Advertisement

ಇದುವರೆಗೆ ಗದ್ದಲ; ಇನ್ನು 27ಕ್ಕೇ ಸಂಸತ್‌ ಕಲಾಪ

08:27 AM Dec 23, 2017 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ವಿಪಕ್ಷಗಳು ಪಟ್ಟು ಶುಕ್ರವಾರವೂ ಮುಂದುವರಿದಿದ್ದರಿಂದ, ಕಲಾಪವನ್ನು ಡಿ.27ರವರೆಗೆ ಮುಂದೂಡಲಾಗಿದೆ. ಸೋಮವಾರ  ಹಾಗೂ ಮಂಗಳವಾರ ಕ್ರಿಸ್‌ಮಸ್‌ ಪ್ರಯುಕ್ತ ರಜೆ ನೀಡಲಾಗಿದೆ. ಇನ್ನು ಕೇವಲ ಏಳು ದಿನಗಳವರೆಗೆ ಕಲಾಪ ನಡೆಯಲಿದೆ. ಗದ್ದಲದಿಂದಾಗಿ ಹೆಚ್ಚಿ ಮಸೂದೆಗಳು ಬಾಕಿ ಇವೆ.

Advertisement

ಲ್ಯಾಂಡ್‌ಲೈನ್‌ ಜತೆ ಜಾವಡೇಕರ್‌!: ಮೊಬೈಲ್‌ನ ರೇಡಿಯೇಶನ್‌ ತಪ್ಪಿಸಿ ಕೊಳ್ಳುವುದಕ್ಕಾಗಿ ಸದನಕ್ಕೆ ಲ್ಯಾಂಡ್‌ಲೈನ್‌ ಫೋನ್‌ ರಿಸೀವರ್‌ಅನ್ನು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಶುಕ್ರವಾರ ತಂದಿದ್ದರು. ಲ್ಯಾಂಡ್‌ಲೈನ್‌ ರಿಸೀವರನ್ನು ಮೊಬೈಲ್‌ಗೆ ಜೋಡಿಸಿ ಕೊಂಡು, ಫೋನ್‌  ಬಳಸುತ್ತಿದ್ದುದು ಗಮನ ಸೆಳೆಯಿತು. 

ಹೆಚ್ಚು  ವೇತನ ನೀಡಿ: ಸಂಸದರು ಹೆಚ್ಚಿನ ಅವಧಿಗೆ ಕೆಲಸ ಮಾಡುವುದ ರಿಂದ ಸಂಪುಟ ಕಾರ್ಯದರ್ಶಿಗಿಂತಲೂ ಹೆಚ್ಚಿನ ವೇತನವನ್ನು ನೀಡಬೇಕು. ಅಷ್ಟೇ ಅಲ್ಲ, ಸಂಬಳವನ್ನು ಏಳನೇ ವೇತನ ಆಯೋಗಕ್ಕೆ ಅನುಗುಣವಾಗಿರ ಬೇಕು ಎಂದು ರಾಜ್ಯಸಭೆ ಸದಸ್ಯ ನರೇಶ್‌ ಅಗರ್‌ವಾಲ್‌ ಹೇಳಿದರು. ಇವರ ಮಾತಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮ ದಾಸ್‌ ಅಠಾವಳೆ ಕೂಡ ಅನುಮೋದಿಸಿ ದರು. ಸದ್ಯ ಸಂಪುಟ ಕಾರ್ಯದರ್ಶಿಗೆ ಮಾಸಿಕ 2.50 ಲಕ್ಷ ರೂ. ವೇತನವಿದ್ದು, ಇದು ಪ್ರಧಾನಿ ಮತ್ತು ರಾಷ್ಟ್ರಪತಿ ಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಸಂಸದರಿಗೆ ಮಾಸಿಕ 50 ಸಾವಿರ ರೂ. ವೇತನ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next