ಶಿಗ್ಗಾವಿ: ಸಮಾಜದ ಎಲ್ಲ ಸಮುದಾಯದ ಜನರನ್ನು ಸಂಘಟಿಸಿ ಸದಸ್ಯತ್ವ ಅಭಿಯಾನ ಮೂಲಕ ರಾಜಕೀಯ ಮುಖ್ಯವಾಹಿನಿಗೆ ತರುವುದರಿಂದ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಬೇರುಗಟ್ಟಿಗೊಳಿಸಲು ಸಂಘಟನಾ ಕಾರ್ಯದ ಅಗತ್ಯತೆ ಕುರಿತು ತಿಳಿಸಿದ ಅವರು, ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಸದಸ್ಯತ್ವ ಅಭಿಯಾನ ಮಾಡದೆ ಈ ಅಭಿಯಾನ ನಿರಂತರವಾಗಿ ನಡೆಸಲಾಗುವುದು. ಅಸಂಘಟಿತ ಕಾರ್ಮಿಕರು. ವಿವಿಧ ಸಂಘದ ಸದಸ್ಯರು, ವ್ಯಾಪಾಸ್ಥರು, ದುಡಿಯುವ ವರ್ಗ, ಸ್ತ್ರೀ ಶಕ್ತಿ ಸಂಘಗಳು ಅಲ್ಲದೇ ಸಮಾಜದ ಎಲ್ಲ ವರ್ಗಗಳು ರಾಜ್ಯಕೀಯ ಮುಖ್ಯವಾಹಿನಿಗೆ ಬರಬೇಕು ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ನೇತೃತ್ವದಲ್ಲಿ ಬಿಜೆಪಿ ಚಾಣಾಕ್ಷ ಸಂಘಟನಾತ್ಮಕ ಹೋರಾಟದಲ್ಲಿ ಕೇಂದ್ರ ಸರ್ಕಾರದ ಅಧಿಕಾರ ಕಾಣುವಂತಾಗಿದ್ದು, ಜನಸಾಮಾನ್ಯರೂ ರಾಜಕೀಯ ಸ್ಥಾನಮಾನ ಪಡೆಯುವಂತಾಗಿದೆ.
ಮಹಾನ ನಾಯಕರು ಪ್ರಜೆಗಳೆ ಪ್ರಭುಗಳು. ಪ್ರಜಾಸೇವೆಯೇ ಪ್ರಜಾ ಪ್ರಭುತ್ವದ ತತ್ವಗಳೆಂದು ಅರಿಕೆಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಂ ಉದಾಸಿ, ಯು.ಬಿ ಬಣಕಾರ, ಶಿವಕುಮಾರ ಉದಾಸಿ, ಶಿವರಾಜ ಸಜ್ಜನ, ಮಂಜುನಾಥ ಕುನ್ನೂರು. ನೆಹರು ಓಲೆಕಾರ ಜಿಪಂ ಮಾಜಿ ಅಧ್ಯಕ್ಷ ಡಾ| ಮಲ್ಲೇಶಪ್ಪ ಹರಿಜನ, ಶಿವಾನಂದ ರಾಮಗಿರಿ, ಲಿಂಗರಾಜ ಚಪ್ಪರದಳ್ಳಿ, ಮಹೇಶ ಸಾಲಿಮಠ, ಶಿವಾನಂದ ಅಕ್ಕಿ, ಎಚ್.ಆರ್. ದುಮಡಿಗೌಡ್ರ, ಪಾಲಾಕ್ಷ ಪಾಟೀಲ, ವಿ.ವೈ. ಪಾಟೀಲ ಹಾಗೂ ಇತರರಿದ್ದರು. ಕಾರ್ಯಕ್ರಮದಲ್ಲಿ ಪುರಸಭೆಯ ಕಾರ್ಮಿಕರು, ಅಟೋ ಚಾಲಕರನ್ನು ಸನ್ಮಾನಿಸಲಾಯಿತು.