Advertisement

ಮಯಾಮಿ ಪ್ರಶಸ್ತಿ ಗೆದ್ದ  ಅಮೆರಿಕದ ಸೋಕ್‌

11:30 AM Feb 28, 2017 | Harsha Rao |

ಮಯಾಮಿ: ಎದುರಾಳಿ ಮಿಲೋಸ್‌ ರಾನಿಕ್‌ ಗಾಯಾಳಾಗಿ ಹಿಂದೆ ಸರಿದುದರಿಂದ ಅಮೆರಿಕದ ಜಾಕ್‌ ಸೋಕ್‌ ಅವರಿಗೆ “ಡೆಲ್ರೆ ಬೀಚ್‌ ಓಪನ್‌’ ಟೆನಿಸ್‌ ಪ್ರಶಸ್ತಿ ಸುಲಭದಲ್ಲಿ ಒಲಿದಿದೆ. ಇದರೊಂದಿಗೆ ಅವರು ವರ್ಷದ 2ನೇ ಎಟಿಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Advertisement

ವಿಶ್ವದ 4ನೇ ರಾಂಕಿಂಗ್ ಟೆನಿಸಿಗ, ಈ ಕೂಟದ ಅಗ್ರ ಶ್ರೇಯಾಂಕದ ಕೆನಡಾ ಆಟಗಾರ ಮಿಲೋಸ್‌ ರಾನಿಕ್‌ ಕಳೆದೊಂದು ವರ್ಷದಿಂದ ನಿರಂತರ ವಾಗಿ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕುತ್ತ ಬಂದಿದ್ದಾರೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಬಳಿಕ ಅವರು ಆಡುತ್ತಿದ್ದ ಮೊದಲ ಟೂರ್ನಿ ಇದಾಗಿತ್ತು. ಆದರೂ ಇಲ್ಲಿ ಪರಿಪೂರ್ಣ ಫಿಟ್‌ನೆಸ್‌ ಹೊಂದಲು ಅವರಿಗೆ ಸಾಧ್ಯವಾಗಲಿಲ್ಲ. ಶನಿವಾರ ರಾತ್ರಿ ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ವಿರುದ್ಧ ಸೆಮಿಫೈನಲ್‌ ಆಡು ತ್ತಿದ್ದಾಗ ಮತ್ತೆ ಬಲಗಾಲಿನ ಸೆಳೆತಕ್ಕೊಳ ಗಾದರು. ಪಂದ್ಯವನ್ನು ಗೆದ್ದರೂ ಬಳಿಕ ಅವರಿಗೆ ನಡೆಯಲಿಕ್ಕೂ ಸಾಧ್ಯವಾಗಲಿಲ್ಲ. ಹೀಗಾಗಿ ಫೈನಲ್‌ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದರು. 

“ಇದು ನಿಜಕ್ಕೂ ದುರದೃಷ್ಟ. ನಾವಿಬ್ಬರೂ ಬಹಳಷ್ಟು ಪಂದ್ಯಗಳಲ್ಲಿ ಎದುರಾಗಿ ಉತ್ತಮ ಹೋರಾಟ ಪ್ರದ ರ್ಶಿಸಿದ್ದೇವೆ. ಫೈನಲ್‌ ಸವಾಲನ್ನು ನಾನು ಎದುರು ನೋಡುತ್ತಿದ್ದೆ…’ ಎಂಬುದಾಗಿ ವಿಜೇತ ಜಾಕ್‌ ಸೋಕ್‌ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಆಕ್ಲೆಂಡ್‌ ಟೆನಿಸ್‌ ಪ್ರಶಸ್ತಿ ಗೆದ್ದು ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next