Advertisement

ಸತೀಶ ಜಾರಕಿಹೊಳಿ ಫೌಂಡೇಶನ್‌ನಿಂದ ಸಮಾಜಮುಖಿ ಕಾರ್ಯ

06:17 PM Jan 31, 2022 | Team Udayavani |

ಘಟಪ್ರಭಾ: ಬುದ್ಧ, ಬಸವ, ಅಂಬೇಡ್ಕರ್‌ ಕಂಡ ಕನಸ್ಸಿನಂತೆ ಹಲವು ಸಮಾಜಮುಖಿ ಚಟುವಟಿಕೆ ಹಮ್ಮಿಕೊಂಡಿದ್ದು, ಸತೀಶ ಜಾರಕಿಹೊಳಿ ಫೌಂಡೇಶನ್‌ ಮೂಲಕ ಇನ್ನಷ್ಟು ಅದನ್ನು ವಿಸ್ತರಿಸುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಘಟಪ್ರಭಾ ಸೇವಾದಳದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ನಿಂದ ಹಮ್ಮಿಕೊಂಡಿದ್ದ ಸೇನೆ ಹಾಗೂ ಪೊಲೀಸ್‌ ಇಲಾಖೆಗೆ ಸೇರ ಬಯಸುವ ಯುವಕರಿಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೇನೆ-ಪೊಲೀಸ್‌ ಇಲಾಖೆಗೆ ಸೇರಲು ಬಯಸುವ ಯುವಕರಿಗೆ ತರಬೇತಿ ನಿಡುವುದಷ್ಟೇ ಅಲ್ಲದೇ ಅವರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ತರಬೇತಿ ಪಡೆದು ಮನೆಗೆ ಹೋಗುವ ಯುವಕರಿಗೆ ಸೇನೆ-ಪೊಲೀಸ್‌ ಇಲಾಖೆ ಆಯ್ಕೆ ಪ್ರಕ್ರಿಯೆ ನಡೆಯುವವರೆಗೂ ವೈದ್ಯರ ಸಲಹೆಯಂತೆ ಅವರಿಗೆ ಪೌಷ್ಟಿಕ ಆಹಾರದ ಖರ್ಚನ್ನು ಅವರ ಬ್ಯಾಂಕ್‌ ಖಾತೆಗೆ ಹಾಕಲಾಗುವುದು ಎಂದರು.

ಶಿಬಿರಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬೇಕು. ಪೌಷ್ಟಿಕ ಆಹಾರ, ದೈಹಿಕ ಹಾಗೂ ಪರೀಕ್ಷಾ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿ ಬದುಕು ಕಟ್ಟಿಕೊಂಡರೆ ನಮ್ಮ ಶ್ರಮ ಸಾರ್ಥಕ. ಇಲ್ಲಿ ಕಲಿತು ಸೇನೆ- ಪೊಲೀಸ್‌ ಇಲಾಖೆಗೆ ಸೇರಿದವರು ಸಮಾಜದಲ್ಲಿ ಧ್ವನಿ ಇಲ್ಲದದವರ ಪರ ಕೆಲಸ ಮಾಡಬೇಕು.ಹೀಗೆ ಎಲ್ಲ ವಲಯದಲ್ಲೂ ಸಮಾನತೆ ಚಿಂತನೆಗಳು ಆರಂಭವಾದರೆ ಬುದ್ಧ, ಬಸವ,
ಅಂಬೇಡ್ಕರ್‌ ಆಶಯದ ಸಮ ಸಮಾಜ ಕಟ್ಟಲು ಸಾಧ್ಯ ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಮಾತನಾಡಿ, ಸೇನಾ-ಪೊಲೀಸ್‌ ತರಬೇತಿ ನೀಡುವುದು ಸತೀಶ ಜಾರಕಿಹೊಳಿಯವರ ಬಹು ದಿನಗಳ ಕನಸಾಗಿತ್ತು. ಈ ತರಬೇತಿ ಮೂಲಕ ಅದು ನನಸಾಗಿದೆ ಎಂದರು.

Advertisement

ಟಾರ್ಗೆಟ್‌ ಕೋಚಿಂಗ್‌ ಸೆಂಟರ್‌ನ ಪ್ರಕಾಶ್‌ ಮೇತ್ರಿ ಮಾತನಾಡಿ, ಸತೀಶ ಜಾರಕಿಹೊಳಿ ವಿಭಿನ್ನ ವ್ಯಕ್ತಿತ್ವದವರು. ಇಲ್ಲಿ ತರಬೇತಿಗೆ ಆಗಮಿಸಿದ ಎಲ್ಲರಿಗೂ ಉಚಿತ ತರಬೇತಿ ನೀಡುವ ಜೊತೆಗೆ ಉಚಿತವಾಗಿ ಅಭ್ಯಾಸ ಮಾಡುವ ಸಾಮಗ್ರಿ ಕೊಟ್ಟಿದ್ದಾರೆ. ಇಂತಹ ಕೆಲಸ ನಿಜಕ್ಕೂ ಮಾದರಿ ಎಂದರು.

ದೈಹಿಕ ತರಬೇತಿ ನೀಡಿದ ನಿವೃತ್ತ ಸೈನಿಕ ಸುಭಾಷ ನಾಯಕ್‌ ಮಾತನಾಡಿ, ಇಂತಹ ತರಬೇತಿ ಉಚಿತವಾಗಿ ನೀಡುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್‌ ಕೆಲಸ ಶ್ಲಾಘನೀಯ  ಎಂದರು. ಈ ವೇಳೆ ಫೌಂಡೇಶನ್‌ ಸದಸ್ಯರು, ಘಟಪ್ರಭಾ ಸೇವಾದಳದ ಸಿಬ್ಬಂದಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next