Advertisement

Supreme Court: ಸಾಮಾಜಿಕ ತಾಣ ಬಳಸುವವರು ಪರಿಣಾಮಗಳ ಬಗ್ಗೆಯೂ ತಿಳಿದಿರಬೇಕು: ಸುಪ್ರೀಂ

10:07 PM Aug 19, 2023 | Team Udayavani |

ನವದೆಹಲಿ: ಸಾಮಾಜಿಕ ತಾಣಗಳನ್ನು ಬಳಸುವವರು ಅದರ ಪರಿಣಾಮಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಫೇಸ್‌ಬುಕ್‌ ಪೋಸ್ಟೊಂದನ್ನು ಹಂಚಿಕೊಂಡಿದ್ದಕ್ಕೆ ಪ್ರತಿಯಾಗಿ, ತಮ್ಮ ವಿರುದ್ಧ ಆರಂಭವಾಗಿರುವ ಕ್ರಿಮಿನಲ್‌ ವಿಚಾರಣೆಯನ್ನು ರದ್ದುಪಡಿಸಬೇಕು ಎಂಬ ತಮಿಳುನಾಡು ಶಾಸಕ ಎಸ್‌.ವಿ.ಶೇಖರ್‌ ಅರ್ಜಿಯನ್ನೂ ತಿರಸ್ಕರಿಸಿದೆ.

Advertisement

ಅವರು 2018, ಏ.19ರಂದು ಮಹಿಳಾ ಪತ್ರಕರ್ತರ ವಿರುದ್ಧ ಅತ್ಯಂತ ಅಸಭ್ಯ, ನಿಂದನಾತ್ಮಕ, ಅವಮಾನಕಾರಿ ಅಂಶಗಳಿದ್ದ ಪೋಸ್ಟೊಂದನ್ನು ಹಂಚಿಕೊಂಡಿದ್ದರು. ಅದರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಆದರೆ ಇದು ಗೊತ್ತಿಲ್ಲದೇ ಆಗಿದ್ದು, ಆ ಹೊತ್ತಿಗೆ ಕಣ್ಣಿಗೆ ಡ್ರಾಪ್‌ ಬಿಟ್ಟುಕೊಂಡಿದ್ದರಿಂದ ಅದರಲ್ಲಿನ ಕಂಟೆಂಟ್‌ ಏನೆಂದು ಗೊತ್ತಾಗಿರಲಿಲ್ಲ. ಅದು ಅಸಭ್ಯವಾಗಿದೆ ಎಂದು ಗೊತ್ತಾದ ಕೆಲವೇ ಗಂಟೆಗಳಲ್ಲಿ ಶೇಖರ್‌ ಪೋಸ್ಟನ್ನು ಅಳಿಸಿದ್ದಾರೆ. ಮಾತ್ರವಲ್ಲ ಕ್ಷಮೆ ಕೇಳಿದ್ದಾರೆ, ಆದ್ದರಿಂದ ಕ್ರಿಮಿನಲ್‌ ವಿಚಾರಣೆ ಕೈಬಿಡಬೇಕೆಂದು ಅವರ ಪರ ವಕೀಲರು ಆಗ್ರಹಿಸಿದ್ದರು. ಆದರೆ ಇದನ್ನು ಸರ್ವೋಚ್ಚ ಪೀಠ ಮಾನ್ಯ ಮಾಡಿಲ್ಲ. ಇದಕ್ಕೂ ಮುನ್ನ ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿ ಕೂಡ ಈ ಅರ್ಜಿಗೆ ಸೋಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next