Advertisement

‘ಮಾತೃಭಾಷೆಯಿಂದ ಸಮಾಜ ಬಲಿಷ್ಠ’

12:12 AM Jul 23, 2019 | mahesh |

ಸವಣೂರು: ಪ್ರತಿಯೊಂದು ಸಮಾಜಕ್ಕೂ ತನ್ನದೇ ಆದ ಮಾತೃಭಾಷೆಯೊಂದಿರುತ್ತದೆ. ಆ ಭಾಷೆಯನ್ನು ನಿತ್ಯ ಜೀವನದಲ್ಲಿ ಬಳಸಿಕೊಂಡರೆ ಅದು ಸಮಾಜವನ್ನು ಬಲಿಷ್ಠತೆಗೊಳಿಸುತ್ತದೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಹೇಳಿದರು.

Advertisement

ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಯುವ ವೇದಿಕೆ ಪುತ್ತೂರು ಇದರ ಸಹಕಾರದೊಂದಿಗೆ ಮರಾಟಿ ಸಮಾಜ ಸೇವಾ ಸಂಘ ಎಲಿಯ ಇದರ ನೇತೃತ್ವದಲ್ಲಿ ಜು. 21ರಂದು ಸರ್ವೆ ಗ್ರಾಮದ ನೆಕ್ಕಿಲುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಮರಾಟಿ ಸಮಾಜ ಬಾಂಧವರಿಗೆ ನಡೆದ ‘ಆಟಿಡ್‌ ಕಂಡೊಡ್‌ ಒಂಜಿ ದಿನ’ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಗುಂಪು ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮರಾಟಿಗರು ಶ್ರಮಜೀವಿಗಳು
ಕ್ರೀಡಾಕೂಟವನ್ನು ತೆಂಗಿನ ಹಿಂಗಾರ ಅರಳಿಸಿ ಉದ್ಘಾಟಿಸಿದ ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್‌.ಡಿ. ವಸಂತ ಸರ್ವೆದೋಳ ಮಾತನಾಡಿ, ಮರಾಟಿ ಸಮುದಾಯ ಸಜ್ಜನ ಸಮುದಾಯ. ಮರಾಟಿಗರು ಶ್ರಮ ಜೀವಿಗಳು ಮತ್ತು ವಿಶ್ವಾಸವುಳ್ಳವರು ಎಂದು ಹೇಳಿದರು. ಎಷ್ಟೇ ಜಾತಿ ಸಂಘಟನೆಗಳು ಇದ್ದರೂ ದೇಶದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ ಎಂದರು.

ಸಾಧಕರಿಗೆ ಸಮ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾಲಿಂಗ ನಾಯ್ಕ ಅಡ್ಯನಡ್ಕ ಮತ್ತು ರಾಷ್ಟ್ರ ಮಟ್ಟದ ಕಬಡ್ಡಿ ಪಟು ಯಶಸ್ವಿ ಆರ್‌.ಎಂ. ಸಾಜ ಅವರನ್ನು ಸಮ್ಮಾನಿಸಲಾಯಿತು.

ಸುಬ್ಬಣ್ಣ ನಾಯ್ಕ ನೆಕ್ಕಿಲು ಅವರು ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೇರಳ ಮರಾಟಿ ಫೆಡರೇಶನ್‌ ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಆಲಂಕಾರು, ಬೆಂಗಳೂರು ಕರ್ನಾಟಕ ಮರಾಟಿ ಸಂಘದ ಗೌರವ ಕಾರ್ಯದರ್ಶಿ ಮೋನಪ್ಪ ನಾಯ್ಕ ಮುಂಡಾಜೆ, ಕರ್ನಾಟಕ ಮರಾಟಿ ಯುವ ವೇದಿಕೆ ಅಧ್ಯಕ್ಷ ದಿನೇಶ್‌ ನಾಯ್ಕ ಬಾಬುಮೂಲೆ, ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪರಮೇಶ್ವರ ನಾಯ್ಕ, ಪುತ್ತೂರು ಮರಾಟಿ ಯುವ ವೇದಿಕೆಯ ಅಧ್ಯಕ್ಷ ಸಂದೀಪ್‌ ಆರ್ಯಾಪು, ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಶೀನಪ್ಪ ನಾಯ್ಕ ಮುಕ್ರಂಪಾಡಿ, ಎಲಿಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವರಾಮ ನಾಯ್ಕ, ಕೆಸರು ಗದ್ದೆ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಪದ್ಮನಾಭ ನಾಯ್ಕ, ತಾ.ಪಂ.ಸದಸ್ಯೆ ಮೀನಾಕ್ಷಿ ಮಂಜುನಾಥ್‌, ಪಿಡಬ್ಲೂ ್ಯಡಿ ಗುತ್ತಿಗೆದಾರ ಬಾಲಕೃಷ್ಣ ನಾಯ್ಕ ಕಪ್ಪೆಕೆರೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ನಗರಸಭೆ ಸದಸ್ಯ ಶೀನಪ್ಪ ನಾಯ್ಕ ಮುಕ್ರಂಪಾಡಿ, ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಮುಂಡೋಲೆ, ಸಾಜ ಮಹಾಮ್ಮಾಹಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗೇಶ್‌ ನಾಯ್ಕ ಸಾಜ ಅಂಬಟೆತ್ತಡ್ಕ, ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ ಮಚ್ಚಿಮಲೆ, ಇರ್ದೆ ಗ್ರಾಮ ಸಮಿತಿ ಅಧ್ಯಕ್ಷ ಚನಿಯಪ್ಪ ನಾಯ್ಕ ಅರಂತನಡ್ಕ, ಯಕ್ಷಗಾನ ಕಲಾವಿದ ಸತೀಶ್‌ ನಾಯ್ಕ ಕಟೀಲ್ತಡ್ಕ, ಪಿಡಬ್ಲ್ಯುಡಿ ಗುತ್ತಿಗೆದಾರ ನಾರಾಯಣ ನಾಯ್ಕ ಗೆಣಸಿನಕುಮೇರು, ದರ್ಶನ ಪಾತ್ರಿ ಕೃಷ್ಣ ನಾಯ್ಕ ಅಡ್ಯತಕಂಡ, ದೋಳ್ಪಾಡಿ ಪ್ರೌಢ ಶಾಲಾ ಶಿಕ್ಷಕ ನಾರಾಯಣ ನಾಯ್ಕ ಅಗ್ರಲ ಪುಣಚ ಹಾಗೂ ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪೂವಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ, ಕೋಶಾಧಿಕಾರಿ ವೆಂಕಪ್ಪ ನಾಯ್ಕ, ಮಾಜಿ ಅಧ್ಯಕ್ಷರು ಕೆ. ಸುಂದರ ನಾಯ್ಕ, ಪಿ.ಎಸ್‌. ನಾಯ್ಕ, ಯು.ಕೆ. ನಾಯ್ಕ, ಎನ್‌. ನಾರ್ಣಪ್ಪ ನಾಯ್ಕ, ಮಾಜಿ ಉಪಾಧ್ಯಕ್ಷ ಸುಬ್ಬಣ್ಣ ನಾಯ್ಕ, ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಪುತ್ತೂರು ಮರಾಟಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಚೇತನಾ ಲೋಕಾನಂದ, ನಾರಾಯಣ ನಾಯ್ಕ ಚಾಕೋಟೆ ಉಪಸ್ಥಿತರಿದ್ದರು.

