Advertisement

ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ

03:06 PM Jun 29, 2019 | Team Udayavani |

ಭಟ್ಕಳ: ರಂಗಭೂಮಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಲ್ಲ ಪರಿಣಾಮಕಾರಿ ಮಾಧ್ಯಮ ಎಂದು ಉದ್ಯಮಿ ರಾಘವೇಂದ್ರ ನಾಯ್ಕ ಹೇಳಿದರು.

Advertisement

ಅವರು ಇಲ್ಲಿನ ನ್ಯೂ ಇಂಗ್ಲಿಷ್‌ ಪ.ಪೂ. ಕಾಲೇಜಿನಲ್ಲಿ ಸಂಗಾತಿ ರಂಗಭೂಮಿ ಅಂಕೋಲ, ತಾಲೂಕು ಕಸಾಪ, ನ್ಯೂ ಇಂಗ್ಲಿಷ್‌ ಪ.ಪೂ. ಕಾಲೇಜು, ಪ್ರಾರ್ಥನಾ ಪ್ರತಿಷ್ಠಾನ, ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಭಿನಯ ಕಲೆಯ ಮೂಲಕ ವ್ಯಕ್ತಿಯ ನಿಜ ಜೀವನಕ್ಕೆ ಬೇಕಾದ ಸಂವಹನ ಕೌಶಲ, ಸಹಾನುಭೂತಿ, ಸಹಕಾರ, ಸಹಬಾಳ್ವೆ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಪರಿಣಾಮಕಾರಿ ಎಂಬುದು ಪ್ರಯೋಗಾತ್ಮಕವಾಗಿಯೂ ದೃಢಪಟ್ಟಿದೆ. ರಂಗಭೂಮಿ ಜನಜಾಗೃತಿ ಮೂಡಿಸುವಲ್ಲಿಯೂ ಗಮನಾರ್ಹ ಪಾತ್ರ ವಹಿಸಿದೆ ಎಂದ‌ು ಹೇಳಿದರು.

ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಿರಿಯ ರಂಗಕರ್ಮಿ ಅಶೋಕ ಮಹಾಲೆಗೆ ಸಿಜಿಕೆ ಬೀದಿ ರಂಗ ದಿನದ ಅಂಗವಾಗಿ ನೀಡುವ ಜಿಲ್ಲಾ ಮಟ್ಟದ ಸಿಜಿಕೆ ರಂಗ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಭಟ್ಕಳ ತಾಲೂಕು ಕಸಾಪ ವತಿಯಿಂದ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡ ಕೆ.ಆರ್‌. ನಾಯ್ಕ, ಎಸ್‌.ಎನ್‌. ದೇವಾಡಿಗ, ಗೋವಿಂದ ದೇವಾಡಿಗ, ರಾಮನಾಥ ಮಹಾಲೆ ಹಾಗೂ ನಜೀರ ಸಾಬ್‌ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಹಾಗೂ ಪ್ರಾರ್ಥನಾ ಪ್ರತಿಷ್ಠಾನದ ಮುಖ್ಯಸ್ಥ ಗಂಗಾಧರ ನಾಯ್ಕ ಮಾತನಾಡಿ ನಾಟಕಕ್ಕೆ ಎಲ್ಲ ವರ್ಗದವರನ್ನು ಸೆಳೆಯುವ ಶಕ್ತಿ ಇದೆ. ಅಂತಹ ರಂಗಕಲೆಯಲ್ಲಿ ತೊಡಗಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಜನಮನ ರಂಜಿಸುತ್ತಾ ಕಲಾಸೇವೆ ಮಾಡುತ್ತ ಆ ಮೂಲಕ ಮನರಂಜನೆಯ ಜೊತೆಜೊತೆಗೆ ಸಾಮಾಜಿಕ ಪರಿವರ್ತನೆಗೂ ಕಾರಣರಾಗುವ ರಂಗಭೂಮಿ ಕಲಾವಿದರ ಕಾರ್ಯ ಬಹಳ ದೊಡ್ಡದು ಎಂದರು.

Advertisement

ಅತಿಥಿಗಳಾಗಿದ್ದ ನ್ಯೂ ಇಂಗ್ಲಿಷ್‌ ಪಪೂ ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಶಾನಭಾಗ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರಾದ ಅಶೋಕ ಮಹಾಲೆ ಹಾಗೂ ಸನ್ಮಾನಿತರ ಪರವಾಗಿ ಕೆ.ಆರ್‌. ನಾಯ್ಕ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶೀ ಎಂ.ಪಿ. ಭಂಡಾರಿ ಸ್ವಾಗತಿದರು. ಸಂಗಾತಿ ರಂಗಭೂಮಿಯ ಕೆ.ರಮೇಶ್‌ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಪ್ರಭಾ ಕೊಡಿಯಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next