Advertisement

ಜನಸೇವೆಯಿಂದ ಜೀವನ ಪಾವನಗೊಳಿಸಿ: ಸುಬ್ಬು

03:28 PM Apr 22, 2021 | Team Udayavani |

ಕೋಲಾರ: ಜನಸೇವೆ ಮೂಲಕ ನಮ್ಮಜೀವನವನ್ನು ಪಾವನಗೊಳಿಸಿಕೊಳ್ಳಬೇಕುಎಂದು ಯುವ ಶಕ್ತಿ ಸೇವಾ ಸಮಿತಿರಾಜ್ಯಾಧ್ಯಕ್ಷ ಯುವಶಕ್ತಿ ಸುಬ್ಬು ಹೇಳಿದರು.ನಗರದ ಪೇಟೆಚಾಮನಹಳ್ಳಿಯಲ್ಲಿಯುವಶಕ್ತಿ ಸೇವಾ ಸಮಿತಿಯಿಂದ ನಡೆದರಾಮನವಮಿಯಲ್ಲಿ ಮಾತನಾಡಿ, ಮನಸ್ಸುಮತ್ತು ಆತ್ಮ ಸಮನ್ವಯಗೊಳಿಸಲು ಧ್ಯಾನಅವಶ್ಯ.

Advertisement

ಧ್ಯಾನದ ಮೂಲಕ ನಮ್ಮನ್ನು ನಾವುಶುದ್ಧಗೊಳಿಸಿಕೊಳ್ಳಬೇಕು. ಕಷ್ಟದಲ್ಲಿಇರುವವರಿಗೆ ಸಹಾಯ ಹಸ್ತ ಮಾಡುವುದೇಮಾನವ ಧರ್ಮ ಎಂದರು.

ವಿಶ್ವವೇ ಒಂದು ಕುಟುಂಬ: ಸರ್ಕಾರಿನೌಕರರ ಸಂಘದ ಅಧ್ಯಕ್ಷ ಸುರೇಶ್‌ ಬಾಬುಮಾತಾನಾಡಿ, ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ ಧರ್ಮವೆಂಬ ಕಟ್ಟಳೆಗಳನ್ನುಬದಿಗೊತ್ತಿ ಈ ದಿನದಲ್ಲಿ ಮಜ್ಜಿಗೆ,ಪಾನಕಗಳನ್ನು ಹಂಚುವ ಮೂಲಕ ಈನಾಡಿನ ಸೌಹಾರ್ದತೆಯನ್ನು ಮೆರೆಯಬೇಕು.ಇಡೀ ವಿಶ್ವವೇ ಒಂದು ಕುಟುಂಬದಂತೇಭಾವಿಸಬೇಕು ಎಂದು ಹೇಳಿದರು.ಸಿನಿಮಾ ನಟ ಕರಾಟೆ ಶ್ರೀನಿವಾಸ,ಅಂಬೇಡ್ಕರ್‌ ಸ್ವಾಭಿಮಾನಿ ಬಳಗದರಾಜ್ಯಾಧ್ಯಕ್ಷ ವಕೀಲ ಮಂಜುನಾಥಮಾತನಾಡಿದರು.

ಯುವಶಕ್ತಿ ಸೇವಾ ಸಮಿತಿಸದಸ್ಯರಾದ ಹಾರೋಹಳ್ಳಿ ಕಲ್ಯಾಣ್‌,ಹಾರೋಹಳ್ಳಿ ಕೇಶವ, ಅಮ್ಮೇರಹಳ್ಳಿ ಮುರಳಿ,ಹೆಮೇಶ್‌, ರಂಜಿತ್‌, ಸಂದೀಪ್‌, ದರ್ಶನ್‌ಪಾಲ್ಗೊಂಡಿದ್ದರು.ವೇಮಗಲ್‌ನಲ್ಲಿರಾಮನವಮಿ ಆಚರO

ಕೋಲಾರ: ತಾಲೂಕಿನ ವೇಮಗಲ್‌ಪಟ್ಟಣದ ಮಹಡಿ ಮನೆ ವೆಂಕಟೇಶ್‌ಕುಟುಂಬದ ಸದಸ್ಯರು ಆಂಜನೇಯದೇವಾಲಯದಲ್ಲಿ ಸರಳವಾಗಿ ರಾಮನವಮಿ ಹಬ್ಬವನ್ನು ಆಚರಿಸಿದರು.

Advertisement

ದೇವರಿಗೆ ವಿಶೇಷ ಅಭಿಷೇಕ, ಹೂವಿನಅಲಂಕಾರ, ಪೂಜೆ ಸಲ್ಲಿಸಿ, ಅದಷ್ಟುಬೇಗನೆ ಕೊರೊನಾ ಮುಕ್ತವಾಗಿ ರೈತರಿಗೆಜೀವನ ಮಾಡಲಿ ದಾರಿ ದೊರಕಲಿಎಂದು ದೇವರಲ್ಲಿ ಮೊರೆ ಹೋದರು.ಹಬ್ಬದ ಪ್ರಯುಕ್ತ ಪುಟಾಣಿ ಮಕ್ಕಳುಸಂಪ್ರದಾಯ ಉಡುಗೊರೆ ತೊಟ್ಟಿಕೊಂಡು ನೋಡುಗರ ಗಮನ ಸೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next