Advertisement

ಸಂವಿಧಾನಕ್ಕೂ ಮೊದಲೇ ಸಾಮಾಜಿಕ ನ್ಯಾಯ

01:06 PM Apr 23, 2017 | Team Udayavani |

ಮೈಸೂರು: ದೇಶದಲ್ಲಿ ಸಂವಿಧಾನ ರಚನೆಯಾಗುವ ಮೊದಲೇ ಸಂವಿ ಧಾನದ ಆಶಯಗಳನ್ನು ಸಾಕಾರ ಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಶಯಗಳಿಗೆ ವಿರುದ್ಧ ವಾಗಿ ನಡೆಯುವುದು ಅವರಿಗೆ ಮತ್ತು ಹೆತ್ತವರಿಗೆ ಮಾಡಿದ ದ್ರೋಹ ವಾಗಲಿದೆ ಎಂದು ಜನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌ ತಿಳಿಸಿದರು.

Advertisement

ನಗರದ ಮಹಾರಾಜ ಕಾಲೇಜಿನ ಪಠ್ಯೇತರ ಚುಟುವಟಿಕೆಗಳ ಸಮಿತಿ ವತಿಯಿಂದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಠ್ಯೇತರ ಚಟು ವಟಿಕೆಗಳ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮೈಸೂರು ಅರಸರು ನಮಗೆ ಉತ್ತಮ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನೂ ದೇಶದಲ್ಲಿ ಸಂವಿಧಾನ ರಚನೆಯಾಗುವ ಮೊದಲೇ ಸಂವಿಧಾನದಲ್ಲಿರುವ ಆಶಯ ಗಳನ್ನು ಸಾಕಾರಗೊಳಿಸುವಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದಲ್ಲದೆ ಕುವೆಂಪು, ಸರ್ವಪಲ್ಲಿ ರಾಧಾಕೃಷ್ಣ, ತೇಜಸ್ವಿ ಹಾಗೂ ಲಂಕೇಶರು ಸೇರಿದಂತೆ ಅನೇಕ ಮಹನೀಯರ ಹೆಜ್ಜೆ ಗುರುತು ಇಂದಿಗೂ ಮಾಗದೆ ಉಳಿದಿದೆ. ಜೊತೆಗೆ ಚಾಮುಂಡೇಶ್ವರಿ, ಮಂಟೇಸ್ವಾಮಿ, ಮಲೆ ಮಹದೇಶ್ವ ರರು ನಮ್ಮ ಸಂಸ್ಕೃತಿ ಮತ್ತು ಪರಂ ಪರೆಯ ವಾರಸುದಾರರಾಗಿದ್ದು, ಅವರ ವಾರಸುದಾರಿಕೆಯನ್ನು ಅನುಸರಿಸಿ ಕೊಂಡು ಹೋದಾಗ ಮಾತ್ರ ಕನ್ನಡ ನಾಡಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಲು ಸಾಧ್ಯ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿರುವ ಸಂಗತಿ ಗಳು ನಮ್ಮ ನೈಜ ಸಂಸ್ಕೃತಿಯೇ ಎಂದು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದರು.

ಇದಕ್ಕೂ ಮೊದಲು ನಟ ಮತ್ತು ಮಿಮಿಕ್ರಿ ಕಲಾವಿದ ಗೋಪಾಲ್‌, ಕನ್ನಡದ ಚಿತ್ರರಂಗದ ಖ್ಯಾತ ನಟರು, ರಾಜಕಾರಣಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಮಹಾರಾಜ ಕಾಲೇಜಿನಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಸೇವೆಸಲ್ಲಿಸಿ ನಿವೃತ್ತರಾದ ಐವರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

Advertisement

ಅಲ್ಲದೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಎಸ್‌.ಜೆ. ಮೋಹನ್‌ಕುಮಾರ್‌ಗೆ ದತ್ತಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪೊ›.ಸಿ.ಪಿ . ಸುನೀತಾ, ನಟ ಶ್ರೀಹರಿ ಮೈಸೂರು, ಕಾಲೇಜು ಆಡಳಿತಾಧಿಕಾರಿ ಡಾ.ಎಲ್‌.ಲಿಂಬ್ಯಾ ನಾಯಕ್‌, ಪಠ್ಯೇತರ ಚಟು ವಟಿಕೆಗಳ ಸಮಿತಿ ಸಂಚಾಲಕ ಡಾ. ಎಸ್‌.ಟಿ. ರಾಮಚಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next