Advertisement

ಮರಾಟಿ ವಿದ್ಯಾರ್ಥಿ ವೇದಿಕೆ ಅಧ್ಯಕ್ಷೆ ಅನುಶ್ರೀ ಸಾಮೆತ್ತಡ್ಕ ಪ್ರಾರ್ಥಿಸಿದರು. ಕೆಸರು ಗದ್ದೆ ಕ್ರೀಡಾಕೂಟ ಸಮಿತಿ ಸಂಚಾಲಕ ಎನ್‌.ಎಸ್‌. ಮಂಜುನಾಥ್‌ ಪ್ರಸ್ತಾವನೆಗೈದರು. ಕಾರ್ಯದರ್ಶಿ ಗಿರೀಶ್‌ ನಾಯ್ಕ ಸೊರಕೆ ಸ್ವಾಗತಿಸಿದರು. ಸಂಘಟಕ ಗಂಗಾಧರ ನಾಯ್ಕ ಕೌಡಿಚ್ಚಾರ್‌ ವಂದಿಸಿದರು. ರವೀಂದ್ರ ಕುಮಾರ್‌ ಕೆದಂಬಾಡಿ, ವಿಖ್ಯಾತ್‌ ಸುಳ್ಯ ಕಾರ್ಯಕ್ರಮ ನಿರ್ವಹಿಸಿದರು. ಎಲಿಯ ಮರಾಟಿ ಸಮಾಜ ಸೇವಾ ಸಂಘದ ಸದಸ್ಯರಿಗೆ ನೀಡಲಾದ ಟೀ ಶರ್ಟ್‌ ಅನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಕ್ರೀಡಾಕೂಟ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಮುಂಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್‌ ಕುಮಾರ್‌ ಸೊರಕೆ ಮಾತನಾಡಿ, ಈ ಕ್ರೀಡಾಕೂಟದ ಮೂಲಕ ಮರಾಟಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಸಂಘಟಕರು ಮಾಡಿದ್ದಾರೆ. ಸಮಾಜಮುಖೀ ಕೆಲಸ ಮಾಡುವ ಯುವ ಸಮುದಾಯವನ್ನು ಬೆನ್ನು ತಟ್ಟುವ ಕೆಲಸ ಹಿರಿಯರಿಂದ ಆಗಬೇಕು ಎಂದ‌ರು.

ಕಿರಿಯರ ಬೆನ್ನುತಟ್ಟಿ
ಮುಖ್ಯ ಅತಿಥಿಯಾಗಿದ್ದ ಮುಂಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್‌ ಕುಮಾರ್‌ ಸೊರಕೆ ಮಾತನಾಡಿ, ಈ ಕ್ರೀಡಾಕೂಟದ ಮೂಲಕ ಮರಾಟಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಸಂಘಟಕರು ಮಾಡಿದ್ದಾರೆ. ಸಮಾಜಮುಖೀ ಕೆಲಸ ಮಾಡುವ ಯುವ ಸಮುದಾಯವನ್ನು ಬೆನ್ನು ತಟ್ಟುವ ಕೆಲಸ ಹಿರಿಯರಿಂದ ಆಗಬೇಕು ಎಂದ‌ರು.

Advertisement

Udayavani is now on Telegram. Click here to join our channel and stay updated with the latest news.

Next