Advertisement

ಸಮಾಜಮುಖೀ ಕಾರ್ಯ ಮುಂದುವರಿಯಲಿ

05:46 PM Nov 22, 2020 | Suhan S |

ನಾರಾಯಣಪುರ: ಕನ್ನಡಪರ ಸಂಘಟನೆಗಳು ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖೀ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

Advertisement

ಜೊಗುಂಡಭಾವಿ ಗ್ರಾಮದಲ್ಲಿ ರಾಜ್ಯೋತ್ಸವ ನಿಮಿತ್ತ ನಡೆದ ಉಚಿತ ನೇತ್ರ ತಪಾಸಣೆ, ಊರುಗೋಲು ವಿತರಣಾ ಶಿಬಿರ ಉದ್ಘಾಟಿಸಿಮಾತನಾಡಿದ ಅವರು, ಗ್ರಾಮೀಣಭಾಗದ ಜನತೆಗೆ ಇಂತಹ ಶಿಬಿರಗಳಿಂದ ತುಂಬಾ ಅನುಕೂಲವಾಗಲಿದೆ.ಸಂಘಟಕರು ಸಾಮಾಜಿಕ ಕಳಿಕಳಿ ಇರುವ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಮಹಾಮನಿ ಮಾತನಾಡಿ, 550 ಜನರುಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 140 ಜನರಿಗೆ ಸಂಘಟನೆ ವತಿಯಿಂದ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. 110 ಜನ ವೃದ್ಧ ಹಾಗೂ ಅಂಗವಿಕಲರಿಗಊರುಗೋಲು ವಿತರಿಸಲಾಗಿದಎಂದರು. ಗಿರಿಮಲ್ಲಪ್ಪ ಪೂಜಾರಿ, ಗದ್ದೆಪ್ಪ  ಪೂಜಾರಿ, ಅಮರಣ್ಣ ಹುಡೇದ, ಬಿಜೆಪಿ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಿಗಿ, ವಿ.ಎಂ ಹಿರೇಮಠ, ನಾಗಯ್ಯಸ್ವಾಮಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ| ಪ್ರಭುಗೌಡ, ಡಾ| ಸಿ.ಜಿ ವಡವಡಗಿ, ಡಾ| ಬಸವರಾಜ ಕುಂಬಾರ, ಹಣಮಂತ ಗುರಿಕಾರ, ಡಾ| ಮಹಮ್ಮದ ಕಾಶೀಮ್‌,ಪರಶುರಾಮ, ಬಸವರಾಜ ಗೌಡರ ವೇದಿಕೆ ಸದಸ್ಯರು, ಆಶಾ, ಆರೋಗ್ಯ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next