Advertisement

ಸ್ನೇಹಜೀವಿ ಬಳಗದ ಸಮಾಜಮುಖಿ ಕಾರ್ಯ

04:29 PM May 24, 2021 | Team Udayavani |

ಹುಣಸೂರು : ಇಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಯಾರೋ ಒಬ್ಬ ದಾರಿಹೋಕರು ಸ್ಕೂಟರಿನಲ್ಲಿ ಒಂದು ವಯಸ್ಸಾದ ಅಜ್ಜಿಯನ್ನು ಕಟ್ಟೆಮಳಲವಾಡಿ ಗ್ರಾಮದ ಸೇತುವೆ ಬಳಿ ಬಿಟ್ಟು ಹೋಗಿದ್ದನ್ನು ಕಂಡ ಹುಣಸೂರಿನ ಶಾಸಕ ಎಚ್ ಪಿ ಮಂಜುನಾಥ್ ಸ್ನೇಹ ಜೀವಿ ಬಳಗದ ತಂಡದ ಸದಸ್ಯ ರಮೇಶ್ ಮತ್ತು ಶಿವಪ್ಪ ಕಟ್ಟೆಮಳಲವಾಡಿ ಅವರು ಅಜ್ಜಿಯನ್ನು ವಿಚಾರಿಸಲಾಗಿ ನಮ್ಮ ಮನೆಯಲ್ಲಿ ಗಲಾಟೆ ಬಗ್ಗೆ ಹೇಳಿ ಕಣ್ಣೀರು ಸುರಿಸುತ್ತಿದ್ದರು.

Advertisement

ಎಷ್ಟೇ ಕೇಳಿದರೂ ಅಜ್ಜಿ ಮೌನವಹಿಸಿ ಕಣ್ಣೀರು ಅಷ್ಟೇ ಹಾಕುತ್ತಿರುವುದನ್ನು ಗಮನಿಸಿದ ಸ್ನೇಹಜೀವಿ ಬಳಗದ ರಮೇಶ್ ಮತ್ತು ಶಿವಪ್ಪ ಅಜ್ಜಿಯ ಬಗ್ಗೆ ಸ್ನೇಹಜೀವಿ ಬಳಗ ತಂಡದ ಗ್ರೂಪಿನಲ್ಲಿ ವಿಡಿಯೋ ವೈರಲ್ ಮಾಡಿದ್ದು , ಇದನ್ನು ಗಮನಿಸಿದ ಮಾನ್ಯ ಶಾಸಕ ಎಚ್.ಪಿ. ಮಂಜುನಾಥ್ ಕೂಡಲೇ ಹುಣಸೂರಿನ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿಯವರು ತಮ್ಮ ಜೀಪಿನಲ್ಲಿ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅಜ್ಜಿಯು ಅಗ್ರಹಾರ ನಿವಾಸಿಯಾಗಿದ್ದು ತಮ್ಮ ಮಕ್ಕಳು ತಮಗೆ ಊಟ ತಿಂಡಿ ನೀಡದೆ ಮಾನಸಿಕ ಕಿರುಕುಳ ನೀಡುತ್ತಿದ್ದು ನಾನು ಮನನೊಂದು ಮನೆಯಿಂದ ಹೊರ ಬಂದಿರುವುದಾಗಿ ತಿಳಿಸಿದ್ದು. ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಯವರು
ಸ್ನೇಹಜೀವಿ ಬಳಗದ ರಮೇಶ್ ಮತ್ತು ಕಟ್ಟೆಮಳಲವಾಡಿ ಗ್ರಾಪಂನ ಮಾಜಿ ಸದಸ್ಯ ಶಿವಪ್ಪ ರೊಂದಿಗೆ ಅಗ್ರಹಾರ ಗ್ರಾಮಕ್ಕೆ ಅಜ್ಜಿಯನ್ನು ಕರೆದೊಯ್ದು ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ. ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಅಜ್ಜಿಯ ಮಕ್ಕಳಿಗೆ ಎಚ್ಚರಿಕೆ ನೀಡಿ ಬುದ್ಧಿವಾದ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಗಮನಿಸಿ ಅಜ್ಜಿಯನ್ನು ತಮ್ಮ ಮನೆಗೆ ತಲುಪಿಸುವ ಮಹತ್ಕಾರ್ಯ ಮಾಡಿದ ಮಾನ್ಯ ಶಾಸಕರ ಹಾಗೂ ಸ್ನೇಹಜೀವಿ ಬಳಗದ ಕಾರ್ಯವೈಖರಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next