Advertisement

ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ: ರೈ

11:07 AM Sep 22, 2017 | |

ವಿಟ್ಲ : ಕುಮ್ಕಿ ಹಕ್ಕು ರದ್ದುಗೊಳಿಸಿ, ಬಡವರಿಗೆ ಹಕ್ಕುಪತ್ರ ನೀಡಿ ಸಾಮಾಜಿಕ ನ್ಯಾಯ ನೀಡಿರುವುದು ಕಾಂಗ್ರೆಸ್‌ ಸರಕಾರ. ದುರ್ಬಲ ವರ್ಗದವರಿಗೆ ಅವಕಾಶಗಳನ್ನು ಕಲ್ಪಿಸುತ್ತಲೇ ಬಂದ ಕಾಂಗ್ರೆಸ್‌ ಸರಕಾರ ಅದನ್ನು ಇಂದಿಗೂ ಮುಂದುವರಿಸುತ್ತಿದೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಗುರುವಾರ ವೀರಕಂಭ ಗ್ರಾಮದಿಂದ ಪ್ರತ್ಯೇಕಿಸಲ್ಪಟ್ಟು ಬೋಳಂತೂರು ಗ್ರಾಮ ಪಂಚಾಯತ್‌ ಆಗಿ ಪರಿವರ್ತನೆಗೊಂಡ ನೂತನ ಗ್ರಾಮ ಪಂಚಾಯತ್‌ನ ಕಟ್ಟಡ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು 94ಸಿ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಿಸಿ, ಸಮಾರಂಭದಲ್ಲಿ ಮಾತನಾಡಿದರು.

ಇಂದು ಕರ್ನಾಟಕ ರಾಜ್ಯವನ್ನು ಸರಕಾರ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ್ದು ಅಲ್ಪಸಂಖ್ಯಾಕ ಸಾಲ, ಅಂಬೇಡ್ಕರ್‌ ಮನೆ ಸಾಲ, ಆಶ್ರಯ ಮನೆ ಸಾಲ, ವಿದ್ಯುತ್‌ ಶುಲ್ಕಗಳನ್ನು ಮನ್ನಾ ಮಾಡಿದೆ ಎಂದರು.

ಜಿ.ಪಂ. ಸದಸ್ಯರಾದ ಎಂ.ಎಸ್‌. ಮಹಮ್ಮದ್‌, ಚಂದ್ರಪ್ರಕಾಶ್‌ ಶೆಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸದಸ್ಯೆ ಶೋಭಾ ರೈ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೋಳಂತೂರು ಗ್ರಾ.ಪಂ. ಅಧ್ಯಕ್ಷೆ ಆಸ್ಯಮ್ಮ ಮತ್ತು ಸದಸ್ಯರು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಎಂಜಿನಿಯರ್‌ ಜಯಾನಂದ, ಆರ್‌ಎಫ್‌ಒ ಸುರೇಶ್‌, ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್‌ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ: ಇದೇ ಸಂದರ್ಭ ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಗ್ರಾಮಕರಣಿಕ ಕರಿಬಸಪ್ಪ ಅವರನ್ನು ಸಚಿವರು ಸಮ್ಮಾನಿಸಿದರು. ಬೆಂಗಳೂರು ಮಲ್ಲೇಶ್ವರಂನ ರಮಾನಾಥ ರೈ ಅಭಿಮಾನಿ ಬಳಗದ ವತಿಯಿಂದ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಟಾಸ್‌ ಆಲಿ, ಬೋಳಂತೂರು ಗ್ರಾ.ಪಂ. ಅಧ್ಯಕ್ಷೆ ಆಸ್ಯಮ್ಮ, ಉಪಾಧ್ಯಕ್ಷ ಚಂದ್ರಶೇಖರ ರೈ ಬೋಳಂತೂರು, ಸದಸ್ಯ ಯಾಕುಬ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ವಿತರಣೆ: ಬಂಟ್ವಾಳ ವಲಯ ಅರಣ್ಯ ಇಲಾಖೆ ವತಿಯಿಂದ ಪ.ಜಾತಿ/ಪ.ಪಂ. ಫಲಾನುಭವಿಗಳಿಗೆ ಗ್ಯಾಸ್‌ ಸಿಲಿಂಡರ್‌ ಮತ್ತು ಸ್ಟವ್‌ ವಿತರಿಸಲಾಯಿತು. 89 ಮಂದಿಗೆ 94ಸಿ ಹಕ್ಕುಪತ್ರ, ಒಬ್ಬರಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, 11 ಮಂದಿಗೆ ವಿವಿಧ ಪಿಂಚಣಿಗಳನ್ನು ವಿತರಿಸಲಾಯಿತು.

ಶಿಲಾನ್ಯಾಸ: 5.27 ಕೋಟಿ ರೂ. ವೆಚ್ಚದ ಬೋಳಂತೂರು -ತಾಳಿತ್ತನೂಜಿ- ನಾಡಾಜೆ -ಮದಕ- ಕೊಳ್ನಾಡು ರಸ್ತೆ ಕಾಮಗಾರಿ, 40 ಲಕ್ಷ ರೂ. ವೆಚ್ಚದ ನಾರಂಕೋಡಿ ರಸ್ತೆ ಕಾಂಕ್ರೀಟ್‌ ಕಾಮಗಾರಿ, 10 ಲಕ್ಷ ರೂ. ವೆಚ್ಚದ ಕೊಕ್ಕಪುಣಿ-ಬಚ್ಚಿರಕೋಡಿ ರಸ್ತೆ ಕಾಂಕ್ರೀಟ್‌ ಕಾಮಗಾರಿ, 4 ಲಕ್ಷ ರೂ. ವೆಚ್ಚದ ಗುಂಡಿಮಜಲು ಭಜನ ಮಂದಿರ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಪ್ರಸ್ತಾವನೆಗೈದರು. ಬೋಳಂತೂರು ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ರೈ ಬೋಳಂತೂರು ಸ್ವಾಗತಿಸಿದರು. ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ವಂದಿಸಿದರು. ನೌಫಲ್‌ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ರೈ ರಾಜೀನಾಮೆ ಬೇಡ
ರಾಜ್ಯದಲ್ಲಿ ಅತೀ ಹೆಚ್ಚು ಸರಕಾರಿ ಅನುದಾನ ಪಡೆದ ಜಿಲ್ಲೆ ದಕ್ಷಿಣ ಕನ್ನಡ. ಅತೀ ಹೆಚ್ಚು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ಜಿಲ್ಲೆ ದ.ಕ. ಜಿಲ್ಲೆ. ಅತೀ ಹೆಚ್ಚು ಅಭಿವೃದ್ಧಿ ಕಾರ್ಯ ಆಗಿರುವುದೇ ಇಲ್ಲಿ. ಆದರೆ ಯಾರೋ ಬೈಕ್‌ ರ‍್ಯಾಲಿಯಲ್ಲಿ ಹೊರಭಾಗದಿಂದ ಬಂದು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ನನ್ನ ಮತದಾರರು ಆಗ್ರಹಿಸಿದರೆ ನಾನು ರಾಜೀನಾಮೆ ಕೊಡಬೇಕು. ಹೇಳಿ ಏನು ಮಾಡಬೇಕು ಎಂದು ನಾಗರಿಕರನ್ನು ಪ್ರಶ್ನಿಸಿದರು. ಆಗ ಗ್ರಾಮಸ್ಥರು ಒಕ್ಕೊರಲಿನಿಂದ ರಾಜೀನಾಮೆ ನೀಡುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next