Advertisement
ಫೇಸ್‌ಬುಕ್ 2012ರಲ್ಲಿ ಇನ್‌ಸ್ಟಾಗ್ರಾಮ್ ಅನ್ನು 715 ಮಿಲಿಯನ್ ಡಾಲರ್‌ಗೆ ಮತ್ತು ಎರಡು ವರ್ಷಗಳ ಬಳಿಕ ವಾಟ್ಸಾಪ್ ಅನ್ನು 22 ಬಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಈ ಎರಡು ಕಂಪೆನಿಗಳನ್ನು ಖರೀದಿಸುವ ಮೂಲಕ ತನಗೆ ಭವಿಷ್ಯದಲ್ಲಿ ಎದುರಾಗಬಹುದಾದ ಸ್ಪರ್ಧೆಯನ್ನು ನಿಯಂತ್ರಿಸಲು ಫೇಸ್‌ಬುಕ್ ಬಯಸಿದೆ ಎಂದು ಬುಧವಾರ ಸಲ್ಲಿಸಲಾದ ದೂರಿನಲ್ಲಿ ಎಫ್‌ಟಿಸಿ ತಿಳಿಸಿದೆ.
ಎಫ್‌ಟಿಸಿ ಫೇಸ್‌ಬುಕ್ ಸಂಸ್ಥೆಯನ್ನು ಎರಡು ಸಂಸ್ಥೆಯನ್ನಾಗಿ ಮಾಡಲು ಸೂಚಿಸಲಾಗಿದೆ. ಇದು ಸಾಧ್ಯವಾದರೆ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಆದಾಯಕ್ಕೆ ಕೊಕ್ಕೆ ಬೀಳಲಿದೆ. ಕಂಪೆನಿಯ ಆದಾಯದ ಬೆಳವಣಿಗೆಗೆ ಇನ್‌ಸ್ಟಾಗ್ರಾಮ್ ಪ್ರಮುಖ ಕೊಡುಗೆ ನೀಡುತ್ತಿದೆ. ಡಿಜಿಟಲ್ ಕಾಮರ್ಸ್ ಗೆ ಫೇಸ್‌ಬುಕ್ ವಾಟ್ಸಾಪ್ ಅನ್ನು ಆವಲಂಭಿಸಿದೆ. ಹೀಗಾಗಿ ಈ ಎರಡು ಟೆಕ್ ಪ್ಲಾಟ್‌ಫಾರ್ಮ್‌ಗಳನ್ನು ಫೇಸ್‌ಬುಕ್‌ನಿಂದ ಪ್ರತ್ಯೇಕಿಸಬೇಕು ಎಂದು ಎಫ್‌ಟಿಎ ಹೇಳಿದೆ. ವೆಡ್‌ಬುಷ್ ಸೆಕ್ಯುರಿಟೀಸ್‌ನ ವಿಶ್ಲೇಷಕ ಡಾನ್ ಐವಿಸ್ ಅವರು, ಫೇಸ್‌ಬುಕ್ ಅನ್ನು ವಿಭಜಿಸುವ ಕಲ್ಪನೆಯು ಕಾರ್ಯಗತವಾಗುವುದು ಕಷ್ಟ ಎಂದಿದ್ದಾರೆ. ಏಕೆಂದರೆ ಅದು ಕಂಪನಿಯ ಒಟ್ಟು ವ್ಯವಹಾರ ಮಾದರಿಯನ್ನು ಹಾಳು ಮಾಡುತ್ತದೆ. ಕಳೆದ 16 ವರ್ಷಗಳಲ್ಲಿ ಫೇಸ್‌ಬುಕ್‌ನ ಮೂರು ಪ್ರಮುಖ ಸ್ವಾಧೀನಗಳಲ್ಲಿ ಇನ್‌ಸ್ಟಾಗ್ರಾಮ್ ಒಂದಾಗಿದೆ. ಕೆಲವು ಕಾನೂನುಗಳಲ್ಲಿನ ಬದಲಾವಣೆಗಳಿಗೆ ಸಂಸತ್ತಿನ ಅನುಮೋದನೆ ಅಗತ್ಯವಿರುವುದರಿಂದ ಫೇಸ್‌ಬುಕ್ ಅನ್ನು ತುಂಡುಗಳಾಗಿ ವಿಭಜಿಸುವ ಸಾಧ್ಯತೆ ಕಡಿಮೆ. ಆದರೆ ನ್ಯಾಯಾಲಯದ ತೀರ್ಪಿನ ಮೇಲೆ ಇದು ಅವಲಂಭಿಸಿದೆ. ಆದರೆ ಇದು ಮುಂಬರುವ ದಿನಗಳಲ್ಲಿ ಫೇಸ್‌ಬುಕ್ ಷೇರುಗಳ ಮೇಲೆ ಒತ್ತಡವನ್ನುಂಟು ಮಾಡಲಿದೆ.
