Advertisement

ಬೌದ್ಧ ಧರ್ಮದಿಂದ ಸಾಮಾಜಿಕ ನ್ಯಾಯ: ಜಂಜೀರ್‌

11:49 AM Oct 18, 2018 | |

ಹುಮನಾಬಾದ: ಜಾತಿ ವ್ಯವಸ್ಥೆ ಮತ್ತು ಮೇಲು ಕೀಳು ಮತ್ತು ಸ್ತ್ರೀ-ಪುರುಷ ಎಂಬ ಭೇದಭಾವ ಹೋಗಲಾಡಿಸಿ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ ಧರ್ಮ ಕೇವಲ ಬೌದ್ಧ ಧರ್ಮ ಮಾತ್ರ. ಅದೇ ಕಾರಣಕ್ಕೆ ಡಾ| ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದ್ದರು. ದೇಶಕ್ಕೆ ಸಂವಿಧಾನ ಕೊಡಮಾಡಿದ ಧರ್ಮದ ಜನಾಂಗಕ್ಕೆ ಈಗಲೂ ನಿರೀಕ್ಷಿತ ಪ್ರಮಾಣದಲ್ಲಿ ಗೌರವ ಸಿಗುತ್ತಿಲ್ಲ ಎಂದು ಬೌದ್ಧ ಧರ್ಮ ಅನುಯಾಯಿ ಸಂಜೀವಕುಮಾರ ಜಂಜೀರ್‌ ಹೇಳಿದರು.

Advertisement

ಕಲಬುರಗಿ ಬುದ್ಧ ವಿಹಾರದಲ್ಲಿ ಅ.19ರಂದು ನಡೆಯುವ 62ನೇ ಧರ್ಮ ಚಕ್ರ ಪ್ರವರ್ತನ ಬೃಹತ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯದ ಮುರುಮ್‌ ಗ್ರಾಮದಿಂದ ಬುದ್ಧ ವಿಹಾರಕ್ಕೆ ಪಾದಯಾತ್ರೆ ಮೂಲಕ ಹೊರಟ ಮಹಾರಾಷ್ಟ್ರದ ಸರ್ಕಾರ ಭೀಮರಾಜ ಗ್ರೂಪ್‌ ಸದಸ್ಯರಿಗಾಗಿ ಬುಧವಾರ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಈಗಲೂ ಬೌದ್ಧ ಅನುಯಾಯಿಗಳು ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲು ಹಿಂದೇಟು ಹಾಕಬಾರದು ಎಂದು ಹೇಳಿದರು.

ಸರ್ಕಾರ ಭೀಮರಾಜ ಗ್ರೂಪ್‌ ಸಂಸ್ಥಾಪಕ ಅಧ್ಯಕ್ಷ ಆನಂದ ಕಾಂಬ್ಳೆ ಮಾತನಾಡಿ, 2008ರವರೆಗೆ ನಾಗಪುರಕ್ಕೆ ಹೋಗುತ್ತಿದ್ದೇವು. ಆದರೆ 2009ರಲ್ಲಿ ಕಲಬುರಗಿಯಲ್ಲಿ ಬುದ್ಧ ವಿಹಾರ ನಿರ್ಮಾಣವಾದ ನಂತರ ಕಡ್ಡಾಯವಾಗಿ ಪಾದಯಾತ್ರೆ ಮೂಲಕ  ಆಗಮಿಸುತ್ತಿದ್ದೇವೆ. ಪಾದಯಾತ್ರೆಗೆ ಪ್ರಸ್ತುತ 10 ವರ್ಷ ಪೂರ್ಣಗೊಂಡಿದೆ.
 
ಪಾದಯಾತ್ರೆ ಉದ್ಧಕ್ಕೂ ಬೌದ್ಧಧರ್ಮ ಪ್ರಚಾರ ಸಂಬಂಧಿಸಿದ ಭಜನೆ ಪದ ಹಾಡುವ ಮೂಲಕ ಬೌದ್ಧ ಅನುಯಾಯಿಗಳನ್ನು ಜಾಗೃತಗೊಳಿಸುತ್ತೇವೆ ಎಂದು ಹೇಳಿದರು. ಸಮಿತಿ ಅಧ್ಯಕ್ಷ ಸುರಜ್‌ ಕಾಂಬ್ಳೆ ಮಾತನಾಡಿ, 2009ರಲ್ಲಿ 16ಜನರಿಂದ ಆರಂಭವಾದ ಪಾದಯಾತ್ರೆಯಲ್ಲಿ 10 ವರ್ಷದ ಅವಧಿಯಲ್ಲಿ 160ಕ್ಕೆ ಹೆಚ್ಚಿದೆ. ನಮ್ಮೊಂದಿಗೆ ಆಗಮಿಸುತ್ತಿರುವವರೆಲ್ಲರೂ 20ರಿಂದ 40ವರ್ಷ ವಯಸ್ಸಿನವರಾಗಿದ್ದಾರೆ ಎಂದು ಹೇಳಿದರು. 

ಕಾರ್ಯದರ್ಶಿ ವಿಕ್ಕಿ ಗವಾಯಿ ಮಾತನಾಡಿ, ಪಾದಯಾತ್ರೆ ಉದ್ದಕ್ಕೂ 20 ಕಿಮೀಗೊಮ್ಮೆ ವಿಶ್ರಾಂತಿ ಜತೆಯಲ್ಲಿ ನಾವೇ ಆಹಾರ ಸಿದ್ಧಪಡಿಸಿಕೊಂಡು ಊಟ ಮಾಡುತ್ತೇವೆ. ಕಳೆದ 10 ವರ್ಷಗಳಿಂದ ಹುಮನಾಬಾದ ಬೌದ್ಧ ಅನುಯಾಯಿಗಳು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸುತ್ತಿರುವುದರಿಂದ
ಶ್ರಮದ ಅರಿವೇ ಆಗುತ್ತಿಲ್ಲ ಎಂದು ಹೇಳಿದರು.

ಅಜಯ ಕಾಂಬ್ಳೆ, ಆಕಾಶ ಕಾಂಬ್ಳೆ, ದೀಪಕ, ವಿಶಾಲ ಗಾಯಕವಾಡ, ಪ್ರಶಾಂತ, ಸತೀಶ ಸಿಂಧೆ, ಹುಮನಾಬಾದ ಬೌದ್ಧ ಅನುಯಾಯಿಗಳಾದ ಸುರೇಶ ಘಾಂಗ್ರೆ, ವಿಜಯಕುಮಾರ ಜಂಜೀರ್‌, ಮಾಣಿಕರಾವ ಬಿ. ಪವಾರ, ರಾಜೇಶ ಶಿವನಾಯಕ, ಶಿವರಾಜ ಸಿಂಧನಕೇರಾ, ರೇವಣಸಿದ್ದಪ್ಪ, ಸುನೀಲ, ಭೀಮಶಾ, ಶೇಖರಕುಮಾರ ಕಾಂಬ್ಳೆ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next