ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿನ ಕುಟುಂಬವೊಂದಕ್ಕೆ ಕ್ಷುಲ್ಲಕ ಕಾರಣಕ್ಕೆಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗಿದ್ದು ಈ ಸಂಬಂಧ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮದ ನಂಜೇಗೌಡ ಎಂಬವರ ಕುಟುಂಬ ಬಹಿಷ್ಕಾರಕ್ಕೆ ಒಳಪಟ್ಟಿದೆ. ಕಳೆದ ವರ್ಷಮುಡುಕುತೊರೆ ಜಾತ್ರೆಯಲ್ಲಿ ಇವರ 5 ವರ್ಷದ ಮೊಮ್ಮಗನಿಗೆ ಊಟದಪಂಕ್ತಿಯಲ್ಲಿ ಕೂರಿಸದೆ ಹೊರದಬ್ಬಿದ್ದ ವಿಷಯವನ್ನು ಪ್ರಶ್ನಿಸಿದ್ದಕ್ಕೆ ಬಹಿಷ್ಕಾರದಶಿಕ್ಷೆ ಅನುಭವಿಸುತ್ತಿದ್ದಾರೆ. ನಂಜೇಗೌಡಅವರ ಕುಟುಂಬದಲ್ಲಿ ಪತ್ನಿ ಇಂದ್ರಮ್ಮ,ಮಗ ಶಾಂತರಾಜು, ಸೊಸೆ ನಾಗರತ್ನ ಮೊಮ್ಮಕ್ಕಳಾದ 5 ವರ್ಷದ ನಿಂಗರಾಜು ಹಾಗೂ 3 ವರ್ಷದಪಾರ್ವತಿ ಒಂದೇ ಮನೆಯಲ್ಲಿ ಗ್ರಾಮದ ಕುರುಬರಬೀದಿಯಲ್ಲಿ ವಾಸವಾಗಿದ್ದಾರೆ.
ನೊಂದಿದ್ದೇವೆ: ಕಳೆದ ಶಿವರಾತ್ರಿ ಹಬ್ಬದಲ್ಲಿ ನಡೆದ ಉತ್ಸವದಲ್ಲಿ ಮಗ ಶಾಂತರಾಜು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ನಂದಿ ಕಂಬ ಹಿಡಿದು ಕುಣಿಯಲು ಹೊರಟ ವೇಳೆ ಇವರ ಮೇಲೆ ಹಲ್ಲೆ ಮಾಡಲಾಗಿದೆ. ನಿಮ್ಮನ್ನು ಕುಲದಿಂದ ಹೊರಗಿಡಲಾಗಿದ್ದು ಉತ್ಸವಾದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದು ಹೊರದಬ್ಬಲಾಗಿದೆ. ಇದರೊಂದಿಗೆ ಇಲ್ಲಿರುವ ಬೀರೇಶ್ವರ ದೇವರ ಗುಡಿಗೂ ನಮಗೆ ಪೂಜೆ ಮಾಡಲು ಅವ ಕಾಶನೀಡುತ್ತಿಲ್ಲ. ಇದರೊಂದಿಗೆ ಇಲ್ಲಿ ರುವ ತೊಂಬೆನಲ್ಲಿಯಲ್ಲಿ ನೀರು ತರಲು ಹೋದರೆ ಮಹಿಳೆಯರಿಗೆ ಕಿರು ಕುಳ ನೀಡಲಾಗುತ್ತಿದೆ. ಇಬ್ಬರು ಮೊಮ್ಮ ಕ್ಕಳುಬೀದಿಯ ಇತರೆ ಮಕ್ಕಳೊಂದಿಗೆ ಆಟವಾಡಲು ಅವಕಾಶ ನೀಡುತ್ತಿಲ್ಲ.
ಇದಕ್ಕೆಲ್ಲಾ ಇಲ್ಲಿನ ಯಜಮಾನರಾದಮುದ್ದರಾಮೇ ಗೌಡ, ನಂಜುಂಡೇಗೌಡ,ಕುಮಾರ, ಸೋಮಣ್ಣ, ನಾಗೇಗೌಡ,ಸಿದ್ದೇಗೌಡ ಕಾರಣರು. ನಮ್ಮ ಕುಟುಂಬ ಇಂತಹಸಾಮಾಜಿಕ ಕಿರುಕುಳದಿಂದ ಮನನೊಂದಿದ್ದೇವೆ.ಮಾನಸಿಕ ಕಿರುಕುಳದಿಂದ ಆರ್ಥಿಕ ಸಂಕಷ್ಟಅನುಭವಿಸುವ ಪರಿಸ್ಥಿತಿ ಇದೆ. ನಮ್ಮ ಕುಟುಂಬಕ್ಕೆಸೂಕ್ತ ರಕ್ಷಣೆ ನೀಡಿ, ನ್ಯಾಯ ಒದಗಿಸಬೇಕು ಎಂದುನಂಜೇಗೌಡ ಅವರು ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ದೂರು ನೀಡಿದ್ದಾರೆ.