ಸೇಡಂ: ನಮ್ಮ ದೇಶ ಅಧ್ಯಾತ್ಮಿಕ ಸಂಪತ್ತಿನಿಂದ ಗುರುತಿಸಿಕೊಂಡಿದ್ದು, ಅಧ್ಯಾತ್ಮಿಕ ಚಿಂತನೆ ಗಳಿಂದ ಸಮಾಜದಲ್ಲಿ ಪತಿವರ್ತನೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಮಠ ಗಳ ಪಾತ್ರ ಮಹತ್ವದ್ದಾಗಿದೆ ಎಂದು ತೆಲಂಗಾಣದ ಕೌಳಶದ ಶ್ರೀ ಬಸವಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶಿವಶಂಕರ ಮಠದಲ್ಲಿ ಶ್ರಾವಣ ಮಾಸದ ಮಹಾಮಂಗಲ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜ ಆರೋಗ್ಯವಾಗಿರಲು ಮಠಗಳ ಪಾತ್ರ ಮಹತ್ವಾದ್ದಾಗಿದೆ ಎಂದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಮಾತನಾಡಿ, ಶಿವಶಂಕರ ಮಠವು ನಾಡಿನಲ್ಲಿಯೇ ವಿಶಿಷ್ಟ ಪರಂಪರೆ ಹೊಂದಿದೆ. ಇಂತಹ ಪರಂಪರೆ ಬೇರೆ ಕಡೆ ನೋಡಲು ಸಿಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಅದ್ಧೂರಿ ಪಲ್ಲಕ್ಕಿ ಉತ್ಸವ ನಡೆಯಿತು. ಶಿವಶಂಕರ ಮಠದಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲ ತೆಲಂಗಾಣದ ಕೌಳಶದ ಶ್ರೀ ಬಸವಲಿಂಗ ಶಿವಾಚಾರ್ಯರ ಪಾದಪೂಜೆ ಜರುಗಿತು. ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಮಂಗಲಗಿಯ ಶ್ರೀ ಡಾ|ಶಾಂತಸೋಮನಾಥ ಶಿವಾ ಚಾರ್ಯರು, ಹಾನೆಗಾಂವನ ಶ್ರೀ ಶಂಕರ ಲಿಂಗ ಶಿವಾಚಾರ್ಯರು ಇದ್ದರು.
ಮುಖಂಡರಾದ ವೀರಯ್ಯಸ್ವಾಮಿ ಮಠಪತಿ, ಜಗದೇವಯ್ಯ ಭಂಡಾ, ಕಂಠಯ್ಯಸ್ವಾಮಿ ಭಂಡಾ, ಸಿದ್ಧಯ್ಯಸ್ವಾಮಿ ಭಂಡಾ, ಶರಣಯ್ಯಸ್ವಾಮಿ ಬೊಮ್ನಳ್ಳಿ, ವಿಶ್ವೇಶ್ವರಸ್ವಾಮಿ ಬೊಮ್ನಳ್ಳಿ, ಬಸವರಾಜ ಬಾಳಿ, ಶಿವಶಂಕರಪ್ಪ ಬಿಡಪ್ಪ, ಶಿವಶರಣಪ್ಪ ಎಂಪಳ್ಳಿ, ದೇವಿಂದ್ರಪ್ಪ ಕೋಟ್ರಕಿ, ಶಿವಕುಮಾರ ಸ್ವಾಮಿ ಹಿರೇಮಠ, ವಿರೂಪಾಕ್ಷಯ್ಯ ಸ್ವಾಮಿ ಮಠಪತಿ, ಸುಲೋಚನಾ ಬಿಬ್ಬಳ್ಳಿ, ಶಾಕಾಂಬರಿದೇವಿ ಬೊಮ್ನಳ್ಳಿ, ಶಾರದಾಬಾಯಿ ಬೊಮ್ನಳ್ಳಿ, ಶೀಲಾ ನಿರ್ಣಿ, ಶಿಲ್ಪಾ ಮಾಲಿಪಾಟೀಲ, ಚಂದಮ್ಮ ಇನ್ನಿತರರು ಇದ್ದರು.