Advertisement

ಸಮಾಜ ಸ್ನೇಹಿ ಸಂಸ್ಥೆಗಳು ಬೆಳಗುತ್ತವೆ: ಆಸ್ರಣ್ಣ

12:00 PM Oct 30, 2017 | Team Udayavani |

ಉಳ್ಳಾಲ: ಸಮಾಜಕ್ಕೆ ಒಳಿತುಮಾಡುವ ಸಂಸ್ಥೆಗಳು ಬೆಳಗಲು ಸಾಧ್ಯ. ಈ ನಿಟ್ಟಿನಲ್ಲಿ ಹಣಕಾಸು ಸಹಕಾರ ನೀಡುವ “ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘ ಸಹಕಾರ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಕಟೀಲಿನ ವೇ|ಮೂ| ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ ನುಡಿದರು.

Advertisement

ಕೊಲ್ಯದ ಬೆನಕಾ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಸೌಂದರ್ಯ ಓಂ ಸಾಯಿ ಸೌಹಾರ್ದಸಹಕಾರಿ ಸಂಘದ ಉದ್ಘಾಟನ ಸಮಾರಂಭದಲ್ಲಿ ಮುಂಗಡ ಠೇವಣಿ ಪತ್ರ, ಷೇರು ಪತ್ರ ಹಾಗೂ ಸಂಘದ ಆರು ಜನ ಪಿಗ್ಮಿ ಸಂಗ್ರಾ ಹಕರಿಗೆ ಪಿಗ್ಮಿ ಸಂಗ್ರಹಣೆಗೆ ಬೇಕಾದ ಡಿಜಿಟಲ್‌ ಯಂತ್ರ ವಿತರಿಸಿ ಅವರು ಮಾತನಾಡಿದರು.

ಜನಸಹಕಾರದಿಂದ ಯಶಸ್ಸು ಭದ್ರತಾ ಕೋಶ ಉದ್ಘಾಟಿಸಿದ ಪೆರ್ಮನ್ನೂರು ಚರ್ಚ್‌ ಧರ್ಮಗುರು ವಂ| ಡಾ| ಜೆ.ಬಿ. ಸಲ್ದಾನ ಮಾತನಾಡಿ, ಜನರ ಸಹಕಾರವಿದ್ದಾಗ ಯಾವುದೇ ಸಂಸ್ಥೆ ಯಶಸ್ಸು ಗಳಿಸುವುದರಲ್ಲಿ ಅನುಮಾನವಿಲ್ಲ. ಈ ಸಂಸ್ಥೆಯೂ ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ  ಸೌಂದರ್ಯ ರಮೇಶ್‌ ಮಾತನಾಡಿ, ಹುಟ್ಟಿದ ಊರಿನಲ್ಲಿ ಸಹಕಾರಿ ಸಂಘ ಸ್ಥಾಪಿಸುವ ಅವಕಾಶ ಸಿಕ್ಕಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ಮನವಿ ಮಾಡಿದರು.

ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಕಚೇರಿ ಉದ್ಘಾಟಿಸಿದರು. ಮಂಗಳೂರಿನ ಭಗವತೀ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸದಾಶಿವ ಉಳ್ಳಾಲ, ಸೌಂದರ್ಯ ರಮೇಶ್‌ ಅವರ ಪತ್ನಿ ದೇವಿಕಾ ಸೌಂದರ್ಯ ರಮೇಶ್‌, ಮಂಗಳೂರು ತಾಲೂಕು ಪಂಚಾಯತ್‌ ಸದಸ್ಯ ರಾಮಚಂದ್ರ ಕುಂಪಲ, ಬೆನಕಾ ಕಾಂಪ್ಲೆಕ್ಸ್‌ ಮಾಲಕ ಪ್ರೀತಂ ಸುವರ್ಣ, ದಕ್ಷಿಣ ವಲಯ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಉದ್ಯಮಿಗಳಾದ ಶಂಭು ಕೊಲ್ಲಾಪುರ, ನಾರಾಯಣ ಬೆಂಗಳೂರು, ಭರತ್‌ ಬೆಂಗಳೂರು, ರವಿ ಕುಲಾಲ್‌ ಬೆಂಗಳೂರು, ದಾಸ್‌ ಪ್ರಮೋಶನ್ಸ್‌ನ ಆಡಳಿತ ನಿರ್ದೇಶಕ ಅನಿಲ್‌ ದಾಸ್‌,  ಸಹಕಾರಿ ಸಂಘಗಳ ಇಲಾಖೆಯ ಅಧಿಕಾರಿ ಗೋಪಾಲ, ಕಟೀಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್‌ ಗಜಾನನ ಭಟ್‌, ನಂದಿನಿ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ,  ಸಂಘದ ಉಪಾಧ್ಯಕ್ಷ ಉಪಾಧ್ಯಕ್ಷ ವಿಶಾಲ್‌ ಕಾಸಿಂಬೆಟ್ಟು, ನಿರ್ದೇಶಕರಾದ ನಾರಾಯಣ ಕುಲಾಲ್‌, ಶ್ರೀನಿವಾಸ್‌ ಕೊಲ್ಯ, ಭರತ್‌ ಪಿ. ಕಾವೂರು, ಸೌಮ್ಯಾ ಕೊಲ್ಯ, ನಿರ್ಮಲಾ ರಂಜನ್‌, ವಿಕೇಶ್‌ ಕದ್ರಿ, ಪವನ್‌ ಕುಮಾರ್‌, ಅನಿಲ್‌ ಕುಮಾರ್‌, ವಿವೇಕ್‌ ಕಾಸಿಂಬೆಟ್ಟು, ಬಿ. ಲೋಹಿತ್‌ ಹಾಗೂ ಶೈಲೇಶ್‌ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.ದೇರಳಕಟ್ಟೆಯ ಕಣಚೂರು ಆಸ್ಪತ್ರೆ  ಸಹಯೋಗದಲ್ಲಿ ಉಚಿತ ಆರೋಗ್ಯ, ಕಣ್ಣು ತಪಾಸಣಾ ಶಿಬಿರ ನಡೆಯಿತು. ಪೊಸಕುರಲ್‌ ನಿರ್ದೇಶಕ ವಿದ್ಯಾಧರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next