Advertisement

ಆರಂಭಿಕ ಫಲಿತಾಂಶದ ಬಗ್ಗೆ ಟ್ವೀಟಿಗರು “ಕೈ” ನಾಯಕರ ಕಾಲೆಳೆದಿದ್ದು ಹೀಗೆ

11:06 AM Dec 18, 2017 | Sharanya Alva |

ನವದೆಹಲಿ:ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಉಭಯ ರಾಜ್ಯಗಳಲ್ಲಿಯೂ ಬಿಜೆಪಿ ಗೆಲುವಿನ ನಗು ಬೀರಿದೆ.

Advertisement

ಸೋಮವಾರ ಬೆಳಗ್ಗೆ ಮತಎಣಿಕೆ ಆರಂಭವಾದ ಸುಮಾರು ಅರ್ಧ ಗಂಟೆಯ ನಂತರ ಫಲಿತಾಂಶದಲ್ಲಿ ಕಾಂಗ್ರೆಸ್ ಸ್ಥಾನಗಳಲ್ಲಿ ದಿಢೀರ್ ಹೆಚ್ಚಳ ಕಂಡು ಬಂದಿತ್ತು. ಬಳಿಕ ಮತ್ತೆ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಏತನ್ಮಧ್ಯೆ ಆರಂಭಿಕ ಫಲಿತಾಂಶ ಕಾಂಗ್ರೆಸ್ ಗೆ ಮುನ್ನಡೆ ಎಂಬ ವರದಿ ಪ್ರಸಾರವಾದ ಬೆನ್ನಲ್ಲೇ ಟ್ವೀಟಿಗರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಕಾಲೆಳೆದಿದ್ದಾರೆ!

ಗುಜರಾತ್ ವರ್ಡಿಕ್ಟ್ ಹ್ಯಾಸ್ ಟ್ಯಾಗ್ ನಲ್ಲಿ, ಬಿಜೆಪಿ ಮತ್ತು ಅಮಿತ್ ಶಾಗೆ ಮಾಸ್ಟರ್ ಸ್ಟ್ರೋಕ್. ಬಿಜೆಪಿ 5 ಸಾವಿರ ಇವಿಎಂಗಳನ್ನು ಹ್ಯಾಕ್ ಮಾಡಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ ನಂತರ, ಬಿಜೆಪಿ ಕೇವಲ 2500 ಇವಿಎಂ ಹ್ಯಾಕ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಸಮಬಲದ ಹೋರಾಟ ನೀಡಿದೆ. ಈಗ ಕಾಂಗ್ರೆಸ್ ಇವಿಎಂ ಬಗ್ಗೆ ಚಕಾರ ಎತ್ತುವುದಿಲ್ಲ!

*ಆಪ್ ಗಿಂತ ಟಾಟಾ ನ್ಯಾನೋ ಹೆಚ್ಚಿನ ಸ್ಥಾನ ಪಡೆಯುತ್ತಿತ್ತು!

Advertisement

*ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿ ಇವಿಎಂ ಹ್ಯಾಕ್ ಮಾಡಲು ವಿಫಲವಾಗಿದೆ!

*ಗೆಲುವು ಸಾಧಿಸಲು ಆಪ್ ಗೆ ಕೇವಲ ಒಂದು ಸ್ಥಾನದ ಅಗತ್ಯವಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲಿದೆ!

*ಯೋಗೇಂದ್ರ ಯಾದವ್ ಬಿಜೆಪಿ ಬೆಂಬಲಿಗರಿಗೆ ಹೇಳುತ್ತಿರುವುದು: ಮತಗಟ್ಟೆ ಸಮೀಕ್ಷೆ ಬಳಿಕ ನನ್ನ ತುಂಬಾ ಟ್ರೋಲ್ ಮಾಡಿದ್ದೀರಿ. ಈಗ ಕಣ್ಣು ತೆರೆದು ನೋಡಿ ಭಕ್ತರೇ…ನೋಡಿ ನಾನ್ ಏನ್ ಹೇಳಿದ್ದೆ..ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ…

ಹೀಗೆ ಆಪ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟಿಗರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next