Advertisement

ಏಕತೆಯಿಂದ ಸಮಾಜ ಅಭಿವದ್ಧಿ ಸಾಧ್ಯ: ನಾಯಕ

04:11 PM Nov 17, 2018 | |

ಮಸ್ಕಿ: ವಾಲ್ಮೀಕಿ ಸಮಾಜದದವರೆಲ್ಲರೂ ಒಗ್ಗಟ್ಟಾಗಿ ಸಂಘಟನೆಯಾದಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಂಸದ ಬಿ.ವಿ.ನಾಯಕ ಹೇಳಿದರು.

Advertisement

ಪಟ್ಟಣದ ಭ್ರಮಾರಾಂಭ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಪ್ರಥಮ ವರ್ಷದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಬೆಳೆಯಬೇಕೆಂದರೆ ಇಂದಿನ ಕಾಲದಲ್ಲಿ ಶಿಕ್ಷಣ ಬಹಳ ಮುಖ್ಯ. ಸಮಾಜದ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು. 

ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ವಾಲ್ಮೀಕಿ ಸಮಾಜದಲ್ಲಿ ತಾವು ಹುಟ್ಟಿದ್ದರಿಂದಲೇ ಮೀಸಲಾತಿ ದೊರಕಿ ಶಾಸಕನಾಗಲು ಸಾಧ್ಯವಾಯಿತು. ಅಲ್ಲದೇ ಮಾಜಿ ಸಚಿವ ಹಾಗೂ ವಾಲ್ಮೀಕಿ ಸಮಾಜ ಮುನ್ನಲೆಗೆ ಬರುವಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಕೊಡುಗೆ ಅಪಾರ. ಕಳೆದ ಹತ್ತು ವರ್ಷಗಳಿಂದ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಸಮಾಜದ ಅಭಿವೃದ್ಧಿಗಾಗಿ ತಾವು ಕಂಕಣಬದ್ಧರಾಗಿ ಇರುವುದಾಗಿ ಹೇಳಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಯುವಕರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ಅಗತ್ಯವಿದೆ. ಸಮಾಜದ ಇನ್ನಿತರ ಸಮುದಾಯಗಳೊಂದಿಗೂ ಸೌಹಾರ್ದತೆಯಿಂದ ನಡೆದುಕೊಳ್ಳುವುದರೊಂದಿಗೆ ಸಮಾಜದ ಏಳ್ಗೆಗೆ ಮುಂದಾಗಬೇಕು ಎಂದರು.

ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಶ್ರೀ, ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮಿಗಳು, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಶಿವುಕುಮಾರ, ರಾಜಾ ಸೋಮನಾಥ ನಾಯಕ, ಮಹದೇವಪ್ಪಗೌಡ, ಡಿ.ಜಿ.ಗುರಿಕಾರ ಮಾತನಾಡಿದರು. ತಿಮ್ಮಯ್ಯ ನಾಯಕ, ಎಚ್‌.ಬಿ. ಮುರಾರಿ, ಮಲ್ಲನಗೌಡ ಪೊ.ಪಾ, ಬಸನಗೌಡ ಪೊಪಾ, ರವಿಕುಮಾರ ಪಾಟೀಲ ಪೊ.ಪಾ, ಜೆಸ್ಕಾಂ
ಎಇಇ ಪ್ರಭಾಕರ ಸುಗೂರ, ಅಯ್ಯಪ್ಪ ನಾಯಕ ಮಾನ್ವಿ, ವಿ.ಎ. ಮೇಟಿ, ಮೌನೇಶ ನಾಯಕ, ರಾಘವೇಂದ್ರ ನಾಯಕ, ಚಂದ್ರಶೇಖರ ಉದಾಳ ಮುಂತಾದವರು ಇದ್ದರು. ಪಟ್ಟಣ ಸೇರಿದಂತೆ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನ ಪಾಲ್ಗೊಂಡಿದ್ದರು. ವಾಲ್ಮೀಕಿ ಜಯಂತಿ ನಿಮಿತ್ತ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next