ಲಕ್ನೋ: “ಕತ್ತೆಯ ಹಾಲಿನಿಂದ ತಯಾರಿಸಲಾದ ಸೋಪು ಮಹಿಳೆಯರ ದೇಹದ ಸೌಂದರ್ಯವನ್ನು ಕಾಪಿಡುತ್ತದೆ’ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿರುವ ವೀಡಿಯೋವೊಂದು ಭಾರೀ ವೈರಲ್ ಆಗಿದೆ.
ಉತ್ತರಪ್ರದೇಶದ ಸುಲ್ತಾನ್‌ಪುರದ ಗ್ರಾಮವೊಂದರಲ್ಲಿ ಮಾತನಾಡಿದ್ದ ಮನೇಕಾ, “ಈಜಿಪ್ಟ್ ನ ರಾಣಿ ಕ್ಲಿಯೋಪಾತ್ರ ಅವರು ಕತ್ತೆಯ ಹಾಲಿನಲ್ಲೇ ಸ್ನಾನ ಮಾಡುತ್ತಿದ್ದರು. ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ದಿಲ್ಲಿಯಲ್ಲಿ 500ರೂ.ಗೆ ದೊರೆಯುತ್ತದೆ. ನಾವೇಕೆ ಮೇಕೆ ಹಾಗೂ ಕತ್ತೆಯ ಹಾಲಿನಿಂದ ಸೋಪು ತಯಾರಿಸಲು ಆರಂಭಿಸಬಾರದು’ ಎಂದು ಪ್ರಶ್ನಿಸಿದ್ದರು. ಜತೆಗೆ ಲಡಾಖ್‌ನಲ್ಲಿರುವ ಸಮುದಾಯವೊಂದು ಕತ್ತೆಗಳ ಸಂಖ್ಯೆ ಕಡಿಮೆಯಾದ ಕಾರಣ, ಅದರ ಹಾಲಿನಿಂದ ಸೋಪು ತಯಾರಿಕೆ ಆರಂಭಿಸಿದರು.
ಇಂಥ ಸೋಪುಗಳನ್ನು ಬಳಸುವುದರಿಂದ ಹೆಣ್ಣುಮಕ್ಕಳ ಶರೀರವು ಜೀವನಪರ್ಯಂತ ಸುಂದರವಾಗಿರುತ್ತದೆ ಎಂದೂ ಮನೇಕಾ ಹೇಳಿದ್ದರು.