Advertisement
ವದಂತಿಗಳ ಮೂಲವೇನು?
Related Articles
Advertisement
ಸಾವು
2016ರಲ್ಲಿ ಮತ್ತೂಂದು ಸುದ್ದಿ ಬಂದಿತ್ತು. ಆಗ ವ್ಲಾದಿಮಿರ್ ಪುತಿನ್ ಅವರು ಸತ್ತೇ ಹೋಗಿದ್ದಾರೆ. ಈಗ ಅವರ ಬದಲಿಗೆ ನಕಲಿ ವ್ಯಕ್ತಿ ಇದ್ದಾರೆ ಎಂಬೆಲ್ಲ ವದಂತಿಗಳು ಹರಿದಾಡಿದ್ದವು. ಇದಾದ ಮೇಲೆ ಪ್ರತೀ ವರ್ಷವೂ ಬಾಡಿ ಡಬಲ್ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇವೆ. ಪ್ರತೀ ಬಾರಿಯೂ ಪುತಿನ್‌ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಸುದ್ದಿ ಬಂದ ತತ್‌ಕ್ಷಣವೇ, ಈ ಬಾಡಿ ಡಬಲ್‌ನ ಸುದ್ದಿ ಮೇಲಾಟವಾಡುತ್ತದೆ. ಅಂದರೆ, ಪುತಿನ್‌ಅನಾರೋಗ್ಯಕ್ಕೀಡಾಗಿ, ಅವರ ಬದಲಿಗೆ ನಕಲಿ ಪುತಿನ್ ಹೊರಗೆ ಓಡಾಡುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತವೆ. ಅ.24ರ ಹೃದಯಾಘಾತ ಸುದ್ದಿಯ ವೇಳೆಯೂ ಇಂಥದ್ದೇ ಬಾಡಿ ಡಬಲ್ ಸುದ್ದಿ ಹೊರಬಿದ್ದಿತ್ತು.
ಪಾರ್ಕಿನ್ಸನ್ ರೋಗ
2018ರಲ್ಲಿ ಮೊದಲ ಬಾರಿಗೆ ಪುತಿನ್ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದಾರೆ ಎಂಬ ವದಂತಿ ಹೊರಬಿದ್ದಿತ್ತು. ಇದನ್ನು ರಷ್ಯಾ ಸಂಪೂರ್ಣವಾಗಿ ಅಲ್ಲಗೆಳೆದರೂ, ಈ ಸುದ್ದಿ ಈಗಲೂ ಹರಿದಾಡುತ್ತಿದೆ. ಪುತಿನ್‌ಗೆ ಸರಿಯಾಗಿ ನಡೆದಾಡಲು ಆಗುತ್ತಿಲ್ಲ, ಹಿಂದಿನದ್ದೇನೂ ಅವರಿಗೆ ಮಾಹಿತಿ ಇಲ್ಲ, ಶರೀರದ ಮೇಲೆ ನಿಯಂತ್ರಣ ಸಿಗುತ್ತಿಲ್ಲ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಲೇ ಇವೆ. ಅಷ್ಟೇ ಅಲ್ಲ, 2022ರಲ್ಲಿ ಪಾರ್ಕಿನ್ಸನ್ ಜತೆಗೆ, ಪುತಿನ್ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದು, ಹೊರಜಗತ್ತಿನ ಮುಂದೆ ಇರುವವರು ಪುತಿನ್‌ಅಲ್ಲವೇ ಅಲ್ಲ ಎಂಬ ಸುದ್ದಿಯೂ ಹೊರಬಿದ್ದಿತ್ತು. ಅಂದ ಹಾಗೆ, ರಷ್ಯಾ ಈ ಪಾರ್ಕಿನ್ಸನ್ ರೋಗದ ಸುದ್ದಿಯನ್ನು ವದಂತಿ ನಂ.1 ಎಂದು ಕರೆದಿದೆ. ಈ ರೋಗದಿಂದಲೇ ಅವರು ಮೆಟ್ಟಿಲುಗಳಿಂದ ಬಿದ್ದಿದ್ದರು ಎಂಬ ಮಾಹಿತಿಯನ್ನೂ ನೀಡಲಾಗಿತ್ತು.
ಸ್ವಿಟ್ಸ್‌ರ್ಲೆಂಡ್‌ನಲ್ಲಿ ಚಿಕಿತ್ಸೆ
2019ರ ಆರೋಗ್ಯದ ವದಂತಿ ಪ್ರಕಾರ, ಪುತಿನ್ ತೀವ್ರತರನಾದ ರೋಗದಿಂದ ಬಳಲುತ್ತಿದ್ದು, ಅವರನ್ನು ಸ್ವಿಟ್ಸ್‌ರ್ಲೆಂಡ್‌ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದನ್ನೂ ರಷ್ಯಾ ತಳ್ಳಿಹಾಕಿತ್ತು.
