ಮುಂಬಯಿ, ಜೂ. 15: ವಿಶ್ವದ ಅತಿದೊಡ್ಡ ಕೊಳೆಗೇರಿ ಪ್ರದೇಶಗಳಲ್ಲಿ ಒಂದಾದ ಧಾರಾವಿಯಲ್ಲಿ ಕೋವಿಡ್ ಸೋಂಕು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿರುವ ಆರೋಗ್ಯ ಇಲಾಖೆ ಸದ್ಯ ನಲಸೋಪರದ ಕೊಳಗೇರಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಕಂಡು ಆತಂಕ ವ್ಯಕ್ತಪಡಿಸಿದೆ.
ವಸಾಯಿ-ವಿರಾರ್ ನಗರ ಮೆಟ್ರೋಪಾ ಲಿಟನ್ ಪ್ರದೇಶದ ನಲಸೋಪರದಲ್ಲಿ ಕೋವಿಡ್ ವೈರಸ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು ಜನತೆ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಕೋವಿಡ್ ಸೋಂಕಿನಿಂದ ಇಲ್ಲಿಯವರೆಗೆ 24 ಜನರು ಇಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟು 692 ರೋಗಿಗಳಲ್ಲಿ 308 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ನಲಸೋಪರದಲ್ಲಿ ಶುಕ್ರವಾರ 67 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ನಲಸೋಪರ ಕೊಳಗೇರಿ ಪ್ರದೇಶಗಳಲ್ಲಿ ನಗರ ಪಾಲಿಕೆಯು ಸ್ವಚ್ಚತೆ, ಕೀಟನಾಶಕಗಳ ಸಿಂಪಡಣೆ, ಇನ್ನಿತರ ವೈರಸ್ ತಡೆಗಟ್ಟುವ ಕ್ರಮಗಳನ್ನು ಅನುಸರಿಸುತ್ತಿಲ್ಲ. ಇದರಿಂದ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಬಿಜೆಪಿ ಮುಖಂಡ ಸಂದೀಪ್ ದುಬೆ ಹೇಳಿದ್ದಾರೆ. ಇಬ್ಬರು ಪ್ರಯಾಣಿಕರಿಗೆ ಮಾತ್ರ ಆಟೋದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದ್ದು, ಆಟೋ ಚಾಲಕರು ಟ್ರಾಫಿಕ್ ಪೊಲೀಸರ ಮುಂದೆಯೇ ಐದಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿವಿಧ ಅಂಗಡಿಗಳಲ್ಲೂ ಇದೇ ಸ್ಥಿತಿ ಎದುರಾಗಿದೆ. ಅಂಗಡಿಯವರು 10ರಿಂದ 12 ಗ್ರಾಹಕರನ್ನು ಏಕಕಾಲದಲ್ಲಿ ಅಂಗಡಿಗಳ ಒಳಗೆ ಬರಲು ಪ್ರವೇಶ ನೀಡುತ್ತಿದ್ದಾರೆ. ಇದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಎಂದು ದುಬೆ ಹೇಳಿದರು.
ಆಟೋ ಚಾಲಕರ ಮೇಲೆ ಕ್ರಮ : ನಾಲ್ಕರಿಂದ ಐದು ಪ್ರಯಾಣಿಕರನ್ನು ಸವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಚಾರ ವಿಭಾಗದ ಹಿರಿಯ ಪಿಐ ವಿಲಾಸ್ ಸೂಪ್ ತಿಳಿಸಿದ್ದಾರೆ. ಇಲ್ಲಿಯವರೆಗೆ, ನಾವು 20ರಿಂದ 25 ಆಟೋ ಡ್ರೈವರ್‌ಗಳಕ್ರಮ ಕೈಗೊಂಡಿದ್ದೇವೆ. ಅದೇ ರೀತಿ ಬೈಕ್‌ನಲ್ಲಿ ಡಬಲ್ ಸೀಟ್ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.