Advertisement

ರೋಟರಿ ಕ್ಲಬ್‌ನಿಂದ ಸಾಮಾಜಿಕ ಕಾರ್ಯ

11:22 AM Jul 08, 2019 | Suhan S |

ಕೊಪ್ಪಳ: ರೋಟರಿ ಕ್ಲಬ್‌ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಮಾಜಮುಖೀ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದೆ. ಇಲ್ಲಿ ಅಧಿಕಾರದ ಆಸೆ, ಸ್ವಾರ್ಥಕ್ಕಿಂತ ಸೇವೆ ಮಾಡುವುದು ಮುಖ್ಯವಾಗಿದೆ ಎಂದು ರೋಟರಿ ಕ್ಲಬ್‌ನ ಪಿಡಿಜಿ ಅಧ್ಯಕ್ಷ ಎ.ಎಸ್‌. ಚಂದ್ರಶೇಖರ ಹೇಳಿದರು.

Advertisement

ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಯ ಬೆಳೆದಿದ್ದೆ ಸಮಾಜಮುಖೀ ಕಾರ್ಯಕ್ಕಾಗಿ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ದೊಡ್ಡ ಪಾತ್ರ ನಿರ್ವಹಿಸಿದೆ. ಇಂತಹ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವುದೇ ಹೆಮ್ಮೆಯ ಸಂಗತಿ. ವಿಶ್ವದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ಇದೊಂದೇ ಎಂದೆನ್ನಲಾಗುತ್ತದೆ. ಅರಬ್‌, ಯರೋಪ್‌ ದೇಶಗಳು ಸೇರಿದಂತೆ ಜಗತ್ತಿನಾದ್ಯಂತ 200 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ ಎಂದರು.

ರೋಟರಿ ಸಂಸ್ಥೆಯಿಂದ ಜಗತ್ತಿನಾದ್ಯಂತ ನಾನಾ ಕಲ್ಯಾಣ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಲ್ಲಿ ಸ್ವಾರ್ಥ, ಅಧಿಕಾರಕ್ಕೆ ಅವಕಾಶವಿಲ್ಲ. ಸೇವೆ ಮಾಡುವುದೇ ಇಲ್ಲಿ ಮುಖ್ಯವಾಗಿದೆ. ಇಂತಹ ರೋಟರಿಗೆ ಸದಸ್ಯರಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದಕ್ಕೆ ಸದಸ್ಯರಾದ ಹೆಮ್ಮೆ ಇರುತ್ತದೆ. ಹಾಗಾಗಿ ಈ ಸಂಸ್ಥೆಯಲ್ಲಿ ನೀವು ಎಲ್ಲಿಯೇ ಇದ್ದರು ಸಾಕು ರೋಟರಿ ಎಂದರೇ ಸಾಕು ಅಪ್ಪಿಕೊಳ್ಳುತ್ತಾರೆ. ಸದಸ್ಯತ್ವವೂ ಕೂಡ ಅಂತಾರಾಷ್ಟ್ರೀಯ ಮಟ್ಟದ್ದಾಗಿರುತ್ತದೆ ಎಂದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ನಿಸ್ವಾರ್ಥ ಭಾವನೆಯಿಂದ ಸಂಘಟನೆಯಲ್ಲಿ ತೊಡಗಿದಲ್ಲಿ ನಿಜವಾಗಿಯೂ ಯಶಸ್ವಿ ಸಾಧ್ಯ. ಅದಕ್ಕೆ ವೇದಿಕೆಯಾಗಿ ರೋಟರಿ ಸಂಸ್ಥೆ ಇದ್ದು, ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

Advertisement

ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಡಾ| ಸಿ.ಎಸ್‌. ಕರಮುಡಿ ಮಾತನಾಡಿ, ನಮ್ಮ ಹಿರಿಯರು ಸಮಾಜಮುಖೀ ಕಾರ್ಯ ಮಾಡುವುದನ್ನು ನೋಡಿ ಬೆಳೆಯುತ್ತಲೇ ನಾನು ಅವರ ಹಾದಿಯಲ್ಲೇ ಸಾಗಿದ್ದರಿಂದ ಇಂದು ರೋಟರಿ ಕ್ಲಬ್‌ ಅಧ್ಯಕ್ಷನಾಗಿದ್ದೇನೆ. ನಾನು ಅಧ್ಯಕ್ಷನಾಗಿದ್ದರೂ ಪ್ರತಿಯೊಬ್ಬ ಸದಸ್ಯರು ಅಧ್ಯಕ್ಷರಿದ್ದಂತೆ. ನನ್ನ ಒಂದು ವರ್ಷದ ಅವಧಿಯಲ್ಲಿ ಹಸಿರು ಕ್ರಾಂತಿಗೆ ಒತ್ತು ನೀಡುತ್ತೇನೆ. ವಿಶೇಷವಾಗಿ ಕೃಷಿಕರ ಮಕ್ಕಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದ್ದೇನೆ ಎಂದರು.

ಡಾ| ಕೆ.ಜಿ. ಕುಲಕರ್ಣಿ, ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗಯ್ಯ ಹಿರೇಮಠ, ವೀರಣ್ಣ ಕಮತರ, ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿದರು.

ಪತ್ರಕರ್ತರ ದಿನಾಚರಣೆ ಪ್ರಯುಕ್ತ ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ಸಂತೋಷ ದೇಶಪಾಂಡೆ, ಸಾದಿಕ್‌ಅಲಿ, ಸೋಮರಡ್ಡಿ ಅಳವಂಡಿ ಅವರನ್ನು ಹಾಗೂ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಾದ ಡಾ| ವೈಜನಾಥ ಇಟಗಿ, ಡಾ| ಬಿ.ಎಸ್‌. ಸವಡಿ, ಡಾ| ಬಸವರಾಜ ಕುಂಬಾರ, ಡಾ| ಸಾಂಬಯ್ಯ, ಡಾ| ಕೆ.ಬಿ. ಹಿರೇಮಠ, ಡಾ| ಉಮೇಶ ರಾಜೂರು, ಡಾ| ಪಿ.ಎಂ. ಬಸವರಾಜ, ಲೆಕ್ಕದಿನಾಚರಣೆ ನಿಮಿತ್ತ ಸಂಜಯ ಕೊತಬಾಳ ಅವರನ್ನು ಸನ್ಮಾನ ಮಾಡಲಾಯಿತು. ಸಂಜಯ ಕೊತಬಾಳ, ಮರಿಶಾಂತವೀಯ್ಯ ಸ್ವಾಮಿ, ಇನ್ನರ್‌ ವೀಲ್ ಕ್ಲಬ್‌ ಅಧ್ಯಕ್ಷೆ ಶರಣಮ್ಮ ಎ. ಪಾಟೀಲ ಉಪಸ್ಥಿತರಿದ್ದರು. ಸಿದ್ಧಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಎ.ಜಿ. ಶರಣಪ್ಪ ಹಾಗೂ ಕಾಂತು ಗುಡಿ ನಿರೂಪಿಸಿದರು. ಮರಿಶಾಂತವೀರಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next