ನವದೆಹಲಿ: ಅನಾಮಧೇಯ ವ್ಯಕ್ತಿಯೊಬ್ಬ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಮಹಿಳೆಗೆ ಬೆದರಿಕೆ ಹಾಕಲು ಯತ್ನಿಸಿದ್ದಾನೆ ಎಂದು ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ದೂರು ದಾಖಲಿಸಿದೆ. ಅಲ್ಲದೇ ಈ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ತನಿಖೆಯ ಸಮಯದಲ್ಲಿ, ಇನ್‌ಸ್ಟಾಗ್ರಾಮ್ ನ ಕಾನೂನು ಜಾರಿ ನಿರ್ದೇಶನಾಲಯದಿಂದ ಶಂಕಿತ Instagram ID ಗಳ ವಿವರಗಳನ್ನು ಸಂಕ್ಷಿಪ್ತವಾಗಿ ಪಟ್ಟಿ ಮಾಡಲಾಗಿದ್ದು, ಇದಲ್ಲದೆ, ಸೇವಾ ಪೂರೈಕೆದಾರರಿಂದ ಮೊಬೈಲ್ ಸಂಖ್ಯೆ ಮತ್ತು ಕೆಲವು ಐಪಿ ವಿಳಾಸಗಳನ್ನು ಪಡೆಯಲಾಗಿದೆ.
ಥಾನ್ ಸಿಂಗ್ ನಗರದ ನಿವಾಸಿ ಮಿಥುನ್ ತಿವಾರಿ ಎಂಬ ಶಂಕಿತ ವ್ಯಕ್ತಿಯನ್ನು ಈ ನಕಲಿ Instagram ಖಾತೆಯ ಬಳಕೆದಾರ ಎಂದು ಗುರುತಿಸಲಾಗಿದೆ.
ಎಸಿಪಿ ವಿಕೆಪಿಎಸ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಮಿಥುನ್ ತಿವಾರಿ ಎಂದು ಗುರುತಿಸಲಾದ Instagram ಬಳಕೆದಾರರನ್ನು ತಂಡವು ಯಶಸ್ವಿಯಾಗಿ ಬಂಧಿಸಿದೆ. ಆರೋಪಿ ಮಿಥುನ್ ತಿವಾರಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Related Articles
ಈ ನಕಲಿ ಖಾತೆಗಳ ಬಲೆಗೆ ಬಿದ್ದವರನ್ನು ಹಿಂಬಾಲಿಸಲು ಅವನು Instagram ನಲ್ಲಿ ಮತ್ತಷ್ಟು ನಕಲಿ ಖಾತೆಗಳನ್ನು ರಚಿಸಿದನು. ಒಂದು ವೇಳೆ ಸೋಷಿಯಲ್ ಮಿಡಿಯಾ ಖಾತೆಯನ್ನು ಹಿಂಬಾಲಿಸಿದ ಹೆಣ್ಣು ಅವನ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಬೆದರಿಕೆ ಹಾಕಿವ ತೆವಲು ಅವನಿಗಿತ್ತು ಎನ್ನಲಾಗಿದೆ.
ಆರೋಪಿ ಮಿಥುನ್ ತಿವಾರಿ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮನಾಗಿದ್ದ ಎಂಬ ಮಾಹಿತಿ ತನಿಖೆಯ ಮೂಲಕ ತಿಳಿದಿದೆ.