Advertisement

ಸಾಮಾಜಿಕ ಮಾಧ್ಯಮಗಳಲ್ಲಿ ವೇತನ ಮಾಹಿತಿ ನೀಡುವುದಿಲ್ಲ

01:49 AM Feb 12, 2021 | Team Udayavani |

ಹೊಸದಿಲ್ಲಿ: ಸರಕಾರಿ ಉದ್ಯೋಗಿಗಳ ವೇತನ ಸಂಬಂಧಿ ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳು ವುದಕ್ಕೆ ಹೊಸ ಕಾರ್ಮಿಕ ಕೋಡ್‌ನ‌ಲ್ಲಿ ಅವಕಾಶ ನೀಡುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

Advertisement

ವೇತನ ಪಾವತಿಯಲ್ಲಿ ಆಗಿರುವ ತಪ್ಪನ್ನು, ಕೈಬಿಟ್ಟು ಹೋಗಿರುವುದನ್ನು ಸರಿಪಡಿಸುವುದು, ವೇತನ ಚೀಟಿ ರವಾನೆ ಇತ್ಯಾದಿ ಎಲ್ಲ ವೇತನ ಸಂಬಂಧಿ ಸಂವಹನಗಳನ್ನು ಇದು ಒಳಗೊಳ್ಳಲಿದೆ ಎಂದು ಕಾರ್ಮಿಕ ಖಾತೆಯ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳನ್ನು ವೇತನ ಸಂಬಂಧಿ ಮಾಹಿತಿ ರವಾನೆಗೆ ಬಳಸಿಕೊಳ್ಳುವ ಅಂಶ ಹೊಸದಾಗಿ ಜಾರಿಗೆ ಬರಲಿರುವ ಕಾರ್ಮಿಕ ಕೋಡ್‌ನ‌ಲ್ಲಿ ಇರಲಿದೆ ಎಂದು ಈ ಹಿಂದೆ ಊಹಾಪೋಹಗಳು ಹಬ್ಬಿದ್ದು, ಇದರಿಂದ ಗೌಪ್ಯತೆಗೆ ಧಕ್ಕೆಯಾಗಬಹುದು ಎಂಬ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಈ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next