Advertisement

ಆತ್ಮದ ಬ್ರಹ್ಮಕಲಶವಾದಾಗ ಸುಂದರ ಸಮಾಜ: ರೈ

03:45 AM Feb 10, 2017 | Team Udayavani |

ತೆಕ್ಕಟ್ಟೆ : ಸಮಾಜದ ಎಲ್ಲ ವರ್ಗದವರನ್ನೂ ಒಗ್ಗೂಡಿಸಿಕೊಂಡು ಧಾರ್ಮಿಕ ಚಿಂತನೆಯೊಂದಿಗೆ ಪ್ರತಿಯೊಬ್ಬನ ಆತ್ಮದ ಬ್ರಹ್ಮಕಲಶವಾಗಬೇಕು. ಎಲ್ಲರೂ ದ್ವೇಷ ಮತ್ತು ಅಸೂಯೆ ಬಿಟ್ಟು ಸಮಾಜದ ಪ್ರೀತಿ ಗಳಿಸಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗುವುದು ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಗುರುವಾರ ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ಶಿಲಾಮಯ ದೇವಾಲಯದ ಪುನಃಪ್ರತಿಷ್ಠಾಬಂಧ, ಬ್ರಹ್ಮಕಲಶೋತ್ಸವದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜವುಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, ಬಾರಕೂರು ಸಂಸ್ಥಾನಕ್ಕೆ ಒಳಪಟ್ಟ ಈ ದೇಗುಲದಲ್ಲಿ ದಾನ ಮತ್ತು ಉಂಬಳಿ ನೀಡಿರುವ ಬಗ್ಗೆ ಶಾಸನಗಳಿವೆ. ಕರಾವಳಿಯ ಬಂಟ ಸಮುದಾಯದವರು ಬುದ್ಧಿವಂತರು. ಪರಿಶ್ರಮದಿಂದ ಯಶಸ್ಸನ್ನು ಕಂಡುಕೊಂಡವರು ಹಾಗೂ ಹುಟ್ಟಿದ ಊರಿನ ಅಭಿವೃದ್ಧಿಗಾಗಿ ಶ್ರಮಿಸುವವರು ಎಂದು ಹೇಳಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮ್ಮಾನ: ಶಿಲಾಮಯ ತೀರ್ಥ ಮಂಟಪವನ್ನು ಕೊಡುಗೆಯಾಗಿ ನೀಡಿದ ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ ಶೆಟ್ಟಿ, ಕಟ್ಟೆಮನೆ ಹಾಗೂ ಜಯಶ್ರೀ ಮೋಹನದಾಸ ಶೆಟ್ಟಿ ದಂಪತಿಗಳು ಹಾಗೂ ದೇವಳ ಗರ್ಭಗುಡಿಯ ತಾಮ್ರದ ಹೊದಿಕೆಯನ್ನು ಕೊಡುಗೆಯಾಗಿ ನೀಡಿದ ಉದ್ಯಮಿ ರಾಜೀವ ಕೊಠಾರಿ ಹಾಗೂ ವನಜಾ ದಂಪತಿಯನ್ನು ಸಮ್ಮಾನಿಸಲಾಯಿತು.

ವೇ|ಮೂ| ಭಾಸ್ಕರ ಭಟ್‌ ಪಂಜ ಧಾರ್ಮಿಕ ಪ್ರವಚನಗೈದರು. ಮುಖ್ಯ ಅತಿಥಿಗಳಾಗಿ ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಕೆದೂರು ಗ್ರಾ.ಪಂ. ಅಧ್ಯಕ್ಷ ಸಂಪತ್‌ ಕುಮಾರ್‌ ಶೆಟ್ಟಿ ಶಾನಾಡಿ, ಎಸ್‌ಬಿಎಂ ನಿರ್ದೇಶಕ ಅಂಬ್ಲಿಗೋಳ ಪ್ರಭಾಕರ ಶೆಟ್ಟಿ, ಉಳೂ¤ರು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉದ್ಯಮಿ ಉಳೂ¤ರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಹೆಗ್ಡೆ ಹಲೂ¤ರು ಮೇಲ್ಮನೆ ಉಪಸ್ಥಿತರಿದ್ದರು.

Advertisement

ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉದ್ಯಮಿ ಉಳೂ¤ರು ಮೋಹನದಾಸ್‌ ಶೆಟ್ಟಿ, ಕಟ್ಟೆಮನೆ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್‌ ಪಕ್ಕಳ ಹಾಗೂ ಮಹೇಶ್‌ ಪೂಜಾರಿ ವಕ್ವಾಡಿ ನಿರೂಪಿಸಿ, ಅಜಿತ್‌ ಶೆಟ್ಟಿ ಉಳೂ¤ರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next