Advertisement

ಮಹಿಳಾ ಶಿಕ್ಷಣದಿಂದ ಸಮಾಜ ಸಬಲೀಕರಣ

12:54 PM Feb 05, 2020 | Suhan S |

ಮುಂಡರಗಿ: ಮಹಿಳಾ ಶಿಕ್ಷಣದಿಂದ ಸಮಾಜ ಸಬಲೀಕರಣವಾಗಲಿದೆ. ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಜೀವನ ಮುಡುಪಾಗಿಟ್ಟಿದ್ದರು ಎಂದು ಮಾನವಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಟಿ. ರತ್ನಾಕರ ಹೇಳಿದರು.

Advertisement

ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ, ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ನಿಮಿತ್ತ ಸಾಧಕ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವರಾಗಿ ಹುಟ್ಟಿದ ಮೇಲೆ ಮಾನವೀಯ ಕಳಕಳಿಯಿಂದ ಏನಾದರೂ ಮಾಡಬೇಕು. ಈ ಹಿನ್ನೆಲೆಯಲ್ಲಿ ಸಾವಿತ್ರಿಬಾಯಿ 50 ಶಾಲೆಗಳು ತೆರೆದು ಮಹಿಳೆಯರ ಶಿಕ್ಷಣಕ್ಕಾಗಿ ಸತತವಾಗಿ ಹೋರಾಟ ನಡೆಸಿದರು ಎಂದರು.

ಡಾ| ಲಕ್ಷ್ಮಣ ಪೂಜಾರ ಮಾತನಾಡಿ ಯುವ ಜನತೆಗೆ ವೈಚಾರಿಕತೆ ಶಿಕ್ಷಣದಅವಶ್ಯಕತೆ ತುಂಬಾ ಇದೆ. ಜಾತಿಯತೆಯು ದೊಡ್ಡ ಮೂಢನಂಬಿಕೆಯಾಗಿದ್ದು, ಜಾತಿಯತೆ ತೊಲಗಿಸಲು ಹೋರಾಟ ಮಾಡುವ ಅನಿವಾರ್ಯತೆಯು ಇದೆ ಎಂದರು.

ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಅವರು ಕೆ.ಎಸ್‌. ತಳವಾರ ಅವರ ಕುಂತಳನಾಡಿನ ಕುಲಿಂದರ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ತಂದೆತಾಯಿ ಬಿಟ್ಟರೆ ಜೀವನದಲ್ಲಿ ಉತ್ತಮ ಮಾರ್ಗದರ್ಶನವು ಶಿಕ್ಷಕರಾಗಿದ್ದಾರೆ. ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.

ಮುಖಂಡ ಕರಬಸಪ್ಪ ಹಂಚಿನಾಳ ಸಾವಿತ್ರಿಬಾಯಿ ಫುಲೆ ಭಾವಚಿತ್ರವನ್ನು ಪೂಜಿಸಿದರು. ಡಾ| ಲಕ್ಷ್ಮಣ ಪೂಜಾರ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಉದ್ಘಾಟಿಸಿದ ಭೀಮಣ್ಣ ಹವಳೆ ಮಾತನಾಡಿದರು. ಎಸ್‌.ಎಚ್‌. ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ, ಪದವಿ ಕಾಲೇಜಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

ಸರಕಾರಿ ನೌಕರರ ಸಂಘ ಅಧ್ಯಕ್ಷ ಡಾ|ಬಸವರಾಜ ಬಳ್ಳಾರಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಲ್‌.ಆರ್‌.ಪವಾರ, ಬಿ.ಎಫ್‌. ಈಟಿ, ಕೃಷ್ಣಪ್ಪ ಕಲಕೇರಿ, ಭಾರತಿ ಟಿ.ಎಚ್‌.ಎ.ಸಿ. ಕೆಳಗಿನಮನಿ, ವೈ.ಟಿ. ವಡ್ಡರ, ಡಿ.ಎಂ. ಗದಗಕರ ಇತರರು ಇದ್ದರು. ಎಚ್‌.ಕೆ. ಹಲವಾಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಡಿ. ಬುಡೇನಾಯ್ಕರ ಸ್ವಾಗತಿಸಿದರು. ಎಸ್‌.ಎಸ್‌. ನಾಯಕ, ರವಿ ದೇವರೆಡ್ಡಿ ನಿರೂಪಿಸಿದರು. ಎಚ್‌.ಎನ್‌. ಗೌಡರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next