Advertisement

ಸೋಪ್‌ ಸೂಪರ್‌

08:00 PM Aug 29, 2019 | mahesh |

ಸೋಪು-ಸ್ನಾನಕ್ಕೆ, ಬಟ್ಟೆ-ಪಾತ್ರೆ ತೊಳೆಯೋಕೆ ಮಾತ್ರ ಬಳಸುವ ವಸ್ತು ಅಂತ ಭಾವಿಸಿದ್ದೀರಾ? ಹಾಗಾದ್ರೆ, ನೀವು ತಪ್ಪು ಭಾವಿಸಿದ್ದೀರಿ. ಸೋಪಿನಿಂದ ಬಹಳಷ್ಟು ಉಪಯೋಗಗಳಿವೆ. ಅದರಲ್ಲೂ ಗೃಹಿಣಿಯರು ಒಂದು ತುಂಡು ಸೋಪ್‌ನಿಂದ ಬಹಳಷ್ಟು ಕೆಲಸಗಳನ್ನು ಸುಲಭವಾಗಿ ಮಾಡಬಹುದು.

Advertisement

.ಒಣ ಸಾಬೂನನ್ನು ಕಾಲು-ಕೈಗೆ ಉಜ್ಜಿದರೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ.
.ಕಪಾಟಿನ ಡ್ರಾವರ್‌ಗೆ ಸಾಬೂನು ಹಚ್ಚಿದರೆ ಬಾಗಿಲು ತೆರೆಯಲು ಸುಲಭ.
.ಬ್ಯಾಗಿನ ಜಿಪ್‌ ತೆಗೆಯಲು ಆಗದಿದ್ದರೆ, ಜಿಪ್‌ ಮೇಲೆ ಸಾಬೂನು ಹಚ್ಚಿ.
.ಸಣ್ಣ ಅಳತೆಯ ಉಂಗುರ, ಬಳೆ ಹಾಕಬೇಕಾದಾಗ ಕೈಯನ್ನು ಸಾಬೂನಿನ ನೊರೆಯಲ್ಲಿ ಅದ್ದಿ.
.ದಾರವನ್ನು ಸಾಬೂನಿಗೆ ಉಜ್ಜಿದರೆ, ಸೂಜಿಯೊಳಗೆ ದಾರ ಪೋಣಿಸಲು ಕಷ್ಟವೇ ಆಗುವುದಿಲ್ಲ.
.ಕಿಟಕಿಗೆ ಪೇಂಟ್‌ ಮಾಡುವಾಗ, ಸಾಬೂನನ್ನು ಕಿಟಕಿ ಫ್ರೆàಮ್‌ಗೆ ಹಚ್ಚಿದರೆ, ಹೊರಗಡೆ ತಾಗಿದ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.
.ಹೊಸ ಶೂ, ಚಪ್ಪಲಿ ಖರೀದಿಸಿದಾಗ ಅದರೊಳಗೆ ಸೋಪನ್ನು ಹಚ್ಚಿದರೆ ಚಪ್ಪಲಿ ಹಾಕುವಾಗ ನೋವಾಗುವುದಿಲ್ಲ.
.ಸ್ನಾನದ ಮನೆಯ ಕನ್ನಡಿಗೆ ಸಾಬೂನು ಹಚ್ಚಿ ತೊಳೆದು, ನಂತರ ಒಣಬಟ್ಟೆಯಿಂದ ಒರೆಸಿದರೆ ಗಾಜಿನ ಮೇಲಿನ ಕಲೆ ಮಾಯವಾಗುತ್ತದೆ.
.ಮನೆಯಲ್ಲಿ ಇರುವೆ, ಜಿರಳೆ, ಇಲಿಗಳು ಓಡಾಡುವ ಜಾಗದಲ್ಲಿ ಸಾಬೂನಿನ ತುಣುಕುಗಳನ್ನು ಇಟ್ಟರೆ, ಸಮಸ್ಯೆಗೆ ಪರಿಹಾರ ಸಿಗುತ್ತದೆ.
.ಕುರ್ಚಿ, ಮೇಜಿನ ಕಾಲನ್ನು ನಾಯಿಗಳು ಕಚ್ಚುವುದನ್ನು ತಡೆಯಲು, ಕಾಲುಗಳಿಗೆ ಸಾಬೂನು ಹಚ್ಚಿ.
.ಮನೆಯ ಬೀಗ ತೆಗೆಯಲು ಕಷ್ಟವಾಗುತ್ತಿದ್ದರೆ, ಕೀಲಿಕೈಗೆ ಸಾಬೂನು ಉಜ್ಜಿ.
.ಗಾಜಿನ ವಸ್ತು ಒಡೆದು ನೆಲದ ಮೇಲೆ ಬಿದ್ದಿದ್ದರೆ, ಸಾಬೂನನ್ನು ನೀರಿನಲ್ಲಿ ಹಾಕಿ ನೆಲದ ಮೇಲೆ ಆಚೀಚೆ ಆಡಿಸಿದರೆ ಗಾಜಿನ ತುಣುಕುಗಳು ಸಾಬೂನಿಗೆ ಅಂಟಿಕೊಳ್ಳುತ್ತವೆ.
.ಕನ್ನಡಕದ ಗಾಜನ್ನು ಸೋಪು ನೀರಿನಲ್ಲಿ ತೊಳೆದರೆ, ಫ‌ಳಫ‌ಳ ಹೊಳೆಯುತ್ತದೆ.

ಹೀರಾ ರಮಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next