Related Articles
Advertisement
ಶಾಪಿಂಗ್ ನತ್ತ ಫೇಸ್‌ಬುಕ್ ಚಿತ್ತಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತಿನ ಹೆಚ್ಚಳದಿಂದಾಗಿ, ಬಳಕೆದಾರರ ಅನುಭವವು ಕಡಿಮೆಯಾಗುತ್ತಿದೆ. ಆದ್ದರಿಂದ ಫೇಸ್‌ಬುಕ್ ಈಗ ಶಾಪಿಂಗ್ ಮೇಲೆ ದೃಷ್ಟಿ ಕೇಂದ್ರೀಕರಿಸುತ್ತಿದೆ. ಕಂಪೆನಿಯು ಈ ವರ್ಷ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಶಾಪಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತ್ತು. ಪೂರಕವಾಗಿ ಗ್ರಾಹಕರೊಂದಿಗೆ ಸಂವಹನ ನಡೆಸಲು ವಾಟ್ಸಾಪ್‌ನಲ್ಲಿ ಕಂಪೆನಿಗಳನ್ನು ಸಜ್ಜುಗೊಳಿಸುವ ಪ್ರಯತ್ನವನ್ನು ಪ್ರಾರಂಭಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ವಾಟ್ಸಾಪ್ ಚಾಟಿಂಗ್ ಅನ್ನು ಇನ್‌ಸ್ಟಾಗ್ರಾಮ್ ಶಾಪಿಂಗ್ಗೆ ಸಂಪರ್ಕಿಸಲು ಫೇಸ್‌ಬುಕ್ ಯೋಜಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ಸಂಸ್ಥೆಗಳು ದೂರವಾದರೆ ತೊಂದರೆ ಎದುರಿಸಬೇಕಾಗುತ್ತದೆ. ಇನ್‌ಸ್ಟಾಗ್ರಾಮ್ ಆದಾಯ
ಫೇಸ್‌ಬುಕ್ ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಿಂದ ಹೆಚ್ಚು ಆದಾಯ ಪಡೆಯುತ್ತಿದೆ. ಫೋಟೋ ಮತ್ತು ವೀಡಿಯೋ ಹಂಚಿಕೆ ಅಪ್ಲಿಕೇಶನ್‌ನಿಂದ ಕಂಪೆನಿಯು 2019 ರಲ್ಲಿ 20 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿತ್ತು. ಇದು ಕಳೆದ ವರ್ಷ ಫೇಸ್‌ಬುಕ್‌ನ ಜಾಹೀರಾತು ಮಾರಾಟದ ಆದಾಯದ ಸುಮಾರು ಶೇ. 29ರಷ್ಟಿದೆ. ಸಂಶೋಧನಾ ಸಂಸ್ಥೆ ಇ ಮಾರ್ಕೆಟರ್ ಪ್ರಕಾರ, ಇನ್‌ಸ್ಟಾಗ್ರಾಮ್‌ನ ಮಾರಾಟ ಆದಾಯವು 2020ರಲ್ಲಿ 28.1 ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ, ಇದು ಫೇಸ್‌ಬುಕ್‌ನ ಒಟ್ಟು ಜಾಹೀರಾತು ಆದಾಯದ ಶೇ. 37ಕ್ಕೆ ಸಮನಾಗಿರುತ್ತದೆ. ಇದರರ್ಥ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಿಂದ ಜಾಹೀರಾತು ಆದಾಯದಲ್ಲಿ ಹೆಚ್ಚಿನ ಪಾಲನ್ನು ಪಡೆಯಲಿದೆ. ಇನ್ನು ಫೇಸ್‌ಬುಕ್ ವಾಟ್ಸ್‌ಆ್ಯಪ್‌ನಿಂದ ಯಾವುದೇ ಆದಾಯವನ್ನು ಈಗ ಗಳಿಸುವುದಿಲ್ಲ. ಆದರೆ ಎರಡು ಶತಕೋಟಿಗೂ ಹೆಚ್ಚು ಬಳಕೆದಾರರಿಗೆ ಪಾವತಿ, ವಾಣಿಜ್ಯ, ಗ್ರಾಹಕ ಸೇವಾ ಸಾಧನ ವ್ಯವಹಾರ ವಿಸ್ತರಿಸಲು ಗಮನ ಹರಿಸುತ್ತಿದ್ದು, ಅದು ಮುಂಬರುವ ದಿನಗಳಲ್ಲಿ ಜಾರಿಯಾಗಲಿದೆ. ಹೀಗಾಗಿ ಭವಿಷ್ಯದಲ್ಲಿ ವಾಟ್ಸ್‌ಆ್ಯಪ್‌ನಿಂದ ಆದಾಯ ಬರಲು ಆರಂಭವಾದ ಬಳಿಕ ಫೇಸ್‌ಬುಕ್‌ನ ಬೆಳವಣಿಗೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಫೇಸ್‌ಬುಕ್‌ನಿಂದ ಈ ಎರಡು ಪ್ರಮುಖ ಸಂಸ್ಥೆಗಳು ಕೈ ತಪ್ಪಲ್ಲಿದ್ದು ಇದು ಸಹಜವಾಗಿ ಸಂಸ್ಥೆಯ ಆತಂಕಕ್ಕೆ ಕಾರಣವಾಗಿದೆ.