪೊಲೀಸ್‌ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next