ಕ್ಯಾಲಿಫೋರ್ನಿಯಾ: ಕೋವಿಡ್ ವೈರಸ್ ಹಾಗಂತೆ.. ಹೀಗಂತೆ.. ಎಂಬ ಅಂತೆ ಕಂತೆಗಳ ಸುದ್ದಿಗಳು ಈಗ ಬೇಕಾದಷ್ಟಿವೆ. ಇವುಗಳೆಲ್ಲವೂ ನಾವು ನಿತ್ಯ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಲೇ ಇರುತ್ತವೆ. ಇಂತಹ ಸುಳ್ಳು ಸುದ್ದಿಗಳ ಪ್ರವಾಹ, ಲಸಿಕೆ ಕಾರ್ಯಕ್ರಮದ ವಿರುದ್ಧ ಸುಳ್ಳು ವರದಿಗಳು ಇತ್ಯಾದಿ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಲು ಸಾಮಾಜಿಕ ಜಾಲತಾಣ ಮಾಲಕತ್ವದ ಟೆಕ್ ಕಂಪೆನಿಗಳೇ ಆಗುತ್ತಿಲ್ಲ ಎನ್ನಲಾಗಿದೆ.
ಇದರೊಂದಿಗೆ ಶೇ.90ರಷ್ಟು ಸುಳ್ಳುಗಳಿಗೆ ಕಂಪೆನಿಗಳಿಗೆ ಯಾವುದೇ ಎಚ್ಚರಿಕೆಯನ್ನೂ ಹಾಕಲು ಸಾಧ್ಯವಾಗಿಲ್ಲ. ಫೇಸ್‌ಬುಕ್ ವಕ್ತಾರರು ಹೇಳುವಂತೆ “ಈವರೆಗೆ ನಾವು ಸಾವಿರಾರು ಪೋಸ್ಟಗಳನ್ನು ಡಿಲೀಟ್ ಮಾಡಿದ್ದೇವೆ. ಮಾರ್ಚ್-ಎಪ್ರಿಲ್ ವೇಳೆಗೆ ನಾವು 90 ಲಕ್ಷ ಕೋವಿಡ್ ಕುರಿತ ಸುದ್ದಿಗಳಿಗೆ ಎಚ್ಚರಿಕೆ ಲೇಬಲ್‌ಗಳನ್ನು ಹಾಕಿದ್ದೇವೆ. ಇದರಿಂದಾಗಿ ಜನರು ಶೇ.95ರಷ್ಟು ನೋಡುವುದು ನಿಂತಿದೆ ಎಂದಿದ್ದಾರೆ.
ಟ್ವಿಟರ್ ಹೇಳುವ ಪ್ರಕಾರ ಸಾಮಾಜಿಕವಾಗಿ ಆ ಮಾಹಿತಿ ಹಾನಿ ಮಾಡುತ್ತದೆ ಎಂದು ತಿಳಿದಾಗ ಅದನ್ನು ಅಳಿಸಲಾಗುತ್ತದೆ ಎಂದು ಹೇಳಿದೆ. ಅದರ ಹೇಳಿಕೆ ಪ್ರಕಾರ ಕೋವಿಡ್ ವಿಚಾರದಲ್ಲಿ ಸಮರ್ಪಕ ಮಾಹಿತಿ ನೀಡದ, ಸಮಸ್ಯೆಗಳಿರುವ ಮಾಹಿತಿ ನೀಡಿದ ಪ್ರತಿ ಟ್ವೀಟ್‌ನ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಕಂಪೆನಿಯ ಸ್ವಯಂಚಾಲಿತ ವ್ಯವಸ್ಥೆ 43 ಲಕ್ಷ ಅಕೌಂಟ್‌ಗಳಿಗೆ ಕೋವಿಡ್ ವಿಚಾರದಲ್ಲಿ ನಿಯಂತ್ರಣ ಹೇರಿದೆ. ಅಲ್ಲದೇ ಅವುಗಳು ದುರುದ್ದೇಶದ ಗುಣನಡತೆ ಹೊಂದಿದ್ದಾಗಿ ಗುರುತಿಸಿದೆ. ಮಾ.18ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಆ ಪ್ರಕಾರ ನಡೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
ಡಿಜಿಟಲ್ ವೈರತ್ವ ನಿಯಂತ್ರಣ ಕುರಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಮ್ರಾನ್ ಅಹ್ಮದ್ ಅವರು ಹೇಳುವಂತೆ, ಟೆಕ್ ಕಂಪೆನಿಗಳು ಹೇಳುವಂತೆ ಅವರು ತಪ್ಪು ಮಾಹಿತಿ ಮತ್ತು ಅವುಗಳ ವಿರುದ್ಧ ಕೈಗೊಳ್ಳುವ ಕ್ರಮಗಳು ನೈಜವಾದ ಉದ್ದೇಶಗಳನ್ನು ಈಡೇರಿಸುತ್ತಿಲ್ಲ. ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರೂ, ಅವರು ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ಸಾಬೀತು ಪಡಿಸಿವೆ ಎಂದು ಹೇಳಿದ್ದಾರೆ.
ಸಮೀಕ್ಷೆ ಟ್ವಿಟರ್ ಕೇವಲ ಶೇ.3ರಷ್ಟು ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಂಡಿದೆ. ಫೇಸ್‌ಬುಕ್ ಶೇ.10ರಷ್ಟು ಪೋಸ್ಟ್‌ಗಳ ವಿರುದ್ಧ ಕ್ರಮಕೈಗೊಂಡಿದೆ. 334 ಪೋಸ್ಟ್‌ಗಳ ವಿರುದ್ಧ ಎಚ್ಚರಿಕೆ ಹಾಕಿದೆ.