Advertisement

ಐದು ಟೊಮೆಟೋ ಕೊಳ್ಳಲು ಪೆಟ್ಟಿಗೆ ತುಂಬಾ ಹಣ!

08:53 PM Dec 08, 2019 | Team Udayavani |

ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಅಮೆರಿಕದ ವೆನಿಝುವೆಲಾ ದೇಶ. ಆರ್ಥಿಕತೆ ಹಳ್ಳ ಹಿಡಿದರೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ನಮ್ಮಲ್ಲಿ ಸರಕಿನ ಬೆಲೆ ಒಂದೆರಡು ರೂಪಾಯಿಗಳಷ್ಟು ಏರಿದರೂ ಹರತಾಳಗಳು ನಡೆಯುತ್ತವೆ. ವೆನಿಝುವೆಲಾದಲ್ಲಿ ಹಣದುಬ್ಬರದ ಹಾವಳಿ ವಿಪರೀತವಾಗಿಬಿಟ್ಟಿದೆ. ಇದನ್ನು ಹೈಪರ್‌ ಇನ್‌ಫ್ಲೇಷನ್‌ ಎಂದು ಕರೆಯಲಾಗುತ್ತದೆ.

Advertisement

ಅಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಎಷ್ಟು ಏರಿದೆ ಗೊತ್ತಾ? ಅಲ್ಲಿ 5 ಟೊಮೆಟೋಗಳ ಬೆಲೆ 50 ಲಕ್ಷ ಬೊಲಿವೆರ್‌ (ವೆನಿಝುವೆಲಾದ ಕರೆನ್ಸಿ). ಅಂದರೆ, ಒಂದು ಟೊಮೆಟೋ ಕೊಳ್ಳಬೇಕೆಂದರೂ ಗ್ರಾಹಕ ಪೆಟ್ಟಿಗೆಗಳ ತುಂಬಾ ಹಣದ ನೋಟುಗಳನ್ನು ಹೊತ್ತೂಯ್ಯಬೇಕು. ಅದು ಹೇಗೆ 50 ಲಕ್ಷಗಳ ಮಟ್ಟಕ್ಕೆ ಹೆಚ್ಚಿತು ಎನ್ನುವುದು ಅನೇಕರಿಗೆ ಅಚ್ಚರಿ ತರಬಹುದು. ಅದು ಹೇಗೆಂದರೆ ಅಲ್ಲಿನ ಕರೆನ್ಸಿ ತನ್ನ ಬೆಲೆಯನ್ನು ಕಳೆದುಕೊಂಡಿರುವುದೇ ಇದಕ್ಕೆಲ್ಲಾ ಕಾರಣ. ನಮ್ಮ ದೇಶದ ಒಂದು ರೂಪಾಯಿ, ಆ ದೇಶದಲ್ಲಿ 3,500 ಬೊಲಿವೆರ್‌ ಕಾಸಿಗೆ ಸಮನಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next