ಶಿರ್ವ: ಶಿಕ್ಷಣದ ಅಭಿವೃದ್ಧಿಯ ಭರದಲ್ಲಿ ಜಾಲತಾಣ, ಮೊಬೈಲ್‌ಗಳ ಮೂಲಕ ಕ್ಷಣಾರ್ಧದಲ್ಲಿ ಎಲ್ಲ ಮಾಹಿತಿಗಳು ಲಭ್ಯವಿದ್ದು, ಅದನ್ನು ಬಳಸುವುದರಲ್ಲಿ ಯುವ ಜನತೆ ಎಡವುತ್ತಿದೆ. ಮೊಬೈಲ್‌ನ ಮಿತ ಬಳಕೆ, ಅಗತ್ಯತೆಯ ಅರಿವಿನೊಂದಿಗೆ ನಿರ್ದಿಷ್ಟ ಗುರಿ ಇಟ್ಟು ಶಿಕ್ಷಣ ಪಡೆಯುವ ಅನಿವಾರ್ಯತೆ ಇದೆ. ಯುವ ಸಮುದಾಯ ಜಾಲ ತಾಣಗಳ ದುರ್ಬಳಕೆ, ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿ ಜೀವನ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಾಗಿರುವಂತೆ ನಿವೃತ್ತ ಯೋಧ, ಉಡುಪಿ ಜಿಲ್ಲಾ ಎಎಸ್‌ಪಿ ಕುಮಾರಚಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬುಧವಾರ ಶಿರ್ವ ಹಿಂದೂ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ 72ನೇ ವರ್ಷದ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೈಹಿಕ ದೃಢತೆ, ಮಾನಸಿಕ ಆರೋಗ್ಯ, ಜೀವನದಲ್ಲಿ ಶಿಸ್ತು ನಿಯಮಗಳ ಪಾಲನೆಯಲ್ಲಿ ದೈಹಿಕ ಶಿಕ್ಷಣ ಪ್ರೇರಣಾಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವಂತೆ ತಿಳಿಸಿದರು.
ಮುಖ್ಯ ಅತಿಥಿ ವಿದ್ಯಾವರ್ಧಕ ಸಂಘದ ಆಡಳಿ ತಾಧಿಕಾರಿ ಪ್ರೊಣ ವೈ. ಭಾಸ್ಕರ ಶೆಟ್ಟಿ ಮಾತನಾಡಿ, ಸಂಸ್ಥೆಯ 72ನೇ ಕ್ರೀಡೋತ್ಸವ ನಡೆಯುತ್ತಿದ್ದು, ಇದರ ಬೆಳವಣಿಗೆಗೆ ಕಾರಣಕರ್ತರಾದ ಹಿರಿಯರನ್ನು ಸ್ಮರಿಸಿ, ನಿವೃತ್ತ ಯೋಧ ಹಾಗೂ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಕ್ರೀಡಾಕೂಟವನ್ನು ಉದ್ಘಾಟಿಸುತ್ತಿರುವುದು ನಮಗೆಲ್ಲರಿಗೂ ಸ್ಫೂರ್ತಿ ಹಾಗೂ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳಿಗೆ ಯೋಧರೇ ರೋಲ್ ಮಾಡೆಲ್‌ಗಳಾಬೇಕೇ ಹೊರತು ಫಿಲ್ಮ್ಸ್ಟಾರ್‌ಗಳಲ್ಲ. ನಮ್ಮ ಸಂಸ್ಥೆಯಲ್ಲಿ ವಿಶಾಲವಾದ ಕ್ರೀಡಾಂಗಣ ಹಾಗೂ ಎಲ್ಲ ಕ್ರೀಡಾ ಸಲಕರಣೆಗಳಿದ್ದು, ಶಾಲಾ ತಂಡಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ಮಾತನಾಡಿ, ಸೋಲು ಗೆಲುವು ಮುಖ್ಯವಲ್ಲ. ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಕಿಲಾ ವೇದಿಕೆಯಲ್ಲಿ ದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಎ. ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲೆ ಡಾಣ ನಯನಾ ಪಕ್ಕಳ, ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ನಿಶಾ ಶೆಟ್ಟಿ, ಹಿಂದೂ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಶೆಟ್ಟಿ, ಕುತ್ಯಾರು ವಿದ್ಯಾದಾಯಿನಿ ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಸುರೇಂದ್ರನಾಥ್ ಶೆಟ್ಟಿ, ದೇವೇಂದ್ರ ಹೆಗ್ಡೆ ನಿರ್ದೇಶನದಲ್ಲಿ ಕ್ರೀಡಾಕೂಟದ ಸಂಯೋಜನೆ ಮಾಡಲಾಗಿದ್ದು, ಶಾಲಾ ವಿದ್ಯಾರ್ಥಿ ನಾಯಕ ಹರಿಕೃಷ್ಣ ತಂತ್ರಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ದೇವಿ ಶೆಟ್ಟಿ, ಸುಪ್ರೀತಾ ಶೆಟ್ಟಿ ನಿರೂಪಿಸಿದರು. ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ನಾಯಕ ಆದರ್ಶ್ ಹೆಗ್ಡೆ ವಂದಿಸಿದರು.