ಕೊರೊನಾ
ಜಗತ್ತಿಗೇ ಕೊರೊನಾ ಕಾಡುತ್ತಿದ್ದ ವೇಳೆಯಲ್ಲಿಯೂ ಪುತಿನ್ ಕುರಿತಾಗಿ ಹಲವಾರು ವದಂತಿಗಳು ಹಬ್ಬಿದ್ದವು. 2020ರಲ್ಲಿ ಪುತಿನ್‌ಗೆ ಕೊರೊನಾ ಬಂದಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಇದನ್ನು ರಷ್ಯಾ ತಳ್ಳಿಹಾಕಿತ್ತು. 2021ರಲ್ಲಿ ಪುತಿನ್ ಕೊರೊನಾ ಲಸಿಕೆ ಪಡೆಯುವ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ಪುತಿನ್ ಕೊರೊನಾ ಲಸಿಕೆ ಪಡೆಯುತ್ತಿಲ್ಲ ಎಂಬ ಸುದ್ದಿಯನ್ನು ತಳ್ಳಿಹಾಕಿದ್ದರು.
ಕ್ಯಾನ್ಸರ್ ಶಸ್ತ್ರಚಿಕಿತ್ಸೆ
2022ರಲ್ಲಿ ಪುತಿನ್‌ಗೆ ಶಸ್ತ್ರಚಿಕಿತ್ಸೆ ನಡೆದು ಕ್ಯಾನ್ಸರ್ ಗಡ್ಡೆ ತೆಗೆದುಹಾಕಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಇದನ್ನೂ ರಷ್ಯಾ ತಳ್ಳಿಹಾಕಿದ್ದು, ಕ್ಯಾನ್ಸರ್ ಇಲ್ಲವೆಂದಾದ ಮೇಲೆ ಆಪರೇಶನ್ ಮಾಡಿಸಿಕೊಳ್ಳುವುದು ಏತಕ್ಕೆ ಎಂದು ಪ್ರಶ್ನಿಸಿತ್ತು. ಇಂಥ ಸುದ್ದಿಗಳನ್ನು ನಂಬಬೇಡಿ ಎಂದೂ ಹೇಳಿತ್ತು.
ಸುಳ್ಳು ಸುದ್ದಿಗೆ ಸುಸ್ತಾದ ನಾಯಕರು
ಕಿಮ್ ಜಾಂಗ್ ಉನ್
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತಂತೆಯೂ ಪುತಿನ್ ರೀತಿಯಲ್ಲೇ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. 2014ರಲ್ಲಿ ಕಿಮ್ ಜಾಂಗ್ ಉನ್ ಹಲವಾರು ವಾರಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆಗ ಉನ್ ಆರೋಗ್ಯ ಬಿಗಡಾಯಿಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. 2020ರಲ್ಲೂ ಇಂಥದ್ದೇ ಸುದ್ದಿಗಳು ಕಾಣಿಸಿಕೊಂಡಿದ್ದವು. ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದು, ಸತ್ತೇ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಬಳಿಕ ಉತ್ತರ ಕೊರಿಯಾ ಸರಕಾರ ಈ ಸುದ್ದಿ ತಳ್ಳಿಹಾಕಿತ್ತು.
ಫಿಡೆಲ್ ಕ್ಯಾಸ್ಟ್ರೋ
2006ರಲ್ಲಿ ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆಗ ಇವರು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಕೊಂಚ ಕಾಲ ತಮ್ಮ ಸಹೋದರನಿಗೆ ಅಧಿಕಾರ ಹಸ್ತಾಂತರಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಸ್ಟ್ರೋ ಗಂಭೀರ ಕಾಯಿಲೆಗೆ ಒಳಗಾಗಿ, ಸತ್ತೇ ಹೋಗಿದ್ದಾರೆ ಎಂಬ ಸುದ್ದಿ ಹರಡಿದ್ದವು. ಬಳಿಕ ಇದು ಸುಳ್ಳು ಎಂದು ಸಾಬೀತಾಗಿತ್ತು. 2008ರಲ್ಲಿ ಆರೋಗ್ಯ ಕಾರಣದಿಂದಾಗಿಯೇ ತಮ್ಮ ಸಹೋದರನಿಗೆ ಕ್ಯಾಸ್ಟ್ರೋ ಅಧಿಕಾರ ಹಸ್ತಾಂತರಿಸಿದ್ದರು.