Advertisement
ಲಿಂಗಾಯಿತ ಬಡಾ ವಣೆಯ ಮಠದ ಬೀದಿಯಲ್ಲಿ ವಾಸವಾಗಿರುವ ವೀರಣ್ಣ, ಗೌರಮ್ಮ ಹಾಗೂ ಇವರ ಮಗ ವಿ. ಸುರೇಶ ಎಂಬುವರೇ ಬಹಿಷ್ಕಾರಕ್ಕೆ ಒಳಗಾದವರು.
Related Articles
Advertisement
ವೃದ್ಧ ದಂಪತಿ, ಅವಿವಾಹಿತ ಮಗ: 80 ವರ್ಷದ ವೀರಣ್ಣ ಅವರ ಜತೆ ಪತ್ನಿ ಗೌರಮ್ಮ ಹಾಗೂ ಮಗ ಸುರೇಶ ವಾಸವಾಗಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಸುರೇಶ ಅವಿವಾಹಿತ. ಪೂರ್ವಜರ ಕಾಲದಿಂದಲೂ ನಾವು ಇಲ್ಲೇ ವಾಸವಾಗಿದ್ದೇವೆ. ಪ್ರತೀ ತಿಂಗಳೂ ನಮ್ಮ ಜಾತಿಯ ಸಭೆ, ಪೂಜೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಎಲ್ಲರಂತೆ ನಮಗೂ ಆಹ್ವಾನ ನೀಡಲಾಗುತ್ತಿತ್ತು. ಆಸ್ತಿ ಭಾಗದ ನಂತರ ಪಾಲಿಗೆ ಬಂದ ಮನೆಯೊಂದನ್ನು 10 ತಿಂಗಳ ಹಿಂದೆ ದುರಸ್ತಿ ಮಾಡಿಸಿ, ನಾಯಕ ಜನಾಂಗದ ಕುಟುಂಬವೊಂದಕ್ಕೆ ಬಾಡಿಗೆ ನೀಡಲಾಯಿತು. ಅಲ್ಲಿಂದ ಪರಿಶಿಷ್ಟರಿಗೆ ಮನೆ ನೀಡಬಾರದು ಎಂಬ ಆಕ್ಷೇಪ ವ್ಯಕ್ತವಾಯಿತು. ಇದಕ್ಕೆ ಸುರೇಶ ಒಪ್ಪದಿದ್ದಾಗ ನಮ್ಮನ್ನು ಧಾರ್ಮಿಕ ಕಾರ್ಯಕ್ರಮಗಳಿಂದ ದೂರು ಇಡಲಾಯಿತು ಎಂಬುದು ವೀರಣ್ಣ ಕುಟುಂಬದ ಆರೋಪ.
ಪೊಲೀಸರಿಂದಲೂ ನ್ಯಾಯ ಸಿಕ್ಕಿಲ್ಲ: ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ನಾನು 3 ಬಾರಿ ದೂರು ನೀಡಿದ್ದೇನೆ. ಡಿವೈಎಸ್ಪಿಗೂ ದೂರು ನೀಡಿದ್ದೇನೆ. ಠಾಣೆಗೂ ಹೋಗಿದ್ದೇನೆ. ಅಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಬದಲು ನನಗೆ ತಿಳಿವಳಿಕೆ ನೀಡಿ ಕಳುಹಿಸಲಾಗಿದೆ. ನಮ್ಮ ಜಾತಿಯವರು ನಡೆಸುವ ಸಭೆಗಳಿಗೆ ಹೋದಾಗ ನಿಂದಿಸಿ ಆಚೆ ಕಳುಹಿಸಲಾಗಿದೆ. ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿಯ ಆರೋಗ್ಯವೂ ಸರಿಯಿಲ್ಲ. ಘಟನೆ ಬಳಿಕ ಪೋಷಕರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ನಾನೂ ಅಸಹಾಯಕನಾಗಿದ್ದೇನೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಸುರೇಶ ಅಳಲು ತೋಡಿಕೊಂಡರು.
ಯಾಕೆ ಬಹಿಷ್ಕಾರ? ಎಸ್ಟಿ ನಾಯಕ ಜನಾಂಗಕ್ಕೆ ಸೇರಿದ ಕುಟುಂ ಬಕ್ಕೆ ವೀರಣ್ಣ ಮನೆ ಬಾಡಿಗೆ ನೀಡಿದರು. ಇದಕ್ಕೆ ಇವರದ್ದೇ ಜನಾಂಗದವರು ಆಕ್ಷೇಪ ವ್ಯಕ್ತಪಡಿಸಿ, ಇಡೀ ಕುಟುಂಬ ವನ್ನು ಸಭೆ, ಧಾರ್ಮಿಕ ಕಾರ್ಯಕ್ರ ಮ ಗಳಿಂದ ದೂರ ಇಡಲಾಯಿತು.
ಮಾಹಿತಿ ಪಡೆದು ಕ್ರಮ ಸುರೇಶ ಎಂಬುವವರು ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನಾನು ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ವಹಿಸುತ್ತೇನೆ. ಈ ಬಗ್ಗೆ ದೂರುದಾರರು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಿ. ●ಡಾ.ಬಿ.ಟಿ.ಕವಿತಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