ನಾಗಮಂಗಲ: ಚರಂಡಿ ನೀರಿನ ವಿಚಾರಕ್ಕೆ ಸವರ್ಣೀಯರು ದಲಿತ ಕುಟುಂಬವೊಂದನ್ನು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ, ಗ್ರಾಮದಿಂದ ಸಾಮಾಜಿಕ ಬಹಿಷ್ಕಾರ ಹಾಕಿ ರುವ 10 ಮಂದಿ ಮೇಲೆ ಎಸ್ಸಿ ಎಸ್ಟಿ ಕಾಯ್ದೆ ಯಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬುರುಡುಗುಂಟೆ ಗ್ರಾಮದ ಪುಟ್ಟರಾಜು ದಲಿತ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೊಳಗಾದವರು. ಗ್ರಾಮದ ಒಕ್ಕಲಿಗ ಸಮುದಾಯದ ಸರಗೂರೇಗೌಡ, ಸಾಕಮ್ಮ ದನದ ಕೊಟ್ಟಿಗೆ ಗಂಜಲ ದಲಿತ ಕುಟುಂಬ ವಾಸವಿದ್ದ ಚರಂಡಿಗೆ ಹರಿಯಬಿಟ್ಟಿದ್ದರು. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮೇ 9ರಂದು ಗಲಾಟೆ ಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಇಬ್ಬರಿಗೂ ತಿಳಿವಳಿಕೆ ಹೇಳಿ ಕಳುಹಿಸಲಾಗಿತ್ತು. ಪಂಚಾಯಿತಿ ತೀರ್ಮಾನ: ಇದರಿಂದ ಕೆರಳಿದ ಗ್ರಾಮದ ಸವರ್ಣೀಯರು ಮೇ 11ರಂದು ಪಂಚಾಯಿತಿ ಸೇರಿ ದಲಿತ ಕುಟುಂಬವನ್ನು ಯಾರೂ ಮಾತನಾಡಬಾರದು, ಅಂಗಡಿ ಗಳಲ್ಲಿ ದಿನಸಿ ಕೊಡಬಾರದು, ಕೃಷಿ ಕೆಲಸಕ್ಕೆ ಕರೆಯಬಾರದು. ಸಹಾಯ ಮಾಡಿದವರಿಗೆ 25 ಸಾವಿರ ರೂ.ದಂಡ ವಿಧಿಸುವುದಾಗಿ ತೀರ್ಮಾನಿಸಲಾ ಗಿತ್ತು.
ದೂರು ದಾಖಲು: ಪಂಚಾಯಿತಿ ತೀರ್ಮಾನದಂತೆ ಗ್ರಾಮ ದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಕುಡಿ ಯುವ ನೀರು ಬಿಡದೆ, ಅಂಗ ಡಿ ಯಲ್ಲಿ ದಿನಸಿ ಕೊಡಲಿಲ್ಲ. ಮೇ 12 ರಂದು ಬೆಳಗ್ಗೆ ಸರಗೂರೇಗೌಡ, ಶಿವರಾಜು ಇಬ್ಬರು, ಪುಟ್ಟ ರಾಜು ಮನೆ ಬಳಿ ಬಂದು ಅವಾಚ್ಯ ಶಬ್ದ ಗಳಿಂದ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ರಿಂದ ಕಂಗಾಲಾದ ದಲಿತ ಕುಟುಂಬ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ 10 ಮಂದಿ ಮೇಲೆ ಪ್ರಕರಣ ದಾಖಲಾಗಿದೆ. ಗ್ರಾಮಕ್ಕೆ ಮಂಡ್ಯ ಎಸ್ಪಿ ಪ ರ ಶುರಾಮ ಭೇಟಿ ನೀಡಿ ಗ್ರಾಮಸ್ಥ ರೊಂದಿಗೆ ಸಮಾ ಲೋಚಿಸಿ, ಸವರ್ಣೀಯ ಕುಟುಂಬಕ್ಕೆ ತಾಕೀತು ಮಾಡಿ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಡಿವೈಎಸ್ಪಿ ವಿಶ್ವ ನಾಥ್, ಪಿಡಿಒ ಸುನೀತಾ, ದಲಿತ ಮುಖಂಡ ರಾದ ಮುಳುಕಟ್ಟೆ ಚಂದ್ರು, ವಕೀಲ ಮಹದೇವು ಇದ್ದರು.