Advertisement

ಹಣ ಸಂಪಾದನೆಯೊಂದಿಗೆ ಸಾಮಾಜಿಕ ಕಾಳಜಿ ಇರಲಿ: ಎಸ್ಪಿ

07:22 PM Nov 21, 2017 | |

ಬಳ್ಳಾರಿ: ಔಷಧ ತಜ್ಞರು ಹಣ ಸಂಪಾದನೆಯ ಜೊತೆಗೆ ಸಾಮಾಜಿಕ ಸೇವೆ ಮಾಡಲೂ ಮುಂದಾಗಬೇಕು. ನಿಷೇಧಿತ ಔಷಧಗಳ ಪೂರೈಕೆಗೆ ಮುಂದಾಗಿ, ಸಮಾಜದಲ್ಲಿ ಅನಾರೋಗ್ಯಕರ ವಾತಾವರಣ ಮೂಡಿಸಬಾರದು ಎಂದು ಎಸ್‌ಪಿ ಆರ್‌. ಚೇತನ್‌ ಸಲಹೆ ನೀಡಿದರು.

Advertisement

ಸೋಮವಾರ ನಗರದ ವೀವಿ ಸಂಘದ ಎಎಸ್‌ಎಂ ಪದವಿ ಕಾಲೇಜಿನ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಟಿವಿಎಂ ಫಾರ್ಮಸಿ ಕಾಲೇಜು, ರಾಜ್ಯ ಸರ್ಕಾರಿ ಔಷಧ ತಜ್ಞರ ಸಂಘ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ 56ನೇ ರಾಷ್ಟ್ರೀಯ ಔಷಧ ಶಾಸ್ತ್ರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಣಗಳಿಕೆಯ ಉದ್ದೇಶದೊಂದಿಗೆ ಮಾದಕ ರಾಸಾಯನಿಕಗಳಿರುವ ಮತ್ತು ಷೆಡ್ನೂಲ್‌-ಎಚ್‌ ಡ್ರಗ್ಸ್‌ ಮಾರಾಟ ಮಾಡಲು ಕಡ್ಡಾಯವಾಗಿ ಔಷಧ ವಿಜ್ಞಾನಾಲಯದ ಪರವಾನಗಿಯನ್ನು ಪಡೆಯಬೇಕು. ಇಲ್ಲದೆ ಹೋದಲ್ಲಿ ಇಂತಹ ಮಾರಾಟ ಕಾನೂನು ಬಾಹಿರ ಎಂದೆನಿಸಿ ಅಂತಹವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆದು ಉತ್ತಮ ಆರೋಗ್ಯ ಹೊಂದಲು ಔಷಧಗಳು ಉಪಯುಕ್ತ. ಆದರೆ, ಯಾವುದೇ ವೈದ್ಯರ ಸಲಹೆ, ಸೂಚನೆಗಳಿಲ್ಲದೇ ರೋಗಿಗಳು ಸ್ವಯಂ ಔಷಧಗಳನ್ನು ಖರೀದಿಸಿ ಬಳಸಬಾರದು. ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು. ಔಷಧಗಳ ಬಳಕೆ, ವಿತರಣೆ ಕುರಿತು ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಬೆಂಗಳೂರಿನ ಸಾಗರ್‌ ಆಸ್ಪತ್ರೆಯ ಫಾರ್ಮಸಿ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್‌.ಜಯಪ್ರಕಾಶ ವಸ್ತ್ರದ್‌ ಫಾರ್ಮಸಿ ಕುರಿತ ವಿಶೇಷ ಉಪನ್ಯಾಸ ನೀಡಿದರು. ಔಷಧ ವಿಜ್ಞಾನ ಕ್ಷೇತ್ರದ ವಿನೂತನ ಸಂಶೋಧನೆ, ರೋಗಿಗಳು ಅನುಸರಿಸಬೇಕಾದ ಕ್ರಮಗಳು, ಔಷಧಗಳ ಸಮರ್ಪಕ ಬಳಕೆಯ ವಿಧಾನ ಕುರಿತಾಗಿ ಅವರು ವಿವರಿಸಿದರು. 

ಕಾರ್ಯಕ್ರಮದಲ್ಲಿ ವಿಜಯನಗರ  ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ನಿರ್ದೇಶಕ ಡಾ| ಡಿ.ಪ್ರಭಂಜನ್‌ ಕುಮಾರ್‌,
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್‌, ಉಪಾಧ್ಯಕ್ಷ ವೀರಭದ್ರ ಶರ್ಮಾ, ತೊಗರಿ ವೀರಮಲ್ಲಪ್ಪ ಮೆಮೋರಿಯಲ್‌ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಜಾಲಿ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‌, ಪದಾಧಿಕಾರಿಗಳಾದ ಸುಧಾ, ಶಂಕರ ಜ್ಯೋತಿ, ಮಲ್ಲಿಕಾರ್ಜುನ ಇದ್ದರು. ಲಕ್ಷ್ಮೀರೆಡ್ಡಿ ನಿರೂಪಿಸಿದರು.

Advertisement

ಹಣ ಗಳಿಕೆಯ ಉದ್ದೇಶದೊಂದಿಗೆ ಮಾದಕ  ರಾಸಾಯನಿಕಗಳಿರುವ ಮತ್ತು ಷೆಡ್ನೂಲ್‌-ಎಚ್‌ ಡ್ರಗ್ಸ್‌ ಮಾರಾಟ ಮಾಡಲು ಕಡ್ಡಾಯವಾಗಿ ಔಷಧ ವಿಜ್ಞಾನಾಲಯದ ಪರವಾನಗಿ ಪಡೆಯಬೇಕು. ಇಲ್ಲದೆ ಹೋದರೆ ಇಂತಹ ಮಾರಾಟ ಕಾನೂನು ಬಾಹಿರ ಎಂದೆನಿಸಿ ಅಂತಹವರು ಶಿಕ್ಷೆಗೆ ಗುರಿಯಾಗುತ್ತಾರೆ.
 ಆರ್‌.ಚೇತನ್‌, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next