Advertisement

ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ ಸಾಕಾರ: ಸಚಿವ ರೈ

11:58 AM Dec 10, 2017 | Team Udayavani |

ಮಂಗಳೂರು: ಅನೇಕ ಪ್ರಗತಿಪರ ಕಾರ್ಯಕ್ರಮಗಳ ಮೂಲಕ ದೇಶದ ಬಡವರು, ಹಿಂದುಳಿದ ವರ್ಗ, ದುರ್ಬಲ ವರ್ಗಕ್ಕೆ ಶಕ್ತಿಯನ್ನು ತುಂಬುವ ಕಾರ್ಯಕ್ರಮವನ್ನು ಕಾಂಗ್ರೆಸ್‌ ಪಕ್ಷ ಮಾಡಿದೆ. ಸಾಮಾಜಿಕ ನ್ಯಾಯದ ಸಾಕಾರ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಡಾ| ರಾಜಶೇಖರ್‌ ಕೋಟ್ಯಾನ್‌ ಅಭಿಮಾನ ಬಳಗದ ವತಿಯಿಂದ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌
ನ್ಯಾಶನಲ್‌ ಕನ್ವೆನ್ಶನ್‌ ಹಾಲ್‌ನಲ್ಲಿ ಶನಿ ವಾರ ಆಯೋಜಿಸಿದ್ದ ಡಾ| ರಾಜಶೇಖರನ್‌ ಕೋಟ್ಯಾನ್‌ ರಾಜಕೀಯ ರಂಗ ಪ್ರವೇಶಕ್ಕೆ ಶುಭ ಕೋರುವ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಳೆಯ ಪ್ರಾಯದಲ್ಲೇ ಮುಂಬಯಿಗೆ ತೆರಳಿ ಸ್ವಂತಃ ಪರಿಶ್ರಮದ ಮೂಲಕ ಉನ್ನತ ಸಾಧನೆಯನ್ನು ಮಾಡಿರುವ ಡಾ| ರಾಜಶೇಖರ ಕೋಟ್ಯಾನ್‌ ಅವರು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಚಲನಚಿತ್ರ ರಂಗ ದಲ್ಲೂ ಯಶಸ್ವಿಯಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮೂಲಕ ರಾಜ ಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಅಲ್ಲೂ ಯಶಸ್ಸು ಕಾಣಲಿ ಎಂದು ಸಚಿವ ರೈ ಶುಭ ಕೋರಿದರು. 

ಡಾ| ರಾಜಶೇಖರ ಕೋಟ್ಯಾನ್‌ ಅವರನ್ನು ಮೈಸೂರು ಪೇಟಾ ತೋಡಿಸಿ, ಶಾಲು ಹೊದೆಸಿ, ಅಭಿನಂದನಾ ಪತ್ರ
ಅರ್ಪಿಸಿ ಸಮ್ಮಾನಿಸಲಾಯಿತು ಶ್ರೀಕ್ಷೇತ್ರ ಗೆಜ್ಜೆಗಿರಿನಂದನಬಿತ್ತಿಲ್‌ ಪಡುಮಲೆ ಇದರ ಕಾರ್ಯಾಧ್ಯಕ್ಷ ಪಿತಾಂಬರ ಹೆರಾಜೆ ಅಭಿನಂದನಾ ಭಾಷಣ ಮಾಡಿದರು. ಚಂದ್ರಶೇಖರ ಸುವರ್ಣ ಮೂಲ್ಕಿ ಅಭಿನಂದನಾ ಪತ್ರ ವಾಚಿಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ರಾಜಶೇಖರ ಕೋಟ್ಯಾನ್‌ ಅವರು ತನ್ನ ಮೇಲೆ ಪ್ರೀತಿ, ಅಭಿಮಾನ ತೋರಿದ ಅಭಿಮಾನಿ ಬಳಗ, ಪಕ್ಷದ ಎಲ್ಲ ನಾಯಕರಿಗೆ, ಸಮಾಜಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. 
ಸಚಿವ ಯು.ಟಿ. ಖಾದರ್‌, ಶಾಸಕ ರಾದ ಕೆ. ಅಭಯಚಂದ್ರ ಜೈನ್‌, ಮೊದಿನ್‌ ಬಾವಾ, ಜೆ.ಆರ್‌. ಲೋಬೋ, ಮೇಯರ್‌ ಕವಿತಾ ಸನಿಲ್‌, ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಎನ್‌.ಟಿ. ಪೂಜಾರಿ, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌, ಕೆಪಿಸಿಸಿ ಕಾರ್ಯದರ್ಶಿ ನವೀನ್‌ ಡಿ’ಸೋಜಾ, ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಉದ್ಯಮಿ ಸುರೇಂದ್ರ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಉದ್ಯಮಿ ಹರೀಶ್‌ ಜಿ. ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ದೀಪಕ್‌ ಪೂಜಾರಿ ಸ್ವಾಗತಿಸಿದರು. ರವಿ ಪೂಜಾರಿ
ವಂದಿಸಿದರು. ನರೇಶ್‌ ಕುಮಾರ್‌ ಸಸಿಹಿತ್ಲು, ದಿನೇಶ್‌ ಸುವರ್ಣ ನಿರೂ ಪಿಸಿದರು. 

Advertisement

ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next